Asianet Suvarna News Asianet Suvarna News

ಪೈಲ್ಸ್ ಸಮಸ್ಯೆಗೆ ರಜೆ ನೀಡಲು ಉದ್ಯೋಗಿ ಮನವಿ, ದಾಖಲೆ ಕೇಳಿದ ಮ್ಯಾನೇಜರ್‌ಗೆ ಶುರುವಾಯ್ತು ವಾಂತಿ!

ಉದ್ಯೋಗಿ ಏಕಾಏಕಿ ಮ್ಯಾನೇಜರ್‌ಗೆ ಕರೆ ಮಾಡಿ ಪೈಲ್ಸ್ ಆರೋಗ್ಯ ಸಮಸ್ಯೆಯಾಗಿದೆ. ಹೀಗಾಗಿ ರಜೆಗೆ ಮನವಿ ಮಾಡಿದ್ದಾನೆ. ಮೆಡಿಕಲ್ ಕಾರಣಕ್ಕೆ ರಜೆ ಪಡೆಯುತ್ತಿದ್ದರೆ ದಾಖಲೆ ಅತ್ಯವಶ್ಯಕ ಎಂದು ಮ್ಯಾನೇಜರ್ ಉತ್ತರಿಸಿದ್ದಾರೆ. ಇಷ್ಟೇ ನೋಡಿ ಫೋನ್ ಕೆಲವೇ ನಿಮಿಷದಲ್ಲಿ ವ್ಯಾಟ್ಸ್ಆ್ಯಪ್, ಇಮೇಲ್‌ಗೆ ಉದ್ಯೋಗಿ ದಾಖಲೆ ಕಳುಹಿಸಿದ್ದಾನೆ. ಈ ದಾಖಲೆ ನೋಡಿದ ಮ್ಯಾನೇಜರ್‌ಗೆ ಕಕ್ಕಾಬಿಕ್ಕಿಯಾಗಿದ್ದಾನೆ. ಇಷ್ಟೇ ಅಲ್ಲ ವಾಂತಿ ಶುರುವಾಗಿದೆ.

Employee send buttocks photo to manger who asked medical proof for piles reddit story ckm
Author
First Published Oct 20, 2024, 6:50 PM IST | Last Updated Oct 20, 2024, 6:50 PM IST

ಕಚೇರಿ ಹಾಗೂ ರಜೆ ಈ ವಿಚಾರದಲ್ಲಿ ಅದೆಷ್ಟು ಗಂಭೀರ ಘಟನೆಗಳು ನಡೆದಿದೆಯೋ ಅಷ್ಟೇ ತಮಾಷೆ ಘಟನೆಗಳು ನಡೆದಿದೆ. ಹೀಗಾಗಿ  ಬಾಸ್, ರಜೆ, ಕಚೇರಿ ವಿಚಾರವಾಗಿ ಹಲವು ಮೀಮ್ಸ್ ಹರಿದಾಡುತ್ತಲೇ ಇರುತ್ತದೆ. ಕೆಲ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಉದ್ಯೋಗಿಯೊಬ್ಬರು ಮ್ಯಾನೇಜರ್ ಬಳಿ ಪೈಲ್ಸ್ ಆರೋಗ್ಯ ಸಮಸ್ಯೆಗೆ ರಜೆ ಕೇಳಿದ್ದಾನೆ. ಆದರೆ ಮ್ಯಾನೇಜರ್ ಮೆಡಿಕಲ್ ಕಾರಣವಾಗಿರುವ ಕಾರಣ ದಾಖಲೆ ಅಗತ್ಯ. ಸುಖಾಸುಮ್ಮನೆ ಸಿಕ್ ಲೀವ್ ಹಾಕಲು ಸಾಧ್ಯವಿಲ್ಲ ಎಂದು ತಾಕೀತು ಮಾಡಿದ್ದಾರೆ. ಇಷ್ಟೇ ನೋಡಿ, ಉದ್ಯೋಗಿ ಮ್ಯಾನೇಜರ್‌ಗೆ ಕೆಲ ದಾಖಲೆಗಳನ್ನು ಇಮೇಲ್ ಹಾಗೂ ವ್ಯಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದಾನೆ. ಈ ವೈದ್ಯಕೀಯ ಪ್ರೂಫ್ ನೋಡಿದ ಮ್ಯಾನೇಜರ್‌ಗೆ ವಾಂತಿ ಶುರುವಾಗಿದೆ.

ಮ್ಯಾನೇಜರ್‌ಗೆ ದಾಖಲೆ ಕಳುಹಿಸಿ ರಜೆ ಪಡೆದ ಉದ್ಯೋಗಿ ಘಟನೆ ಕುರಿತು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.  ರೆಡ್ಡಿಟ್ ಪೋಸ್ಟ್ ಪ್ರಕಾರ ಉದ್ಯೋಗಿ ಮ್ಯಾನೇಜರ್‌ಗೆ ಕರೆ ಮಾಡಿದ್ದಾನೆ. ಬಳಿಕ ಆರೋಗ್ಯ ಸಮಸ್ಯೆ ಇದೆ, ಹೀಗಾಗಿ ರಜೆಗೆ ಮನವಿ ಮಾಡಿದ್ದಾನೆ. ಆದರೆ ಸುಖಾಸುಮ್ಮನೆ ಆರೋಗ್ಯ ಸಮಸ್ಯೆ ಇದೆ ಎಂದರೆ ರಜೆ ನೀಡಲು ಸಾಧ್ಯವಿಲ್ಲ. ನೈಜ ಕಾರಣ ಇರಬೇಕು. ಮೆಡಿಕಲ್ ಪ್ರೂಫ್ ಇರಬೇಕು ಎಂದಿದ್ದಾರೆ. ಸಾಮಾನ್ಯವಾಗಿ ಜ್ವರ, ಕೆಮ್ಮು, ತಲೆನೋವು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಎಲ್ಲರು ಹೇಳುತ್ತಾರೆ. ಆದರೆ ಪೈಲ್ಸ್ ಸಮಸ್ಯೆಯನ್ನು ಹೇಳಿಕೊಳ್ಳುವುದು ಕಡಿಮೆ.

ಮೆಟರ್ನಿಟಿ ರಜೆ ಬಳಿಕ ಮತ್ತೆ ಗರ್ಭಿಣಿಯಾದ ಉದ್ಯೋಗಿ ವಜಾ, ಕಂಪನಿಗೆ 31 ಲಕ್ಷ ರೂ ದಂಡ!

ಹೀಗಾಗಿ ಉದ್ಯೋಗಿ ತನಗೆ ಆಗಿರುವ ಪೈಲ್ಸ್ ಸಮಸ್ಯೆಯನ್ನು ಹೇಳದೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾನೆ. ಸಿಕ್ ಲೀವ್ ಅನುಮತಿಸಬೇಕಾದ ಮ್ಯಾನೇಜರ್, ಮೆಡಿಕಲ್ ಪ್ರೂಫ್ ಕೇಳಿದ್ದಾರೆ. ಹೀಗಾಗಿ ಮ್ಯಾನೇಜರ್‌ಗೆ ಮೆಡಿಕಲ್ ಪ್ರೂಫ್‌ ನೀಡಲು ಬಟ್ಟೆ ಬಿಚ್ಚಿ ಪೃಷ್ಠದ ಫೋಟೋವನ್ನು ತೆಗೆದು ಮ್ಯಾನೇಜರ್‌ಗೆ ಕಳುಹಿಸಿದ್ದಾನೆ.

ಇಮೇಲ್ ಹಾಗೂ ವ್ಯಾಟ್ಸ್ಆ್ಯಪ್ ಮೂಲಕ ಫೋಟೋ ಕಳುಹಿಸಿದ ಉದ್ಯೋಗಿ ನಿರಾಳನಾಗಿದ್ದಾನೆ. ಬಾಸ್ ಕೇಳಿದ ದಾಖಲೆ ನೀಡಿದ್ದೇನೆ ಎಂದು ವಿಶ್ರಾಂತಿಗೆ ಜಾರಿದ್ದಾನೆ. ಆದರೆ ಪೈಲ್ಸ್ ಸಮಸ್ಯೆಯ ಪೃಷ್ಠದ ಫೋಟೋ ನೋಡಿದ ಮ್ಯಾನೇಜರ್‌ಗೆ ವಾಕರಿಕೆ ಬಂದಿದೆ. ಮ್ಯಾನೇಜರ್ ಪಿತ್ತ ನೆತ್ತಿಗೇರಿದೆ. ನೇರವಾಗಿ ಹೆಚ್‌ಆರ್‌ಗೆ ಮಾಹಿತಿ ನೀಡಿದ ಮ್ಯಾನೇಜರ್ ಉದ್ಯೋಗಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.  ಇತ್ತ ಹೆಚ್ಆರ್ ಉದ್ಯೋಗಿಗೆ ಕರೆ ಮಾಡಿ ಕಂಪನಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ವಾರ್ನಿಂಗ್ ನೀಡಿದ್ದಾರೆ. 

ಈ ಕುರಿತು ಉದ್ಯೋಗಿ ನಾನೇನು ತಪ್ಪು ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ದಾಖಲೆ ನೀಡಿದ್ದೇನೆ. ಸಿಕ್ ಲೀವ್ ಎಂದಾಗ ಮೆಡಿಕಲ್ ಪ್ರೂಫ್ ಕೆೇಳಿದ್ದು ತಪ್ಪೇ? ಅಥವಾ ನನ್ನ ಸಮಸ್ಯೆ ಹೇಳಿಕೊಂಡಿದ್ದು ತಪ್ಪೆ? ಎಂದು ಉದ್ಯೋಗಿ ರೆಡ್ಡಿಟ್‌ನಲ್ಲಿ ಪ್ರಶ್ನಿಸಿದ್ದಾನೆ.

ಸಿಕ್ ಲೀವ್ ನಿರಾಕರಿಸಿದ ಬಾಸ್, ಆಫೀಸ್‌ಗೆ ಬಂದ 20 ನಿಮಿಷದಲ್ಲಿ ಕುಸಿದು ಬಿದ್ದು ಉದ್ಯೋಗಿ ಸಾವು!
 

Latest Videos
Follow Us:
Download App:
  • android
  • ios