ಲಕ್ನೋ(ಅ. 31) ಪ್ರತಿಯೊಂದು ಹಳ್ಳಿಯ ಜನರಿಗೂ ರಾಮಮಂದಿರ ಕರಸೇವೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂಧು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್  ಹೇಳಿದ್ದಾರೆ. ಕೊರೋನಾ ಮಾರಿ ಮುಗಿದ ನಂತರ ಎಲ್ಲರಿಗೂ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಚಿತ್ರಕೂಟ್ ಜಿಲ್ಲೆಯ ಲಾಲಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, 500 ವರ್ಷಗಳ ಕಾಯುವಿಕೆ  ನಂತರ ಭವ್ಯ ರಾಮಮಂದಿರ ನಿರ್ಮಾಣ ಕಾಲ ಕೂಡಿಬಂದಿದೆ.  ಭಕ್ತರಿಗೆ ದೇವಾಲಯ ಸದಾ ತೆರೆದಿರುತ್ತದೆ ಎಂದರು.

ರಾಮಮಂದಿರ ಹೇಗೆ ಇರಲಿದೆ?

ಚಿತ್ರಕೂಟದ ಮಹರ್ಷಿ ವಾಲ್ಮೀಕಿ ಆಶ್ರಮಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.  ಸಂತ ತುಳಸಿದಾಸ್ ವಾಲ್ಮೀಕಿಯ ತತ್ತ್ವವನ್ನು ಪ್ರತಿ ಮನೆಗೆ ರಾಮ್ ಕಥಾ ಮೂಲಕ ತಿಳಿಸಿಕೊಟ್ಟರು. ನಿಜವಾದ ರಾಮ ರಾಜ್ಯವೆಂದರೆ ಅಲ್ಲಿ ಜಾತಿ ಮತ್ತು ಪಂಥದ ತಾರತಮ್ಯವಿರುವುದಿಲ್ಲ ಎಂದರು.

ಚಿತ್ರಾಕೂಟದ ಜನರಿಗೆ ರಸ್ತೆ ಮತ್ತು ಕುಡಿಯುವ  ನೀರಿಗೆ ಆದ್ಯತೆ ನೀಡುತ್ತೇವೆ.  ಹೊಸ ಹೆದ್ದಾರಿಗಳನ್ನು ನಿರ್ಮಾಣ ಮಾಡುವ ಆಲೋಚನೆಯೂ ಸರ್ಕಾರದ ಮುಂದೆ ಇದೆ ಎಂದು ಯೋಗಿ ಹೇಳಿದರು.