Bathinda Panipat Face Extreme Air Pollution ಚಳಿಗಾಲ ಮತ್ತು ದೀಪಾವಳಿ ಪಟಾಕಿಗಳಿಂದಾಗಿ ದೇಶದ ಹಲವು ನಗರಗಳಲ್ಲಿ ವಾಯು ಮಾಲಿನ್ಯ ತೀವ್ರವಾಗಿ ಹೆಚ್ಚಾಗಿದೆ. ಪಂಜಾಬ್ನ ಬಟಿಂಡಾ ಮತ್ತು ಹರಿಯಾಣದ ಪಾಣಿಪತ್ ಅತ್ಯಂತ ಕಲುಷಿತ ನಗರಗಳಾಗಿದ್ದು, ದೆಹಲಿಯಲ್ಲೂ ಉಸಿರಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣ
ಚಳಿಗಾಲ, ದೀಪಾವಳಿ ಆರಂಭವಾಗುತ್ತಿದ್ದಂತೆ ದೇಶಾದ್ಯಂತ ಹಲವು ನಗರಗಳಲ್ಲಿನ ವಾಯು ಮಾಲಿನ್ಯ ಕೂಡ ಏರಿಕೆಯಾಗಿದೆ. ಒಂದು ಕಡೆ ಹೊಲದಲ್ಲಿ ಕಳೆ ಸುಡುವಿಕೆ, ಇನ್ನೊಂದೆಡೆ ದೀಪಾವಳಿ ಪಟಾಕಿ ಸುಡುವಿಕೆ ಅದರಿಂದ ಬರುವ ಹೊಗೆಯ ಪರಿಣಾಮವಾಗಿ ಗಾಳಿಯ ಗುಣಮಟ್ಟವನ್ನು ಹದಗೆಡಿಸಿದೆ. ಶುಕ್ರವಾರ ದೇಶಾದ್ಯಂತ 43 ನಗರಗಳು ಅಪಾಯಕಾರಿ ವಾಯು ಗುಣಮಟ್ಟದ ಮಟ್ಟವನ್ನು ದಾಖಲಿಸಿವೆ.
ಅವುಗಳಲ್ಲಿ ಮುಖ್ಯವಾಗಿ ಪಂಜಾಬ್ನ ಬಟಿಂಡಾದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 1069 ತುಂಬಾ ಅಪಾಯಕಾರಿ ಮಟ್ಟ ತಲುಪಿದೆ, ಇನ್ನು ಹರಿಯಾಣದ ಪಾಣಿಪತ್ನಲ್ಲೂ ಕೂಡ ಗಾಳಿಯ ಗುಣಮಟ್ಟದ ಸೂಚ್ಯಂಕ 1003 ದಾಖಲಾಗಿದೆ. ಈ ಎರಡೂ ನಗರಗಳು ದೇಶದ ಅತ್ಯಂತ ಕಲುಷಿತ ನಗರಗಳಲ್ಲಿ ಸ್ಥಾನ ಪಡೆದಿವೆ. ಅಷ್ಟೇ ಅಲ್ಲ ಉತ್ತರ ಪ್ರದೇಶ, ಹರಿಯಾಣದ ಕೆಲವು ನಗರಗಳು ಸಹ ಗಾಳಿಯ ಸೂಚ್ಯಂಕ ಹೆಚ್ಚಳವಾಗಿದೆ.
ದೇಶದ ಅತ್ಯಂತ ಕಲುಷಿತ ನಗ ಬಟಿಂಡಾ
ದೇಶದ ಅತ್ಯಂತ ಕಲುಷಿತ ನಗರಗಳಲ್ಲಿ ಬಟಿಂಡಾ 1069 AQI ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಾಣಿಪತ್ 1003 ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ಮೀರತ್ 961 AQI ಮೂರನೇ ಸ್ಥಾನದಲ್ಲಿದೆ. ಹರಿಯಾಣದ ಸಿರ್ಸಾದಲ್ಲಿ 938, ಸೋನಿಪತ್ನಲ್ಲಿ 917, ರೋಹ್ಟಕ್ನಲ್ಲಿ 847 AQI ದಾಖಲಾಗಿದೆ. ಇದಲ್ಲದೆ ಉತ್ತರ ಪ್ರದೇಶದ ಹಾಪುರ್ನಲ್ಲಿ 899, ಗಾಜಿಯಾಬಾದ್ನಲ್ಲಿ 844, ನೋಯ್ಡಾದಲ್ಲಿ 824 AQI ನಂತರದ ಸ್ಥಾನದಲ್ಲಿವೆ. ಹರಿಯಾಣದ ಫರಿದಾಬಾದ್ 821 AQI ಯೊಂದಿಗೆ ಹತ್ತನೇ ಸ್ಥಾನದಲ್ಲಿದೆ. ಒಟ್ಟಾರೆ ಈ ವರದಿಯಲ್ಲಿ ತಿಳಿಸಿದಂತೆ ಹರಿಯಾಣದ ಐದು ನಗರಗಳು ಮತ್ತು ಉತ್ತರ ಪ್ರದೇಶದ ನಾಲ್ಕು ನಗರಗಳು ಟಾಪ್ -10 ಕಲುಷಿತ ನಗರಗಳಲ್ಲಿ ಸೇರಿವೆ.
ದೆಹಲಿಯಲ್ಲಿ ಉಸಿರಾಡೋದೇ ಕಷ್ಟ!
ದೆಹಲಿ-ಎನ್ಸಿಆರ್(Delhi NCR) ಪ್ರದೇಶದ ನಗರಗಳು ಸಹ ಗಾಳಿಯ ಗುಣಮಟ್ಟ ಅತ್ಯಂತ ಕೆಟ್ಟದಾಗಿ ದೆಹಲಿಯಲ್ಲಿ ಉಸಿರಾಡೋದೆ ಕಷ್ಟವಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕದಲ್ಲಿ ಗ್ರೇಟರ್ ನೋಯ್ಡಾದಲ್ಲಿ 795, ನವದೆಹಲಿಯಲ್ಲಿ 729, ಗುರುಗ್ರಾಮ್ನ 647 ದಾಟಿದೆ. ಈ ಪ್ರಮಾಣದ ವಾಯು ಮಾಲೀನ್ಯದಿಂದ ಜನರ ಜೀವಕ್ಕೆ ಗಂಭೀರ ಆಪಾಯದ ಬಗ್ಗೆ ಕಳವಳ ವ್ಯಕ್ತವಾಗಿದೆ.
ದೆಹಲಿ-ಎನ್ಸಿಆರ್ನಲ್ಲಿ ಎರಡನೇ ಹಂತದ ಜಿಆರ್ಎಪಿ ಜಾರಿ
ಕಲುಷಿತ ಗಾಳಿ ಉಸಿರಾಡೋದರಿಂದ ಉಸಿರಾಟದ ತೊಂದರೆಗಳು ಉಂಟಾಗಬಹುದು. ಈಗಾಗಲೇ ಯಾವುದಾದರೂ ಉಸಿರಾಟ ಸಂಬಂಧ ಅನರೋಗ್ಯಕ್ಕೊಳಗಾಗಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಅದರಲ್ಲೂ ಮಕ್ಕಳು ಹಿರಿಯರ ಮೇಲೆ ಹೆಚ್ಚು ಪರಿಣಾಮ ಆಗುವ ಸಾಧ್ಯತೆಯಿದೆ.
ಈ ಕಾರಣಕ್ಕಾಗಿ ದೆಹಲಿ ಎನ್ಸಿಆರ್ ನಲ್ಲಿ ಎರಡನೇ ಹಂತದ ಶ್ರೀಣಿಕೃತ ಪ್ರತಿಕ್ರಿಯೆ ಕ್ರಿಯಾ ಯೊಜನೆ ಜಾರಿ ಮಾಡಲಾಗಿದೆ.
ವಾಯು ಮಾಲಿನ್ಯ ತಡೆಗೆ ಕಠಿಣ ಕ್ರಮ
ಧೂಳು ಮತ್ತು ವಾಹನ ಮಾಲಿನ್ಯದ ವಿರುದ್ಧ ಕಠಿಣ ಜರುಗಿಸಲು ಮುಂದಾಗಿದೆ. ಬೀದಿ ಶುಚಿಗೊಳಿಸುವುದು, ಧೂಳು ತುಂಬಿದರಸ್ತೆಗಳಿಗೆ ನೀರು ಸಿಂಪಡಿಸುವುದು ಖಾಸಗಿ ವಾಹನಗಳ ಕಡಿಮೆ ಬಳಕೆ, ಪಾರ್ಕಿಂಗ್ ಶುಲ್ಕ ಸಾರ್ವಜನಿಕ ಸಾರಿಗೆ ಸೇವೆ ಇನ್ನಷ್ಟೂ ಉತ್ತಮವಾಗಿ ನೀಡಲು ಸರ್ಕಾರ ಯತ್ನಿಸುತ್ತಿದೆ.
ದೀಪಾವಳಿಯ ಆಸುಪಾಸಿನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.
ಅಧಿಕಾರಿಗಳ ಪ್ರಕಾರ, ಹವಾಮಾನ ಮತ್ತು ಮಾಲಿನ್ಯ ಮುನ್ಸೂಚನೆಗಳು ಮುಂಬರುವ ದಿನಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಲಿದೆ ಎಂದು ಊಹಿಸಿವೆ. ಈ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಉತ್ತರ ಭಾರತದ ಪ್ರದೇಶಗಳಲ್ಲಿ ಮಾಲಿನ್ಯವು ಪ್ರತಿ ಚಳಿಗಾಲದಲ್ಲೂ ಹದಗೆಡುತ್ತದೆ ಮತ್ತು ದೀಪಾವಳಿಯ ಆಸುಪಾಸಿನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.
ದೇಶದಾದ್ಯಂತದ ಇತರ ಪ್ರಮುಖ ನಗರಗಳಲ್ಲಿನ ಮಾಲಿನ್ಯದ ಮಟ್ಟವು ಉತ್ತರ ಭಾರತಕ್ಕಿಂತ ಕಡಿಮೆಯಾಗಿದೆ. ಕೋಲ್ಕತ್ತಾ 204, ಮುಂಬೈ 172 ಮತ್ತು ಹೈದರಾಬಾದ್ 134 ಎಕ್ಯೂಐ ದಾಖಲಿಸಿದೆ. ಏತನ್ಮಧ್ಯೆ, ಚೆನ್ನೈನ ಎಕ್ಯೂಐ 85 ಆಗಿತ್ತು. ಹೀಗಾಗಿ, ಲಭ್ಯವಿರುವ ಮಾಹಿತಿಯ ಪ್ರಕಾರ, ಉತ್ತರ ಭಾರತದ ನಗರಗಳಲ್ಲಿ ವಾಯು ಮಾಲಿನ್ಯದ ಪರಿಣಾಮವು ಹೆಚ್ಚು ಗೋಚರಿಸುತ್ತದೆ.






