ಹಸಿವಿನಿಂದ ಕಂಗೆಟ್ಟ ಕಾಡಾನೆ ಭಾರತದ 7ನೇ ಅತೀ ದೊಡ್ಡ ನದಿ ದಾಟಿ ಪಟ್ಟಣಕ್ಕೆ ಎಂಟ್ರಿ, ವಿಡಿಯೋ ವೈರಲ್!
ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿರುವುದು ಇತ್ತೀಚಗೆ ಸಾಮಾನ್ಯವಾಗಿದೆ. ಇದೀಗ ಹಸಿವಿನಿಂದ ಕಂಗೆಟ್ಟ ಕಾಡಾನೆ ಭಾರತದ 7ನೇ ಅತೀ ದೊಡ್ಡ ನದಿ ಅನ್ನೋ ಖ್ಯಾತಿ ಪಡೆದಿರುವ ಬಹ್ಮಪುತ್ರ ನದಿ ದಾಟಿ ಪಟ್ಟಣಕ್ಕೆ ಧಾವಿಸಿದೆ. ಇದೀಗ ವಿಡಿಯೋ ವೈರಲ್ ಆಗಿದೆ.
ಅಸ್ಸಾಂ(ಆ.30); ದಿನದಿಂದ ದಿನಕ್ಕೆ ಅರಣ್ಯ ನಶಿಸಿ ಹೋಗುತ್ತಿದೆ. ಅಳಿದು ಉಳಿದಿರುವ ಅರಣ್ಯದಲ್ಲಿ ಕಾಡ್ಗಿಚ್ಚು ಸೇರಿದಂತೆ ಹಲವು ಕಾರಣಗಳಿಂದ ಕಾಡುಪ್ರಾಣಿಗಳಿಗೆ ತಿನ್ನಲು ಏನೂ ಸಿಗುತ್ತಿಲ್ಲ. ಹೀಗಾಗಿ ಕಾಡು ಪ್ರಾಣಿಗಳು ಆಹಾರ ಅರಸಿ ನಾಡು ಪ್ರವೇಶಿಸುತ್ತಿರುವ ಬೆಳವಣಿಗೆ ಇತ್ತೀಚೆಗೆ ಹೆಚ್ಚಾಗಿದೆ. ಇದೀಗ ಹಸಿವಿನಿಂದ ಕಂಗೆಟ್ಟ ಕಾಡಾನೆಯೊಂದು ಭಾರತದ 7ನೇ ಅಥೀ ದೊಡ್ಡ ನದಿ ಎಂದೇ ಗುರುತಿಸಿಕೊಂಡಿರುವ ಬ್ರಹ್ಮಪುತ್ರ ನದಿಯನ್ನು ದಾಟಿ ಪಟ್ಟಣಕ್ಕೆ ಆಗಮಿಸಿದೆ. ರಾತ್ರಿ ವೇಳೆ ಆಗಮಿಸಿದ ಕಾಡಾನೆ ಬೀದಿ ಬೀದಿಯಲ್ಲಿ ಆಹಾರಕ್ಕಾಗಿ ಅಲೆದಾಡಿದೆ. ಆಹಾರವಿಲ್ಲದೆ ಸೊರಗಿರುವ ಆನೆಯನ್ನು ನೋಡಿದ ಜನರು ಚೀರಾಟ ಆರಂಭಿಸಿದ್ದಾರೆ. ಹಲವರು ಪಟಾಕಿ ಸೇರಿದಂತೆ ಹಲವು ರೀತಿಯ ಶಬ್ದಗಳನ್ನು ಮಾಡಿದ್ದಾರೆ. ಇದರಿಂದ ಆನೆ ಮತ್ತಷ್ಟು ಭಯಬೀತಗೊಂಡಿದೆ. ಇತ್ತ ಆಹಾರವೂ ಸಿಗಲಿಲ್ಲ, ಅತ್ತ ಭಯದ ವಾತಾವರಣದಲ್ಲಿ ಆನೆ ನಿಸ್ಸಾಯಕನಾಗಿ ಪಟ್ಟಣದಲ್ಲಿ ಅತ್ತಿಂದಿತ್ತ ಓಡಾಡಿದ ಘಟನೆ ಅಸ್ಸಾಂನಲ್ಲಿ ವರದಿಯಾಗಿದೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಅರಣ್ಯದಲ್ಲಿ ಆಹಾರ ಸಿಗದೆ ಪರದಾಡಿದ ಕಾಡಾನೆ ಪ್ರತಿ ದಿನ ಕಾಡಿನಲ್ಲಿ ಅಲೆದಾಡಿದೆ. ಸರಿಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಕಾಜಿರಂಗ ಅರಣ್ಯದಲ್ಲಿ ಈ ಕಾಡನೆಗೆ ಆಹಾರ ಸರಿಯಾಗಿಲ್ಲ ಸಿಕ್ಕಿಲ್ಲ. ಕಾಜಿರಂಗ ರಾಷ್ಟ್ರೀಯ ಅರಣ್ಯದ ಪಕ್ಕದಲ್ಲಿರುವ ಗ್ರಾಮದಲ್ಲಿ ಕಾಡಾಣೆಗಳು ಪ್ರತ್ಯಕ್ಷವಾಗುತ್ತಿರುವು ಸರ್ವೇ ಸಾಮಾನ್ಯವಾಗಿದೆ. ಆದರೆ ಈ ಕಾಡನೆ ಹಸಿವಿನಿಂದ ಕಂಗೆಟ್ಟಿದೆ. ಹೀಗಾಗಿ ಬ್ರಹ್ಮಪುತ್ರ ನದಿಯನ್ನು ಈಜಿ ದಾಡಿದೆ. ಮಳೆಗಾಲ ಹಾಗೂ ಅಸ್ಸಾಂನಲ್ಲಿ ಭಾರಿ ಮಳೆಯಾಗಿರುವ ಕಾರಣ ಬ್ರಹ್ಮಪುತ್ರ ನದಿ ತುಂಬಿ ಹರಿಯುತ್ತಿದೆ. ಈ ನದಿಯನ್ನು ದಾಟಿದ ಕಾಡನೆ ತೇಜ್‌ಪುರ್ ನಗರಕ್ಕೆ ಆಗಮಿಸಿದೆ.
ಕೆಳಗೆ ಬಿದ್ದ ಮಕ್ಕಳ ಚಪ್ಪಲಿಯನ್ನು ಎತ್ತಿಕೊಟ್ಟ ಆನೆ: ವಿಡಿಯೋ ವೈರಲ್
ರಾತ್ರಿ 3 ಗಂಟೆಗೆ ತೇಜ್‌ಪುರ್ ನಗರಕ್ಕೆ ಆಗಮಿಸಿದ ಕಾಡಾನೆಗೆ ಹಸಿವು ಮಾತ್ರವಲ್ಲ ಭಯವೂ ಕಾಡಿದೆ. ಜನರ ಚೀರಾಟ, ವಾಹನದ ಸದ್ದು, ಕಾಡನೆ ನೋಡಿದ ಜನರು ಪಟಾಕಿ ಸಿಡಿಸಿ ಓಡಿಸುವ ಪ್ರಯತ್ನಗಳಿಂದ ಕಾಡಾನೆ ಮತ್ತಷ್ಟು ಕಂಗಾಲಾಗಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಕಾಡಾನೆಯನ್ನು ಕಾಡಿಗೆ ಅಟ್ಟಿದೆ.
ಕಾಡನೆ ನಾಡಿಗೆ ಬಂದ ವಿಡಿಯೋ ವೈರಲ್ ಆಗಿದೆ. ತೆಜ್‌ಪುರ್ ನಗರದಲ್ಲಿ ಕಾಡಾನೆ ಅಹಾರಕ್ಕೆ ಅಲೆದಾಡುತ್ತಿರುವ ವಿಡಿಯೋ ನಿಜಕ್ಕೂ ನೋವು ತರಿಸುತ್ತದೆ. ಕಾರಣ ಕಾಡಾನೆ ಸರಿಯಾದ ಆಹಾರವಿಲ್ಲದೆ ಸೊರಗಿ ಹೋಗಿದೆ. ಆಹಾರ ಹುಡುಕಿ ನದಿಯನ್ನೇ ದಾಡಿ ಬಂದ ಕಾಡಾನೆಗೆ ಪಟ್ಟಣದಲ್ಲಿ ಆಹಾರವೂ ಸಿಗಲಿಲ್ಲ, ನೆಮ್ಮದಿಯೂ ಇರಲಿಲ್ಲ. ಕಾಡು ಪ್ರಾಣಿಗಳಿಗೆ ಆಹಾರ ಸಿಗದಿರುವುದು ಅತೀ ದೊಡ್ಡ ದುರಂತವಾಗಿದೆ. ಈ ಸಮಸ್ಯೆಗಳು ಮರುಕಳಿಸದಂತೆ ಸರ್ಕಾರ ಹಾಗೂ ತಜ್ಞರು ಚಿಂತಿಸಬೇಕು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪುಟ್ಟ ಸೊಂಡಿಲಿನಲ್ಲಿ ನೀರು ಕುಡಿಯಲು ಕಲಿಯುತ್ತಿರುವ ಪುಟಾಣಿ ಆನೆ: ವಿಡಿಯೋ ವೈರಲ್
ಮನೆ ಮೇಲೆ ಕಾಡಾನೆ ದಾಳಿ
ಕರ್ನಾಟಕದ ಸಕಲೇಶಪುರ ತಾಲೂಕಿನ ಕ್ಯಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆ.ಮಂಚಹಳ್ಳಿ ಗ್ರಾಮದ ಕೆಂಚಮ್ಮ ಮನೆಗೆ ಶನಿವಾರ ಬೆಳಗಿನ ಜಾವ 5.30ಕ್ಕೆ ಬಂದ ಕಾಡಾನೆಯೊಂದು ಮನೆಯ ಬಾಗಿಲು ಒಡೆದು ಅಪಾರ ಹಾನಿ ಉಂಟು ಮಾಡಿದೆ. ಅದೃಷ್ಟವಷಾತ್ ಮನೆಗೆ ಪ್ರವೇಶಿಸಲು ಸಾಧ್ಯವಾಗದಿದ್ದರಿಂದ ಕಾಡಾನೆ ಹಿಂತಿರುಗಿ ಹೋಗಿದೆ. ಮನೆಯ ಬಾಗಿಲು ಹಾಗೂ ಮುಂದೆ ಹಾಕಲಾಗಿದ್ದ ಶೀಟ್‌ಗಳು ಕಿತ್ತು ಬಂದಿದೆ. ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ವಿಪರೀತವಾಗಿದೆ. ದಿನನಿತ್ಯ ಒಂದಲ್ಲ ಒಂದು ಕಡೆ ದಾಂಧಲೆ ನಡೆಸುತ್ತಿವೆ. ಕೂಡಲೆ ಕಾಡಾನೆ ಸಮಸ್ಯೆಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಲಕ್ಷ್ಮೀಪ್ರಸಾದ್ ಹಾಗೂ ಚೇತನ್ ಮನವಿ ಮಾಡಿದ್ದಾರೆ.