ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪ್ರತಿಮೆಗೆ ಕೂಲಿಂಗ್ ಗ್ಲಾಸ್‌ ಹಾಕಿ ಅದರ ಚಿತ್ರ ತೆಗೆದು ಅವಮಾನ ಮಾಡಿದ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.

ಎರ್ನಾಕುಲಂ (ಡಿ.27): ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ನಾಯಕನೊಬ್ಬ ಮಹಾತ್ಮ ಗಾಂಧಿ ಪ್ರತಿಮೆಗೆ ಅವಮಾನಿಸಿರುವ ಘಟನೆ ನಡೆದಿದೆ. ಎಸ್‌ಎಫ್‌ಐ ಆಲುವಾ ಪ್ರದೇಶ ಸಮಿತಿಯ ಸದಸ್ಯ ಆದೀನ್ ನಾಸರ್ ಅವರು ಮಹಾತ್ಮ ಗಾಂಧಿ ಪ್ರತಿಮೆಗೆ ಕೂಲಿಂಗ್ ಗ್ಲಾಸ್ ಹಾಕಿ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅದರ ಚಿತ್ರವನ್ನಯ ತೆಗೆದಿದ್ದಾರೆ. ಅವರು ಚೂಂಡಿಯಲ್ಲಿರುವ ಭಾರತ ಮಾತಾ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್‌ನನ ಸ್ಟೂಡೆಂಟ್‌ ಯೂನಿಯನ್‌ನ ನಾಯಕರೂ ಆಗಿದ್ದಾರೆ. ಅವರು ಗಾಂಧಿ ಪ್ರತಿಮೆಗೆ ಕೂಲಿಂಗ್‌ ಗ್ಲಾಸ್‌ ಹಾಕುತ್ತಿರುವ ವಿಡಿಯೋವನ್ನು ಸೆರೆಹಿಡಿಯಲಾಗಿದ್ದು, ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದಕ್ಕೆ ಕೇರಳ ಸ್ಟೂಡೆಂಟ್‌ ಯೂನಿಯನ್‌ ಆಕ್ರೋಶ ವ್ಯಕ್ತಪಡಿಸಿದ್ದು, ಎಸ್‌ಎಫ್‌ಐ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಎಸ್‌ಯು ಪೊಲೀಸರಿಗೆ ದೂರು ನೀಡಿದೆ.

ಎಸ್‌ಎಫ್‌ಐ ನಾಯಕನ ಇಂತಹ ಕ್ರಮಗಳನ್ನು ಕಾನೂನಾತ್ಮಕವಾಗಿ ಪ್ರಶ್ನಿಸಬೇಕು ಎಂದು ಸಹ ವಿದ್ಯಾರ್ಥಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಿವಾದದ ಜೊತೆಗೆ, ಅದೀನ್ ನಾಸರ್ ಸರ್ಕಾರಿ ವಕೀಲರೊಬ್ಬರ ಪುತ್ರ ಎನ್ನುವುದು ಬಹಿರಂಗವಾಗಿದೆ. ಈ ಘಟನೆಯನ್ನು ಅವರೊಂದಿಗಿದ್ದವರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿದ ನಂತರ ಪ್ರತಿಕ್ರಿಯೆ ನೀಡುವುದಾಗಿ ಎಸ್‌ಎಫ್‌ಐ ಜಿಲ್ಲಾ ನಾಯಕತ್ವ ತಿಳಿಸಿದೆ.

ಆದೀನ್‌ ನಾಸರ್‌, ಮಹಾತ್ಮಾ ಗಾಂಧಿಜಿ ಮುಖದ ಮೇಲೆ ಕೂಲಿಂಗ್ ಗ್ಲಾಸ್ ಇಟ್ಟು ಚಿತ್ರ ತೆಗೆಯುತ್ತಿರುವ ದೃಶ್ಯಾವಳಿಯಲ್ಲಿದೆ. ಅದಲ್ಲದೆ, 'ಹೇಗಿದ್ರೂ ಗಾಂಧಿ ಸತ್ತಿದ್ದಾರೆ..' ಎಂದು ಹೇಳಿರುವ ಮಾತುಗಳೂ ವಿಡಿಯೋದಲ್ಲಿ ದಾಖಲಾಗಿದೆ. ಈ ದೃಶ್ಯವನ್ನು ಎಸ್‌ಎಫ್‌ಐ ಮುಖಂಡರೂ ಆಗಿರುವ ವಿದ್ಯಾರ್ಥಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಈ ದೃಶ್ಯಗಳು ವೈರಲ್ ಆದ ನಂತರ ಕೆಎಸ್‌ಯು ಗಾಂಧಿ ಪ್ರತಿಮೆಗೆ ಅವಮಾನ ಮಾಡಲಾಗಿದೆ ಎಂದು ಹೇಳಿದೆ. ನಾಯಕನ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು. ಏತನ್ಮಧ್ಯೆ, ಈ ಬಗ್ಗೆ ಎಸ್‌ಎಫ್‌ಐ ಮುಖಂಡರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೇಶ ನಡಿತಿರೋದು ಭಗವದ್ಗೀತೆ ಮೇಲೆ ಅಲ್ಲ, ಸಂವಿಧಾನದ ಮೇಲೆ: ಸಚಿವ ಪ್ರಿಯಾಂಕ್‌ ಖರ್ಗೆ

ದೂರನ್ನು ಸಲ್ಲಿಸಿರುವ ಕೆಎಸ್‌ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅಲ್ ಅಮೀನ್, ಎಸ್‌ಎಫ್‌ಐ ಮುಖಂಡ ರಾಷ್ಟ್ರಪಿತನನ್ನು ಸಾರ್ವಜನಿಕವಾಗಿ ಅವಮಾನಿಸಿದ್ದು ಮಾತ್ರವಲ್ಲದೆ ಅದರ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

'ಜ.22ಕ್ಕೆ ಬಾಬ್ರಿ ಮಸೀದಿ ವಾಪಾಸ್‌ ಬರಲಿ ಎಂದು ಅಲ್ಲಾನಿಗೆ ಪ್ರಾರ್ಥಿಸುವೆ..' I.N.D.I.A ಮೈತ್ರಿಯ ಸಂಸದನ ಹೇಳಿಕೆ!