ಇದು ಕಲ್ಲು ಬಂಡೆಯಲ್ಲ, ಬ್ರಹ್ಮಪುತ್ರ ನದಿ ದಾಡುತ್ತಿರುವ ಆನೆ ಹಿಂಡು ವಿಡಿಯೋ!
ಮೇಲಿನಿಂದ ನೋಡಿದರೆ ನದಿಯಲ್ಲಿನ ಕಲ್ಲು ಬಂಡೆ ರೀತಿ ಕಾಣುತ್ತಿದೆ. ಆದರೆ ಇದು ಬಂಡೆಯಲ್ಲಿ ತುಂಬಿ ಹರಿಯುತ್ತಿರುವ ಬ್ರಹ್ಮಪುತ್ರ ನದಿಯನ್ನು ದಾಡುತ್ತಿರುವ ಆನೆಗಳ ಹಿಂಡು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಗುವ್ಹಾಟಿ(ಜೂ.22) ತುಂಬಿ ಹರಿಯುತ್ತಿರುವ ನದಿ. ನದಿಯ ನಡುವೆ ಮುಳುಗುತ್ತಿರುವ ಬಂಡೆಗಳ ರೀತಿ ಗೋಚರಿಸುತ್ತಿರುವುದು ಆನೆಗಳ ಹಿಂಡು. ಸುಮಾರು 100ಕ್ಕೂ ಹೆಚ್ಚು ಆನೆಗಳು ಬ್ರಹ್ಮಪುತ್ರ ನದಿಯನ್ನು ಈಜುತ್ತಾ ದಾಟುತ್ತಿರುವ ಈ ದೃಶ್ಯ ಭಾರಿ ವೈರಲ್ ಆಗಿದೆ. ಅಸ್ಸಾನಂ ಜೊರ್ಹಟ್ ಜಿಲ್ಲೆಯಲ್ಲಿ ಆನೆಗಳು ನದಿಯನ್ನು ದಾಟುತ್ತಿರುವ ದೃಶ್ಯವನ್ನು ಅಷ್ಟೆ ಸುಂದರವಾಗಿ ಸೆರೆ ಹಿಡಿಯಲಾಗಿದೆ.
ಸಚಿನ್ ಭರಾಲಿ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಹಿರಿಯ ಅರಣ್ಯಾಧಿಕಾರಿ ಸುಧಾ ರಮೆನ್ ರಿಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಆನೆಗಳು ಅತ್ಯುದ್ಬುತ ಈಜುಪಟುಗಳು ಎಂದು ಬರೆದಿದ್ದಾರೆ. ಈ ಆನೆಗಳ ಹಿಂಡಿನಲ್ಲಿ ಮರಿ ಆನೆಗಳೂ ಸೇರಿವೆ. ಬ್ರಹ್ಮಪುತ್ರ ನದಿಯ ನಿಮಿತಿ ಘಾಟ್ ಬಳಿ ಆನೆಗಳು ನದಿ ದಾಟಿದೆ.
ಹಸಿವಿನಿಂದ ಕಂಗೆಟ್ಟ ಕಾಡಾನೆ ಭಾರತದ 7ನೇ ಅತೀ ದೊಡ್ಡ ನದಿ ದಾಟಿ ಪಟ್ಟಣಕ್ಕೆ ಎಂಟ್ರಿ, ವಿಡಿಯೋ ವೈರಲ್!
ಬ್ರಹ್ಮಪುತ್ರ ನದಿಯನ್ನು ಆನೆಗಳು ದಾಟುವುದು ಹೊಸದೇನಲ್ಲ. ಪ್ರತಿ ವರ್ಷ ಆನೆಗಳು ಈ ರೀತಿ ನದಿ ದಾಟುತ್ತಿದೆ. ಈ ಬಾರಿಯ ಚಿತ್ರಣ ಭಿನ್ನವಾಿದೆ. 100ಕ್ಕೂ ಹೆಚ್ಚು ಆನೆಗಳು ನದಿ ದಾಟುತ್ತಿರುವ ಮನಮೋಹಕ ದೃಶ್ಯ ಎಲ್ಲರನ್ನು ಸೆಳೆಯುತ್ತಿದೆ. ಈ ಹಿಂದೆ ಒಂಟಿ ಆನೆಯೊಂದು ತುಂಬಿ ಹರಿಯುತ್ತಿರುವ ಬ್ರಹ್ಮಪುತ್ರ ನದಿ ದಾಟಿದ ವಿಡಿಯೋ ಭಾರಿ ವೈರಲ್ ಆಗಿತ್ತು.
ಸುಂದರವ ದೃಶ್ಯ ನೋಡುವಂತ ಮಾಡಿದವರಿಗೆ ಧನ್ಯವಾದ. ಎಲ್ಲಾ ಆನೆಗಳು ಸುರಕ್ಷಿತವಾಗಿ ದಡ ಸೇರಿದೆ ಎಂದುಕೊಂಡಿದ್ದೇನೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಆನೆಗಳು ನದಿಗಳನ್ನು ಈಜಿಕೊಂಡು ಸಾಗುತ್ತದೆ. ನೋಡುಗರಿಗೆ ಇದು ಸುಲಭವಾಗಿ ಕಂಡರೂ ಆನೆಗಳು ತಮ್ಮಮ ಮರಿಯಾನೆಗಳ ಜೊತೆಗೆ ಸುರಕ್ಷಿತವಾಗಿ ನದಿ ದಾಟುವುದು ಸುಲಭವಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮಾನವ ಹಾಗೂ ವನ್ಯ ಪ್ರಾಣಿಗಳ ಸಂಘರ್ಷವನ್ನು ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ ಇಂತಹ ದೃಶ್ಯಗಳು ಭವಿಷ್ಯದಲ್ಲಿ ಸಿಗುವುದಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂಡಮಾನ್ ದ್ವೀಪದಲ್ಲೂ ಇದೇ ರೀತಿ ಆನೆಗಳು ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಈಜಿಕೊಂಡು ಸಾಗುತ್ತದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
Kamakhya Temple: ಬ್ರಹ್ಮಪುತ್ರ ನದಿ ಏಕೆ ಮೂರು ದಿನಗಳ ಕಾಲ ಕೆಂಪಾಗುತ್ತದೆ?
ಅಸ್ಸಾಂ ರಾಜ್ಯ ಸರಿಸುಮಾರು 5,700 ಆನೆಗಳನ್ನು ಹೊಂದಿದ ರಾಜ್ಯ ಎಂದು ಖ್ಯಾತಿಗೆ ಪಾತ್ರವಾಗಿದೆ. ವಿಶೇಷ ಅಂದರೆ ಭಾರತದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿದ ರಾಜ್ಯ ಅನ್ನೋ ಕೀರ್ತಿಗೆ ಕರ್ನಾಟಕ ಪಾತ್ರವಾಗಿದೆ. ಕರ್ನಾಟಕದಲ್ಲಿ ಸರಿಸುಮಾರು 6,395 ಆನೆಗಳಿವೆ. ಸಕ್ರೆಬೈಲು ಆನೆ ಬಿಡಾರ, ದುಬಾರಿ ಆನೆ ಕೇಂದ್ರ ಸೇರಿದಂತೆ ಹಲವು ಆನೆ ಕೇಂದ್ರಗಳು ಕರ್ನಾಟಕದಲ್ಲಿದೆ.