ಸಿಕ್ ಲೀವ್ ನಿರಾಕರಿಸಿದ ಬಾಸ್, ಆಫೀಸ್‌ಗೆ ಬಂದ 20 ನಿಮಿಷದಲ್ಲಿ ಕುಸಿದು ಬಿದ್ದು ಉದ್ಯೋಗಿ ಸಾವು!
ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದ ಮಹಿಳಾ ಉದ್ಯೋಗಿ ಬಿಡುಗಡೆಯಾದ ಬೆನ್ನಲ್ಲೇ ಚೇತರಿಕೆಗಾಗಿ ಸಿಕ್ ಲೀವ್ ವಿಸ್ತರಿಸಲು ಮನವಿ ಮಾಡಿದ್ದಾಳೆ. ಆದರೆ ಬಾಸ್ ರಜೆ ನಿರಾಕರಿಸಿದ್ದಾರೆ. ಮರುದಿನ ಕೆಲಸಕ್ಕಾಗಿ ಕಚೇರಿಗೆ ಆಗಮಿಸಿದ ಉದ್ಯೋಗಿ 20 ನಿಮಿಷದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸಮುತ್ ಪ್ರಕಾನ್(ಸೆ.27) ಕಚೇರಿಗಳಲ್ಲಿ ಉದ್ಯೋಗಿಗಳಿಗೆ ಉಸಿರುಗಟ್ಟುವ ವಾತಾವರಣ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇವೈ ಕಚೇರಿ ಮಹಿಳಾ ಉದ್ಯೋಗಿ ಸಾವು ಪ್ರಕರಣದಿಂದ ಭಾರತದಲ್ಲಿ ಟಾಕ್ಸಿಕ್ ಕೆಲಸದ ಕುರಿತು ಆಕ್ರೋಶ, ಟೀಕೆಗಳು ಹೆಚ್ಚಾಗುತ್ತಿದೆ. ಇದೀಗ ವಿಶ್ವದಲ್ಲೇ ಈ ರೀತಿ ಕೆಲಸದ ಒತ್ತಡ, ಬಿಡುವಿಲ್ಲದ ಕೆಲಸಗಳ ಕುರಿತು ಹಲವು ದಿಗ್ಗಜರು ಧ್ವನಿ ಎತ್ತಿದ್ದಾರೆ. ಇದರ ನಡುವೆ ಮತ್ತೊಂದು ಘಟನೆ ವರದಿಯಾಗಿದೆ. ಅನಾರೋಗ್ಯದ ಮಹಿಳಾ ಉದ್ಯೋಗಿಗೆ ಮ್ಯಾನೇಜರ್ ವಿಶ್ರಾಂತಿಗಾಗಿ ರಜೆ ನಿರಾಕರಿಸಿದ್ದಾರೆ. ಇದರ ಪರಿಣಾಮ ಕೆಲಸಕ್ಕಾಗಿ ಕಚೇರಿಗೆ ಆಗಮಿಸಿದ ಮಹಿಳಾ ಉದ್ಯೋಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದೆ.
ಮಹಿಳಾ ಉದ್ಯೋಗಿ ಹೆಸರು ಮೆ. ಸಮುತ್ ಪ್ರಕಾನ್ ಪ್ರಾಂತ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತೀ ದೊಡ್ಡ ಡೆಲ್ಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಮಹಿಳಾ ಉದ್ಯೋಗಿ ಮೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಹೀಗಾಗಿ ದಿಢೀರ್ ಆಸ್ಪತ್ರೆ ದಾಖಲಾಗಿದ್ದಾಳೆ. ಸೆಪ್ಟೆಂಬರ್ 5 ರಂದು ಆಸ್ಪತ್ರೆ ದಾಖಲಾದ ಮೆ, ಆರೋಗ್ಯ ಸಂಪೂರ್ಣ ಕ್ಷೀಣಿಸಿತ್ತು. ಹೀಗಾಗಿ ಸೆಪ್ಟೆಂಬರ್ 9ರ ವರೆಗೆ ಉದ್ಯೋಗಿ ಮೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ.
ಈ ಕಂಪನಿಯಲ್ಲಿ ಸ್ಮೋಕ್ ಮಾಡದ ಉದ್ಯೋಗಿಗಳಿಗೆ ಸಿಗಲಿದೆ ಹೆಚ್ಚುವರಿ 6 ರಜೆ!
9 ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಉದ್ಯೋಗಿ ಮನೆಗೆ ಮರಳಿದ್ದಾಳೆ. ಆದರೆ ಕೆಲಸದ ಒತ್ತಡದ ಕಾರಣ ಸಿಕ್ ಲೀವ್ 3 ದಿನ ವಿಸ್ತರಿಸಲು ಮನವಿ ಮಾಡಿಕೊಂಡಿದ್ದಾಳೆ. ಸೆಪ್ಟೆಂಬರ್ 9 ರಿಂದ 12ರ ವರೆಗೆ ಮನೆಯಲ್ಲಿ ವಿಶ್ರಾಂತಿ ಪಡೆದ ಮೆ ಚೇತರಿಸಿಕೊಂಡಿಲ್ಲ. ಎದ್ದು ನಡೆದಾಡಲು ಶಕ್ತಿ ಇಲ್ಲದಾಗಿದೆ.
ಅನಿವಾರ್ಯವಾಗಿ ಮತ್ತೆ 3 ದಿನಗಳ ಕಾಲ ಅನಾರೋಗ್ಯ ರಜೆ ವಿಸ್ತರಿಸಲು ಮ್ಯಾನೇಜರ್‌ಗೆ ಮನವಿ ಮಾಡಿದ್ದಾಳೆ. ಆದರೆ ಇದಕ್ಕೆ ಮ್ಯಾನೇಜರ್ ಒಪ್ಪಿಲ್ಲ. ಸೆಪ್ಟೆಂಬರ್ 5 ರಿಂದ ರಡೆ ಪಡೆಯಲಾಗಿದೆ. ಸೆಪ್ಟೆಂಬರ್ 9ಕ್ಕೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ರಜೆ ವಿಸ್ತರಿಸಲಾಗಿದೆ. ಇದೀಗ ಸೆಪ್ಟೆಂಬರ್ 12. ಮತ್ತೆ ರಜೆ ವಿಸ್ತರಿಸಲು ಸಾಧ್ಯವಿಲ್ಲ. ವೈದ್ಯರು ವಿಶ್ರಾಂತಿಗೆ ಸೂಚಿಲ್ಲ. ಇದಕ್ಕಾಗಿ ಯಾವುದೇ ಮೆಡಿಕಲ್ ಸರ್ಟಿಫಿಕೇಟ್ ನೀಡಿಲ್ಲ. ಹೀಗಾಗಿ ನಾಳೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.
ಸಂಪೂರ್ಣ ಚೇತರಿಸಿಕೊಳ್ಳದ ಮಹಿಳಾ ಉದ್ಯೋಗಿ ಬೇರೆ ದಾರಿ ಇಲ್ಲದೆ ಸೆ.13ರಂದು ಬೆಳಗ್ಗೆ ಕೆಲಸಕ್ಕಾಗಿ ಕಚೇರಿಗೆ ತೆರಳಿದ್ದಾಳೆ. ಕಚೇರಿಗೆ ಆಗಮಿಸಿದ 20 ನಿಮಿಷದಲ್ಲಿ ಮಹಿಳಾ ಉದ್ಯೋಗಿ ಕಚೇರಿಯಲ್ಲಿ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಈ ಘಟನೆ ಇತರ ಉದ್ಯೋಗಿಗಳ ಆಕ್ರೋಶಕ್ಕೂ ಕಾರಣವಾಗಿದೆ.
ನಿಮ್ಮ ಮಕ್ಕಳು ನಮ್ಮ ಉದ್ಯೋಗಿಗಳಲ್ಲ ಅವರ ಆರೋಗ್ಯಕ್ಕಾಗಿ ಸಿಕ್ ಲೀವ್ ಸಾಧ್ಯವಿಲ್ಲ; ಕಂಪನಿ ವಿವಾದ!
ಈ ಮಾಹಿತಿ ತಿಳಿಯುತ್ತಿದ್ದಂತೆ ಡೆಲ್ಟಾ ಕಂಪನಿ ಪ್ರತಿಕ್ರಿಯೆ ನೀಡಿದೆ. ನಮ್ಮಕಂಪನಿಯ ಯಶಸ್ಸು ಉದ್ಯೋಗಿಗಳು. ಮೃತ ಉದ್ಯೋಗಿಯ ಕುಟುಬದ ಜೊತೆ ಕಂಪನಿ ನಿಲ್ಲಲಿದೆ. ಎಲ್ಲಾ ನೆರವು ನೀಡುತ್ತೇವೆ. ಈ ಘಟನೆ ನಮಗೆ ಆಘಾತ ತಂದಿದೆ. ಹೀಗಾಗಿ ತನಿಖೆಗೆ ಆದೇಶ ನೀಡಲಾಗಿದೆ. ಪಾರದರ್ಶಕವಾಗಿ ತನಿಖೆ ಮಾಡುತ್ತೇವೆ ಎಂದು ಕಂಪನಿ ಹೇಳಿದೆ. ಈ ಘಟನೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಹಲವು ಕಂಪನಿಗಳು ಈ ರೀತಿ ಉದ್ಯೋಗಿಗಳನ್ನು ದುಡಿಸಿಕೊಳ್ಳುತ್ತಿದೆ. ಇಂತಹ ಸಂಸ್ಕೃತಿಗೆ ಅಂತ್ಯ ಹಾಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಒಬ್ಬ ಉದ್ಯೋಗಿ ಸಿಕ್ ಲೀವ್‌ಗೆ ಮನವಿ ಮಾಡಿದರೆ ನಿರಾಕರಿಸಬಾರದು ಎಂದು ಹಲವರು ಸಲಹೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ಈ ಘಟನೆ ಕುರಿತು ಚರ್ಚೆಯಾಗುತ್ತಿದೆ. ಹಲವು ಕಂಪನಿಗಳು ಈ ರೀತಿಯ ಮೃಗೀಯ ವರ್ತನೆಯಿಂದ ಉದ್ಯೋಗಿಗಳ ಆರೋಗ್ಯ ನಶಿಸುತ್ತಿದೆ. ಹಲವು ಗಂಭೀರ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.