Asianet Suvarna News Asianet Suvarna News
breaking news image

ತಡರಾತ್ರಿ ಸ್ನೇಹಿತೆಯ ಕೋಣೆಗೆ ನುಗ್ಗಿದ್ದ 15ರ ಬಾಲಕನ ಪ್ರಾಣ ಹೋಗಿದ್ದೇಗೆ? ಇಬ್ಬರ ಬಂಧನ

ಚೇತನ್, ತನ್ನೊಂದಿಗೆ ಓದುತ್ತಿದ್ದ ಸ್ನೇಹಿತೆಯ ಕೋಣೆಗೆ ನುಗ್ಗಿದ್ದನು. ಆಕೆಯೊಂದಿಗೆ ಸಲುಗೆಯಿಂದ ಸಮಯ ಕಳೆದಿದ್ದಾನೆ. ಕೋಣೆಯಲ್ಲಿರುವ ವಿಷಯ ಬಾಲಕಿಯ ಪೋಷಕರಿಗೆ ತಿಳಿಯುತ್ತಿದ್ದಂತೆ ಅಲ್ಲಿಂದ ಚೇತನ್ ಪರಾರಿಯಾಗಿದ್ದನು.

9th class-killed-by-father-grandfather-of-girl in jodhpur mrq
Author
First Published Jul 6, 2024, 12:37 PM IST

ಜೈಪುರ: ರಾಜಸ್ಥಾನದ ಜೋಧಪುರದ ಗ್ರಾಮೀಣ ಕ್ಷೇತ್ರದ ಕಸಬೆಯಲ್ಲಿ ನಡೆದ ಕೊಲೆ ಪ್ರಕರಣ (15 Year Old Boy Murder Case) ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 15 ವರ್ಷದ ಚೇತನ್ ಕೊಲೆಯಾದ ಬಾಲಕ. ಕಳೆದ ಶನಿವಾರ ಇಡೀ ಭಾರತ ವಿಶ್ವಕಪ್ ಗೆದ್ದ (T20 World Cup) ಸಂಭ್ರಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದರು. ದೇಶದ ಪ್ರತಿಯೊಂದು ಗ್ರಾಮಗಳಲ್ಲಿ ತಡರಾತ್ರಿವರೆಗೂ ಸಂಭ್ರಮಾಚರಣೆ ನಡೆಯುತ್ತಿತ್ತು. ಆದ್ರೆ ಬಾಲಕ ಚೇತನ್, ತನ್ನೊಂದಿಗೆ ಓದುತ್ತಿದ್ದ ಸ್ನೇಹಿತೆಯ ಕೋಣೆಗೆ ನುಗ್ಗಿದ್ದನು. ಆಕೆಯೊಂದಿಗೆ ಸಲುಗೆಯಿಂದ ಸಮಯ ಕಳೆದಿದ್ದಾನೆ. ಕೋಣೆಯಲ್ಲಿರುವ ವಿಷಯ ಬಾಲಕಿಯ ಪೋಷಕರಿಗೆ ತಿಳಿಯುತ್ತಿದ್ದಂತೆ ಅಲ್ಲಿಂದ ಚೇತನ್ ಪರಾರಿಯಾಗಿದ್ದನು.

ರಾತ್ರಿ ಸುಮಾರು 12 ಗಂಟೆಗೆ ಓಡಿ ಹೋಗುತ್ತಿರುವ ಸಂದರ್ಭದಲ್ಲಿ ಜಮೀನಿಗೆ ಹಾಕಲಾಗಿದ್ದ ವಿದ್ಯುತ್ ಬೇಲಿ ದಾಟುವ ಸಂದರ್ಭದಲ್ಲಿ ಶಾಕ್ ತಗುಲಿದೆ. ಶಾಕ್ ತಗುಲಿದ್ದರಿಂದ ಚೇತನ್‌ಗೆ ಬಾಲಕಿಯ ತಂದೆ ಮತ್ತು ಅಜ್ಜ ಹಲವು ಬಾರಿ ಶಾಕ್ ನೀಡಿ ಕೊಲೆಗೈದಿದ್ದಾರೆ. ನಂತರ ಶವವನ್ನು ಹೆದ್ದಾರಿ ಬಳಿ ಎಸೆದು ಪರಾರಿಯಾಗಿದ್ದರು. 

ಪತ್ನಿ ಗರ್ಭಿಣಿಯಾಗಿದ್ದಕ್ಕೆ ಹಣೆಗೆ ಶೂಟ್ ಮಾಡ್ಕೊಂಡ ಗಂಡ

ಬಾಲಕಿಯ ಅಜ್ಜ-ತಂದೆ ಅರೆಸ್ಟ್

ಇನ್ನು ಹೆದ್ದಾರಿ ಬಳಿ ಚೇತನ್ ಶವ ಅನಾಥವಾಗಿ ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಪೋಷಕರು ಅಲ್ಲಿಯೇ ಪ್ರತಿಭಟನೆ ನಡೆಸಿದ್ದರು. ಇದು ಸಹಜ ಸಾವು ಅಲ್ಲ, ಕೊಲೆ ಎಂದು ಅಂತ್ಯಸಂಸ್ಕಾರ ಮಾಡಲು ಸಹ ಕುಟುಂಬಸ್ಥರು ಒಪ್ಪಿರಲಿಲ್ಲ. ಕೊನೆಗೆ ಎಫ್‌ಐಆರ್ ದಾಖಲಾದ ಬಳಿಕ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಇದೀಗ ಪೊಲೀಸರು ಬಾಲಕಿಯ ತಂದೆ ಹಾಗೂ ಅಜ್ಜನನ್ನು ಬಂಧಿಸಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಚೇತನ್ ಕೊಲೆ ಬಳಿಕ ಬಾಲಕಿ ಸೂಸೈಡ್‌ಗೆ ಯತ್ನ 

ಚೇತನ್ ಕೊಲೆ ಬಳಿಕ ಬಾಲಕಿ ಸಹ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕಟ್ಟಡದಿಂದ ಜಿಗಿದ ಪರಿಣಾಮ ಕೈ-ಕಾಲುಗಳು ಮುರಿತಕ್ಕೊಳಗಾಗಿದ್ದು, ಆಕೆಗೆ ಚಿಕಿತ್ಸೆ ಕೊಡಿಸಲಗುತ್ತಿದೆ. ಪೊಲೀಸರು ಬಾಲಕಿ ಸೇರಿದಂತೆ ಆಕೆಯ ಕುಟುಂಬಸ್ಥರಿಂದಲೂ ಹೇಳಿಕೆ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಚೇತನ್ ಕೊಲೆ ಪ್ರಕರಣ ಗ್ರಾಮದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೇಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಶಾಂತಿ ಕಾಪಾಡಬೇಕೆಂದು ಪೊಲೀಸರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರಿಯತಮೆಯನ್ನ ಕೊಂದ ಬಳಿಕ ಆತ್ಮಹತ್ಯೆ ಯೋಚನೆ; ತಾಯಿ ಸಮಾಧಿ ಬಳಿ ಹೋದ ಬಳಿಕ ನಡೀತು ಅಚ್ಚರಿ

Latest Videos
Follow Us:
Download App:
  • android
  • ios