ದೇವರನಾಡಲ್ಲಿ ಗಜೇಂದ್ರನ ಸಾಹಸ: ಉಕ್ಕಿ ಹರಿಯುವ ನದಿ ದಾಟಿದ ಆನೆ, ವಿಡಿಯೋ

ಕೇರಳ: ಈ ಬಾರಿಯ ಮುಂಗಾರು ಮಳೆ ಬಹುತೇಕ ದೇಶದ ಎಲ್ಲಾ ಕಡೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಎಡೆಬಿಡದೇ ಸುರಿದ ಮಳೆಯಿಂದ ಹಲವೆಡೆ ಭೂ ಕುಸಿತದ ಜೊತೆ ಮನೆಗಳು ಧರೆಗುರುಳಿದ್ದು, ಅನೇಕರ ಜೀವ ಹಾನಿಯಾಗಿದೆ.

elephant struggling to cross An overflowing river in Kerala video viral akb

ಕೇರಳ: ಈ ಬಾರಿಯ ಮುಂಗಾರು ಮಳೆ ಬಹುತೇಕ ದೇಶದ ಎಲ್ಲಾ ಕಡೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಎಡೆಬಿಡದೇ ಸುರಿದ ಮಳೆಯಿಂದ ಹಲವೆಡೆ ಭೂ ಕುಸಿತದ ಜೊತೆ ಮನೆಗಳು ಧರೆಗುರುಳಿದ್ದು, ಅನೇಕರ ಜೀವ ಹಾನಿಯಾಗಿದೆ. ಅನೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿ ತತ್ತರಿಸಿವೆ. ಬುದ್ಧಿವಂತರಾದ ಮನುಷ್ಯರೆನೋ ಸುರಕ್ಷಿತ ಪ್ರದೇಶಗಳತ್ತ ವಲಸೆ ಹೋಗಿ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತಾರೆ. ಆದರೆ ಪ್ರಾಣಿ ಪಕ್ಷಿಗಳ ಬದುಕು ದುಸ್ಥರವಾಗಿದೆ. ಮಾನವ ನಿರ್ಮಿತ ಕೆಲಸಗಳಿಂದ ಉಂಟಾದ ಕೃತಕ ಪ್ರವಾಹದಿಂದ ಪ್ರಾಣಿಗಳು ಸಂಕಷ್ಟಕ್ಕೊಳಗಾಗುತ್ತಿವೆ. ಜೀವ ಕಳೆದುಕೊಳ್ಳುತ್ತಿವೆ. ಅದೇ ರೀತಿ ಕೇರಳದಲ್ಲಿ ಆನೆಯೊಂದು ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ನದಿಯನ್ನು ದಾಟಲು ಹರಸಾಹಸ ಪಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

ದೇವರನಾಡು ಕೇರಳದಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಹಲವೆಡೆ ಭೂಕುಸಿತ ಉಂಟಾಗಿದ್ದು, ಭತ್ತದ ಗದ್ದಗಳೆಲ್ಲಾ ಪ್ರವಾಹ ಪೀಡಿತವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಹದ ರೌದ್ರ ಚಿತ್ರಣದ ಹಲವು ವಿಡಿಯೋಗಳು ಈಗಾಗಲೇ ವೈರಲ್‌ ಆಗಿವೆ. ಅದೇ ರೀತಿ ಆನೆಯೊಂದು ನದಿ ದಾಟಲು ಹರಸಾಹಸ ಪಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಚಲಕ್ಕುಡಿ ನದಿಯನ್ನು ದಾಟಲು ಗಜರಾಜ ಕಷ್ಟ ಪಡುತ್ತಿದ್ದಾನೆ. ಕಾಡೊಳಗಿನ ನದಿ ಇದಾಗಿದ್ದು, ಆನೆ ಮೂರು ಗಂಟೆಗೂ ಹೆಚ್ಚು ಕಾಲ ಬಹಳಷ್ಟು ತ್ರಾಸಪಟ್ಟು ನದಿ ದಾಟಿ ಸುರಕ್ಷಿತ ಪ್ರದೇಶವನ್ನು ತಲುಪುವಲ್ಲಿ ಯಶಸ್ವಿಯಾಗುತ್ತದೆ. 

 

ಮಂಗಳವಾರ ಮುಂಜಾನೆ ಈ ಘಟನೆ ನಡೆದಿದೆ. ಭಾರಿ ಮಳೆಯಿಂದಾಗಿ ಪರಂಬಿಕುಲ ಜಲಾಶಯ ತುಂಬಿದ ಪರಿಣಾಮ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ತೆರೆಯಲಾಗಿತ್ತು. ಹೀಗಾಗಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಒಮ್ಮೆಲೆ ಉಕ್ಕಿ ಬಂದ ನೀರಿನಿಂದಾಗಿ ಪಲಿಪರ ಪ್ರದೇಶದಲ್ಲಿ ಆನೆ ನದಿ ಮಧ್ಯೆ ಸಿಲುಕಿ ಸಂಕಷ್ಟ ಪಡುವಂತಾಯಿತು. ಬಹುತೇಕ ಜನರು ನದಿಯ ಭಾಗದಲ್ಲಿ ನೀರು ಕಡಿಮೆಯಾಗುವವರೆಗೂ ಅಸಹಾಯಕರಾಗಿ ನಿಂತಿದ್ದರೆ, ಆನೆ ಮಾತ್ರ ತುಂಬಿ ಹರಿಯುವ ನದಿಯನ್ನು ದಾಟಿ ಸಾಹಸ ಮೆರೆದಿದೆ. ಇನ್ನು ಆನೆ ನದಿ ಮಧ್ಯೆ ಸಿಲುಕಿರುವ ವಿಚಾರ ತಿಳಿದು ಸಾಕಷ್ಟು ಜನ ನದಿ ತೀರದಲ್ಲಿ ಸೇರಿದ್ದರು ಎಂದು ತಿಳಿದು ಬಂದಿದೆ. 

ರಸ್ತೆ ಮಧ್ಯೆಯೇ ಆಟವಾಡಿದ ಆನೆ ಮರಿಗಳು: ಐಎಎಸ್‌ ಅಧಿಕಾರಿ ಶೇರ್‌ ಮಾಡಿದ ಈ ವಿಡಿಯೋ ಸಖತ್‌ ವೈರಲ್..!

ಕೇರಳದಲ್ಲಿ ಕಳೆದ ಭಾನುವಾರದಿಂದ (ಜುಲೈ 31) ಮಳೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಟ್ಟು 10 ಜನ ಇದುವರೆಗೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಆಗಸ್ಟ್‌ 4 ರವರೆಗೆ ಕೇರಳದ 10 ಜಿಲ್ಲೆಗಳಲ್ಲಿ ತೀವ್ರ ಮಳೆಯ ಸೂಚಕವಾದ ರೆಡ್‌ ಅಲರ್ಟ್‌ನ್ನು ಘೋಷಣೆ ಮಾಡಿದೆ. ಉಳಿದ 14 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ. 

ಹೊಂಡಕ್ಕೆ ಬಿದ್ದ ಮರಿಯ ರಕ್ಷಿಸುವಾಗ ಪ್ರಜ್ಞೆ ತಪ್ಪಿದ ತಾಯಾನೆ: ಸಿಪಿಆರ್ ಮಾಡಿ ಜೀವ ಉಳಿಸಿದ ರಕ್ಷಕರು

ಹಲಸಿನ ಹಣ್ಣು ಕೊಯ್ದ ಗಜರಾಜ
ನಿನ್ನೆಯಷ್ಟೇ ಆನೆಯೊಂದು ಹಲಸಿನ ಮರದಿಂದ ಹಲಸಿನ ಹಣ್ಣು ಕೊಯ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. 30 ಸೆಕೆಂಡುಗಳ ಈ ವಿಡಿಯೋದಲ್ಲಿ ಕಾಣಿಸುವಂತೆ ಆನೆಯೊಂದು ಕಾಡೊಳಗಿನ ಪುಟ್ಟ ಗುಡಿಸಲಿನ ಸಮೀಪದಲ್ಲಿರುವ ಮನೆಯ ಬಳಿ ಇರುವ ಹಲಸಿನ ಮರದ ಬಳಿ ಬರುತ್ತದೆ. ಬಂದಿದ್ದೇ ಮರದ ಮೇಲೆ ಹಲಸನ್ನು ನೋಡಿದ ಆನೆ ಮೊದಲಿಗೆ ಜೋರಾಗಿ ಮರವನ್ನು ಅಲುಗಿಸಲು ಶುರು ಮಾಡುತ್ತದೆ. ಆದರೆ ಹಲಸಿನ ಹಣ್ಣು ಮಾತ್ರ ಕೆಳಗೆ ಬೀಳುವುದಿಲ್ಲ. ಈ ವೇಳೆ ಮನೆಯ ಸಮೀಪ ಇರುವ ಜನರು ಜೋರಾಗಿ ಬೊಬ್ಬೆ ಹಾಕುತ್ತಾರೆ. ಆದಾಗ್ಯೂ ಕ್ಯಾರೇ ಮಾಡದ ಆನೆ ಮತ್ತಷ್ಟು ಮರವನ್ನು ಅಲುಗಿಸುತ್ತದೆ. ಆದರೆ ಹಲಸು ಮಾತ್ರ ಕೆಳಗೆ ಬೀಳುವುದಿಲ್ಲ. ಅಲುಗಿಸುವುದರಿಂದ ಹಲಸು ಕೆಳಗೆ ಬೀಳುವುದಿಲ್ಲ ಎಂದು ಅರಿತ ಆನೆ ಹಲಸಿನ ಮರಕ್ಕೆ ತನ್ನ ಮುಂಭಾಗದ ಎರಡು ಕಾಲುಗಳನ್ನು ಇಟ್ಟು ಸೊಂಡಿಲನ್ನು ನೇರವಾಗಿ ಮೇಲೆ ಚಾಚಿ ಹಲಸಿನ ಹಣ್ಣನ್ನು ಕೆಳಗೆ ಬೀಳಿಸುವಲ್ಲಿ ಯಶಸ್ವಿಯಾಗುತ್ತದೆ. 

 

Latest Videos
Follow Us:
Download App:
  • android
  • ios