ರಾಜು ಶೆಟ್ಟಿ ನೇತೃತ್ವದ ರೈತರ 61 ಗಂಟೆಗಳ ಪ್ರತಿಭಟನೆಗೆ ಜಯ ಸಿಕ್ಕಿದ್ದು, ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹4,200 ನೀಡಲು ಒಪ್ಪಿವೆ. ಈ ಹಣವನ್ನು ಮೂರು ಕಂತುಗಳಲ್ಲಿ ಪಾವತಿಸಲಾಗುವುದು ಮತ್ತು ಹೆಚ್ಚುವರಿ ಲಾಭಾಂಶವನ್ನು ರೈತರಿಗೆ ಹಂಚಲಾಗುವುದು ಎಂದು ತೀರ್ಮಾನಿಸಲಾಗಿದೆ.
ಮಾಜಿ ಸಂಸದ ರಾಜು ಶೆಟ್ಟಿ ನೇತೃತ್ವದ ಮಹಾರಾಷ್ಟ್ರ 'ಸ್ವಾಭಿಮಾನಿ ಶೇತ್ಕರಿ ಸಂಘಟನೆ' ನಡೆಸಿದ ತೀವ್ರ ಹೋರಾಟಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ ₹4,200 ಪರಿಣಾಮಕಾರಿ ದರ ನೀಡಲು ಒಪ್ಪಿಕೊಂಡಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಿಣಿ ಟೋಲ್ ಪ್ಲಾಜಾ ಬಳಿ ರೈತರು ಸತತ 61 ಗಂಟೆಗಳ ಕಾಲ ನಡೆಸಿದ ರಸ್ತೆ ತಡೆ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಮೂರು ಹಂತದ ಪಾವತಿ ಸೂತ್ರ!
ಒಪ್ಪಂದದ ಪ್ರಕಾರ ₹4,200 ಹಣವನ್ನು ಮೂರು ಕಂತುಗಳಲ್ಲಿ ರೈತರಿಗೆ ಪಾವತಿಸಲಾಗುತ್ತದೆ. ಮೊದಲ ಕಂತು (ತಕ್ಷಣವೇ): ₹3,900 ನೀಡಲಾಗುತ್ತದೆ, ಎರಡನೇ ಕಂತು (ಹಂಗಾಮು ಮುಕ್ತಾಯದ ವೇಳೆ) ₹100, ಮೂರನೇ ಕಂತು (ಮುಂದಿನ ಹಂಗಾಮು ಆರಂಭಕ್ಕೆ ಮುನ್ನ) ₹200 ಖಾತೆಗೆ ನೀಡಲಾಗುತ್ತದೆ ಎಂದು ಸಭೆಯಲ್ಲಿ ತೀರ್ಮಾನವಾಗಿದೆ.
ಹೆಚ್ಚುವರಿ ಲಾಭಾಂಶದ ಬಂಪರ್ ಕೊಡುಗೆ!
ಮಾರುಕಟ್ಟೆಯಲ್ಲಿ ಸಕ್ಕರೆ ದರ ಕ್ವಿಂಟಾಲ್ಗೆ ₹4,500 ಕ್ಕಿಂತ ಹೆಚ್ಚಾದರೆ, ಅದರಿಂದ ಬರುವ ಹೆಚ್ಚುವರಿ ಲಾಭದಲ್ಲಿ ಶೇ. 70 ರಷ್ಟನ್ನು ನೇರವಾಗಿ ರೈತರಿಗೆ ಮತ್ತು ಶೇ. 30 ರಷ್ಟನ್ನು ಕಾರ್ಖನೆಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಕೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಒಪ್ಪಂದ ಏರ್ಪಟ್ಟ ತಕ್ಷಣ ರಾಜು ಶೆಟ್ಟಿಯವರು ಪ್ರತಿಭಟನೆಯನ್ನು ಹಿಂಪಡೆದಿದ್ದು, ಹೆದ್ದಾರಿ ಸಂಚಾರ ಸುಗಮಗೊಂಡಿದೆ. ನವೆಂಬರ್ 6 ರಂದು ಕರೆ ನೀಡಲಾಗಿದ್ದ 'ಕೊಲ್ಲಾಪುರ ಬಂದ್' ಅನ್ನು ಸಹ ರದ್ದುಗೊಳಿಸಲಾಗಿದೆ.
ಕಾರ್ಖಾನೆಗಳು ಪುನರಾರಂಭ!
ಈ ಒಪ್ಪಂದದ ಬೆನ್ನಲ್ಲೇ ಕೊಲ್ಲಾಪುರ, ಸಾಂಗಲಿ ಮತ್ತು ಸತಾರಾ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ ಹಂಗಾಮು ಇಂದಿನಿಂದ ಅಧಿಕೃತವಾಗಿ ಆರಂಭವಾಗುತ್ತಿದೆ. ಮಹಾರಾಷ್ಟ್ರದ ಈ ಐತಿಹಾಸಿಕ ನಿರ್ಧಾರದಿಂದಾಗಿ ಬೆಳಗಾವಿ ಮತ್ತು ಬಾಗಲಕೋಟೆ ಸೇರಿದಂತೆ ಕರ್ನಾಟಕದ ಗಡಿಭಾಗದಲ್ಲಿ ರೈತರ ಹೋರಾಟ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಕ್ಕರೆ ಕಾರ್ಖಾನೆಗಳು ಈ ಕುರಿತು ಏನು ಚಿಂತಿಸುತ್ತವೆಯೋ ಏನೋ ನೋಡಬೇಕಿದೆ.
ಐತಿಹಾಸಿಕ ಜಯ!
ಮಾಜಿ ಸಂಸದ ರಾಜು ಶೆಟ್ಟಿ ನೇತೃತ್ವದ 'ಸ್ವಾಭಿಮಾನಿ ಶೇತ್ಕರಿ ಸಂಘಟನೆ' ನಡೆಸಿದ ತೀವ್ರ ಹೋರಾಟಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ ₹4,200 ಪರಿಣಾಮಕಾರಿ ದರ ನೀಡಲು ಒಪ್ಪಿಕೊಂಡಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಿಣಿ ಟೋಲ್ ಪ್ಲಾಜಾ ಬಳಿ ರೈತರು ಸತತ 61 ಗಂಟೆಗಳ ಕಾಲ ನಡೆಸಿದ ರಸ್ತೆ ತಡೆ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಮೂರು ಹಂತದ ಪಾವತಿ ಸೂತ್ರ!
ಒಪ್ಪಂದದ ಪ್ರಕಾರ ₹4,200 ಹಣವನ್ನು ಮೂರು ಕಂತುಗಳಲ್ಲಿ ರೈತರಿಗೆ ಪಾವತಿಸಲಾಗುತ್ತದೆ.
ಮೊದಲ ಕಂತು (ತಕ್ಷಣವೇ): ₹3,900 ನೀಡಲಾಗುತ್ತದೆ, ಎರಡನೇ ಕಂತು (ಹಂಗಾಮು ಮುಕ್ತಾಯದ ವೇಳೆ) ₹100, ಮೂರನೇ ಕಂತು (ಮುಂದಿನ ಹಂಗಾಮು ಆರಂಭಕ್ಕೆ ಮುನ್ನ) ₹200 ಖಾತೆಗೆ ನೀಡಲಾಗುತ್ತದೆ ಎಂದು ಸಭೆಯಲ್ಲಿ ತೀರ್ಮಾನವಾಗಿದೆ.
ಹೆಚ್ಚುವರಿ ಲಾಭಾಂಶದ ಬಂಪರ್ ಕೊಡುಗೆ!
ಮಾರುಕಟ್ಟೆಯಲ್ಲಿ ಸಕ್ಕರೆ ದರ ಕ್ವಿಂಟಾಲ್ಗೆ ₹4,500 ಕ್ಕಿಂತ ಹೆಚ್ಚಾದರೆ, ಅದರಿಂದ ಬರುವ ಹೆಚ್ಚುವರಿ ಲಾಭದಲ್ಲಿ ಶೇ. 70 ರಷ್ಟನ್ನು ನೇರವಾಗಿ ರೈತರಿಗೆ ಮತ್ತು ಶೇ. 30 ರಷ್ಟನ್ನು ಕಾರ್ಖನೆಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಕೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಒಪ್ಪಂದ ಏರ್ಪಟ್ಟ ತಕ್ಷಣ ರಾಜು ಶೆಟ್ಟಿಯವರು ಪ್ರತಿಭಟನೆಯನ್ನು ಹಿಂಪಡೆದಿದ್ದು, ಹೆದ್ದಾರಿ ಸಂಚಾರ ಸುಗಮಗೊಂಡಿದೆ. ನವೆಂಬರ್ 6 ರಂದು ಕರೆ ನೀಡಲಾಗಿದ್ದ 'ಕೊಲ್ಲಾಪುರ ಬಂದ್' ಅನ್ನು ಸಹ ರದ್ದುಗೊಳಿಸಲಾಗಿದೆ.
ಕಾರ್ಖಾನೆಗಳು ಪುನರಾರಂಭ!
ಈ ಒಪ್ಪಂದದ ಬೆನ್ನಲ್ಲೇ ಕೊಲ್ಲಾಪುರ, ಸಾಂಗಲಿ ಮತ್ತು ಸತಾರಾ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ ಹಂಗಾಮು ಇಂದಿನಿಂದ ಅಧಿಕೃತವಾಗಿ ಆರಂಭವಾಗುತ್ತಿದೆ. ಮಹಾರಾಷ್ಟ್ರದ ಈ ಐತಿಹಾಸಿಕ ನಿರ್ಧಾರದಿಂದಾಗಿ ಬೆಳಗಾವಿ ಮತ್ತು ಬಾಗಲಕೋಟೆ ಸೇರಿದಂತೆ ಕರ್ನಾಟಕದ ಗಡಿಭಾಗದಲ್ಲಿ ರೈತರ ಹೋರಾಟ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಕ್ಕರೆ ಕಾರ್ಖಾನೆಗಳು ಈ ಕುರಿತು ಚಿಂತಿಸುತ್ತವೆಯೋ ಏನೋ ನೋಡಬೇಕಿದೆ.
ಮಣಿದ ಮಾಲೀಕರು!
ಆರಂಭದಲ್ಲಿ ರೈತರ ಬೇಡಿಕೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ರೈತರು ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಸ್ಥಗಿತಗೊಳಿಸಿ, ಕಟಾವು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ ಕಾರಣ ಮಾಲೀಕರು ಅನಿವಾರ್ಯವಾಗಿ ₹4,200 ದರದ ಸೂತ್ರಕ್ಕೆ ಒಪ್ಪಿಕೊಳ್ಳಬೇಕಾಯಿತು. ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಈ ರೈತ ಹೋರಾಟವು ತೀವ್ರ ಸ್ವರೂಪ ಪಡೆದುಕೊಂಡಿದ್ದು ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ನಡೆದ ಈ ಸಂಧಾನ ಯಶಸ್ವಿಯಾಗಿರುವುದು ಸದ್ಯ ಆಡಳಿತ ಪಕ್ಷಗಳಿಗೆ ನಿರಾಳತೆ ತಂದಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಹಲವೆಡೆ ಪೊಲೀಸರು ಮತ್ತು ರೈತರ ನಡುವೆ ಸಂಘರ್ಷ ನಡೆದಿತ್ತು, ಕಲ್ಲು ತೂರಾಟ ಮತ್ತು ಲಾಠಿಚಾರ್ಜ್ ಸಹ ವರದಿಯಾಗಿತ್ತು. ನೂರಾರು ರೈತರನ್ನು ಬಂಧಿಸಿದರೂ ಹೋರಾಟದ ತೀವ್ರತೆ ಕಮ್ಮಿಯಾಗದ ಕಾರಣ, ಅಂತಿಮವಾಗಿ ರೈತರ ಒಗ್ಗಟ್ಟಿನ ಶಕ್ತಿಗೆ ಜಯ ಸಿಕ್ಕಂತಾಗಿದೆ.






