Asianet Suvarna News Asianet Suvarna News

ಮದುವೆ ಆಯ್ತು, ಫಸ್ಟ್‌ನೈಟ್‌ಗೂ ರೂಮ್ ಡೆಕೋರೇಟ್ ಆಗಿತ್ತು; ದುಃಖದಲ್ಲಿಯೇ ಇಡೀ ರಾತ್ರಿ ಕಳೆದ ವರ!

ಮದುವೆಗೆ ಎರಡೂ ಕಡೆಯಿಂದ ನೂರಕ್ಕೂ ಅಧಿಕ ಜನರು ಭಾಗಿಯಾಗಿ ನವದಂಪತಿಗೆ ಶುಭ ಹಾರೈಸಿದ್ದರು. ಮದುವೆಯಲ್ಲಿ ವಧು ಮತ್ತು ವರ ಖುಷಿ ಖಷಿಯಾಗಿಯೇ ಇದ್ದರು. 

bride elope with gold jewelery and cash groom filed complaint  mrq
Author
First Published Jul 6, 2024, 7:23 PM IST | Last Updated Jul 6, 2024, 7:23 PM IST

ಜೈಪುರ: ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ತನ್ನ ಫಸ್ಟ್‌ನೈಟ್ ದಿನವೇ ವಧು ಎಸ್ಕೇಪ್ ಆಗಿದ್ದಾಳೆ. ವಧು ಎಸ್ಕೇಪ್ ಆಗಿದ್ದು, ಇತ್ತ ವರ ಪೊಲೀಸ್ ಠಾಣೆ ಮತ್ತು ಕೋರ್ಟ್‌ಗೆ ಅಲೆಯುತ್ತಿದ್ದಾನೆ. ಅತ್ತೆ-ಮಾವನ ಮನೆಗೂ ಹೋದರೆ ಅಲ್ಲಿಯೂ ಯುವಕನನ್ನು ಓಡಿಸಲಾಗುತ್ತದೆ. ಕೊನೆಗೆ ನ್ಯಾಯಾಲಯದ ಮಧ್ಯಪ್ರವೇಶದ ನಂತರ ಸಿರೋಹಿ ಜಿಲ್ಲೆಯ ರೇವದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕೆಲ ದಿನಗಳ ಹಿಂದೆ ವಿಕ್ರಂ ಎಂಬ ಯುವಕನ ಮದುವೆಯಾಗಿತ್ತು. ಕುಟುಂಬಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲಿಯೇ ವಿಕ್ರಂ ಮದುವೆ ನಡೆದಿತ್ತು. ವಧು ಕುಟುಂಬಸ್ಥರು ಬಡವರು ಎಂದು ಹೇಳಿ ವಿಕ್ರಂ ಕಡೆಯಿಂದ ಆಕೆಗೆ 3 ಲಕ್ಷ ರೂಪಾಯಿ ಕೊಡಿಸಲಾಗಿತ್ತು. 3 ಲಕ್ಷ ರೂ. ನಗದು ನೀಡಿದ್ದ ವಿಕ್ರಂ, ಪತ್ನಿಗಾಗಿ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಸಹ ಮಾಡಿಸಿಕೊಟ್ಟಿದ್ದನು. ಮದುವೆಗೆ ಎರಡೂ ಕಡೆಯಿಂದ ನೂರಕ್ಕೂ ಅಧಿಕ ಜನರು ಭಾಗಿಯಾಗಿ ನವದಂಪತಿಗೆ ಶುಭ ಹಾರೈಸಿದ್ದರು. ಮದುವೆಯಲ್ಲಿ ವಧು ಮತ್ತು ವರ ಖುಷಿ ಖಷಿಯಾಗಿಯೇ ಇದ್ದರು. 

ಆರು ದಿನ ವ್ರತ ಎಂದ ವಧು

ಮದುವೆ ಬಳಿಕ ವಿಕ್ರಂ ಮನೆಗೆ ಬಂದ ವಧು, ನಾನು ವ್ರತಾಚರಣೆಯಲ್ಲಿದ್ದು, ಅದು ಪೂರ್ಣವಾಗೋವರೆಗೂ ಫಸ್ಟ್‌ನೈಟ್ ಮಾಡಿಕೊಳ್ಳುವಂತಿಲ್ಲ ಎಂದು ಹೇಳಿದ್ದಳು. ಆರು ದಿನಗಳ ಬಳಿಕ ಮೊದಲ ರಾತ್ರಿಗೆ ಸಿದ್ಧ ಅಂದಿದ್ದಳು. ವಿಕ್ರಂ ಹಾಗೂ ಪೋಷಕರು ಸಹ ವಧು ಮಾತನ್ನು ನಂಬಿದ್ದರು. ಆದರೆ ಮದುವೆಯಾದ ಆರು ದಿನಗಳ ಬಳಿಕ ವಧು ಎಲ್ಲರಿಗೂ ಬಿಗ್ ಶಾಕ್ ನೀಡಿ ಎಸ್ಕೇಪ್ ಆಗಿದ್ದಳು. 

ಫಸ್ಟ್‌ ನೈಟ್‌ ರೂಮ್‌ನಲ್ಲೇ ನೇಣು ಬಿಗಿದುಕೊಂಡ ಗಂಡ, ಹಾಲು ಹಿಡ್ಕೊಂಡು ಬಂದ ವಧುವಿಗೆ ಶಾಕ್‌!

ಆರನೇ ದಿನದಂದು ವಿಕ್ರಂ ಫಸ್ಟ್‌ನೈಟ್‌ಗಾಗಿ ಕೋಣೆಯನ್ನು ಅಲಂಕರಿಸಲಾಗಿತ್ತು. ಆದ್ರೆ ವಧು ಮಾತ್ರ ಬರಲಿಲ್ಲ. ಆರು ದಿನ ಮನೆಯಲ್ಲಿ ಎಲ್ಲರ ಜೊತೆ ಚೆನ್ನಾಗಿಯೇ ಇದ್ದ ವಧು, ಯಾವ ವಸ್ತುಗಳು ಎಲ್ಲಿವೆ ಎಂಬುದನ್ನು ತಿಳಿದುಕೊಂಡಿದ್ದಳು. ಮನೆಯಲ್ಲಿರುವ ಚಿನ್ನಾಭರಣ ತೆಗೆದುಕೊಂಡು ತಾಯಿಯನ್ನು ಭೇಟಿಯಾಗಿ ಬರುತ್ತೇನೆಂದು ಹೇಳಿ ವಿಕ್ರಂ ಮನೆಯಿಂದ ಹೋಗಿದ್ದಳು. ಮರುದಿನ ಪತ್ನಿಯನ್ನು ಕರೆಯಲು ಹೋದಾಗ ಪೋಷಕರು ಮಗಳನ್ನು ಕಳುಹಿಸಲು ಒಪ್ಪಿಲ್ಲ. 

ಕೋರ್ಟ್ ಸೂಚನೆ ಮೇರೆಗೆ ಎಫ್‌ಐಆರ್ ದಾಖಲು

ವಧು ಮತ್ತು ಆಕೆಯ ಪೋಷಕರು ನಡವಳಿಕೆಯಿಂದ ಅನುಮಾನಗೊಂಡ ವಿಕ್ರಂ ತನಗೆ ಮೋಸ ಮಾಡ್ತಿದ್ದಾರೆ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾನೆ. ಆದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಅಂತಿಮವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗ, ಕೋರ್ಟ್ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ವಧು ಹಾಗೂ ಆಕೆಯ ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಕೈಯಲ್ಲಿ ಮದರಂಗಿ, ಪ್ರೀತಿಸಿದವನೊಂದಿಗೆ ಮದುವೆ ಫಿಕ್ಸ್; ಆದ್ರೂ ನೇಣಿಗೆ ಕೊರಳೊಡ್ಡಿದ ವಧು

Latest Videos
Follow Us:
Download App:
  • android
  • ios