ಪಿಎಂ ಆವಾಸ್ ಹಣ ಬರ್ತಿದ್ದಂತೆ ಗಂಡಂದಿರಿಗೆ ಗುಡ್ ಬೈ ಹೇಳಿ 11 ಮಹಿಳೆಯರು ಜೂಟ್
ಪಿಎಂ ಆವಾಸ್ ಯೋಜನೆಯ ಹಣ ಬರುತ್ತಿದ್ದಂತೆ 11 ಮಹಿಳೆಯರು ಗಂಡನಿಗೆ ಕೈ ಕೊಟ್ಟು, ಪ್ರೇಮಿಗಳ ಜೊತೆ ಜೂಟ್ ಆಗಿದ್ದಾರೆ. ಮುಂದಿನ ಕಂತು ಪತ್ನಿ ಖಾತೆಗೆ ಜಮೆ ಮಾಡದಂತೆ ನೊಂದ ಪುರುಷರು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಮಹಾರಾಜಾಗಂಜ್: ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ (Maharajaganj, Uttar Pradesh) ನಿಚ್ಲಾಲ್ ಬ್ಲಾಕ್ ಪ್ರದೇಶದ ವಿವಿಧ ಗ್ರಾಮಗಳಲ್ಲಿ 11 ಮಹಿಳೆಯರು (Woman Elopes) ಪರಾರಿಯಾಗಿದ್ದಾರೆ. 11 ಮಹಿಳೆಯರು ಪತಿಯನ್ನು ಬಿಟ್ಟು, ಪ್ರೇಮಿಗಳ ಜೊತೆ ಎಸ್ಕೇಪ್ ಆಗಿದ್ದಾರೆ ಎಂದು ವರದಿಯಾಗಿದೆ. ಏಕಕಾಲದಲ್ಲಿ ಇಷ್ಟೊಂದು ಮಹಿಳೆಯರು (Women Missing) ನಾಪತ್ತೆಯಾಗಿರೋದರಿಂದ ಈ ಭಾಗದಲ್ಲಿ ಸಂಚಲನ ಸೃಷ್ಟಿಯಾಗಿದೆ. ಆದ್ರೆ ಎಲ್ಲಾ 11 ಪ್ರಕರಣಗಳಲ್ಲಿ ಸಾಮ್ಯತೆ ಇದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪಿಎಂ ಆವಾಸ್ ಯೋಜನೆಯ (PM Awas Scheme) ಮೊದಲ ಕಂತು 40 ಸಾವಿರ ರೂಪಾಯಿ ಜಮೆ ಆಗುತ್ತಿದ್ದಂತೆ ಮಹಿಳೆಯರು ಮನೆಯಿಂದ ಹೊರಗೆ ಹೆಜ್ಜೆ ಇರಿಸಿದ್ದಾರೆ.
ನಗರ ಪ್ರದೇಶದಲ್ಲಿ ನಿವಾಸಿಗಳಿಗೆ ಅಂದ್ರೆ ಸ್ವಂತ ಸೂರಿಲ್ಲದ ಕುಟುಂಬಗಳಿಗೆ ಸರ್ಕಾರ ಮನೆ ನಿರ್ಮಾಣಕ್ಕೆ ಹಂತ ಹಂತವಾಗಿ ಕಂತುಗಳ ರೂಪದಲ್ಲಿ ಹಣ ಬಿಡುಗಡೆ ಮಾಡುತ್ತದೆ. ಈ ಹಣ ಮನೆಯ ಮಹಿಳಾ ಸದಸ್ಯರ ಖಾತೆಗೆ ಮಾತ್ರ ಜಮೆ ಮಾಡಲಾಗುತ್ತದೆ. ಇದೀಗ ಹಣ ಬರುತ್ತಿದ್ದಂತೆ ಮಹಿಳೆಯರು ತಮ್ಮ ಪ್ರೇಮಿಗಳ ಜೊತೆ ಪಲಾಯನ ಆಗುತ್ತಿದ್ದಾರೆ. ನಾಪತ್ತೆಯಾಗಿರುವ ಮಹಿಳೆಯರ ಗಂಡಂದಿರು ಪತ್ನಿ ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಸಂಬಂಧಿತ ಇಲಾಖೆಗೆ ತೆರಳಿ ಪಿಎಂ ಆವಾಸ್ ಯೋಜನೆಯ ಎರಡನೇ ಕಂತನ್ನು ಪತ್ನಿಯರ ಖಾತೆಗೆ ಜಮೆ ಮಾಡದಂತೆ ಮನವಿಯನ್ನು ಸಹ ಸಲ್ಲಿಸುತ್ತಿದ್ದಾರೆ.
ತಡರಾತ್ರಿ ಸ್ನೇಹಿತೆಯ ಕೋಣೆಗೆ ನುಗ್ಗಿದ್ದ 15ರ ಬಾಲಕನ ಪ್ರಾಣ ಹೋಗಿದ್ದೇಗೆ? ಇಬ್ಬರ ಬಂಧನ
ನಿಚ್ಲಾಲ್ ಬ್ಲಾಕ್‌ನಲ್ಲಿ ಪಿಎಂ ಆವಾಸ ಯೋಜನೆಯ 2,350 ಮಹಿಳಾ ಫಲಾನುಭವಿಗಳಿದ್ದಾರೆ. ಈಗಾಗಲೇ ಈ ವಿಭಾಗದ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಜಮೆ ಮಾಡಲಾಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಮನೆ ನಿರ್ಮಾಣಕ್ಕಾಗಿಯೇ ಬಳಸಬೇಕು. ಒಂದು ವೇಳೆ ಅನ್ಯ ಕೆಲಸಕ್ಕೆ ಹಣ ಬಳಕೆಯಾಗಿರೋದು ಕಂಡು ಬಂದ್ರೆ ಅಧಿಕಾರಿಗಳು ಪಡೆದುಕೊಂಡು ಮೊತ್ತವನ್ನು ವಸೂಲಿ ಮಾಡುತ್ತಾರೆ. ಪತ್ನಿಯರು ಹಣದ ಜೊತೆ ಪರಾರಿಯಾಗಿರುವ ಕಾರಣ ಕೆಲವರ ಮನೆ ನಿರ್ಮಾಣ ಸ್ಥಗಿತಗೊಂಡಿದೆ. ಇದೀಗ ಅಂತಹವರಿಂದ ಹಣ ವಸೂಲಿ ಮಾಡಲು ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಮದುವೆ ಆಯ್ತು, ಫಸ್ಟ್‌ನೈಟ್‌ಗೂ ರೂಮ್ ಡೆಕೋರೇಟ್ ಆಗಿತ್ತು; ದುಃಖದಲ್ಲಿಯೇ ಇಡೀ ರಾತ್ರಿ ಕಳೆದ ವರ!