ಮದುವೆ ಸಮಾರಂಭದಲ್ಲಿ ಶಬ್ದಕ್ಕೆ ಬೆಚ್ಚಿದ ಆನೆಯಿಂದ ರಂಪಾಟ ಕಾರು ಪುಡಿ ಪುಡಿ, ಮದುವ ಸಮಾರಂಭ ಚೆಲ್ಲಾ ಪಿಲ್ಲಿ ಆನೆ ಮೇಲೇರಿ ಬಂದಿದ್ದ ಮಧುಮಗ ಎಸ್ಕೇಪ್

ಪ್ರಯಾಗರಾಜ್(ಜೂ.12): ಮದುವೆ ಸಮಾರಂಭದಲ್ಲಿ ವಧ-ವರ ಮಂಟಪಕ್ಕೆ ಆಗಮಿಸಲು ದುಬಾರಿ ಕಾರು, ವಿಂಟೇಜ್ ಕಾರು, ಕುದುರೆ ಮೇಲೇರಿ ಬರುವುದು ಸಾಮಾನ್ಯ. ಇನ್ನು ಕೆಲ ವಿವಾಹ ಮಹೋತ್ಸವದಲ್ಲಿ ಅನೆ ಮೇಲೇರಿ ಬಂದ ಊದಾಹರಣೆಗಳು ಇವೆ. ತಮ್ಮ ತಮ್ಮ ಸ್ಟೇಟಸ್‌ಗೆ ತಕ್ಕಂತೆ ಕೆಲವರು ಈ ರೀತಿ ಪ್ಲಾನ್ ಮಾಡಿಕೊಳ್ಳುತ್ತಾರೆ. ಹೀಗೆ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಧುಮಗ ಆನೆ ಮೇಲೇರಿ ಬಂದು ಅಪಾರ ನಷ್ಟ ಅನುಭವಿಸುವಂತಾಗಿದೆ.

ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ; ವಿಡಿಯೋ

ಇದು ಉತ್ತರ ಪ್ರದೇಶದ ಪ್ರಯಾಗರಾಜ್‌ನ ಅಮಲಾಪುರ್ ಗ್ರಾಮದಲ್ಲಿ ನಡೆದ ಘಟನೆ. ಮಧುಮಗ ಆನಂದ್ ತ್ರಿಪಾಠಿ ಜೂನ್ 11ರ ರಾತ್ರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದರು. ಮಧುಮಗ ಆನಂದ್ ತ್ರಿಪಾಠಿ ನರ್ಯಾನಪುರ ಗ್ರಾಮದಿಂದ ಆನೇ ಮೇಲೇರಿ ಅಮಲಾಪುರದಲ್ಲಿ ಆಯೋಜಿಸಿದ ಮದುವೆ ರಿಸೆಪ್ಶನ್‌ಗೆ ಆಮಿಸಿದ್ದಾನೆ. 

Scroll to load tweet…

ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸುವವರೆಗೆ ಎಲ್ಲವೂ ಸರಿ ಇತ್ತು. ಆನೆಯಿಂದ ಇಳಿದ ಮದುಮಗ ಮಂಟಪದತ್ತ ಸಾಗಿದ್ದಾನೆ. ಇತ್ತ ಮದುವೆ ಸಮಾರಂಭದಲ್ಲಿ ಡಿಜೆ ಮ್ಯೂಸಿಕ್, ಪಟಾಕಿ ಶಬ್ದ, ಬ್ಯಾಂಡ್ ಸೆಟ್ ಸೇರಿದಂತೆ ಕರ್ಕಶ ಶಬ್ಧಕ್ಕೆ ಆನೆ ಬೆಚ್ಚಿ ಬಿದ್ದಿದೆ. ಈ ಶಬ್ದಕ್ಕೆ ಬೆಚ್ಚಿ ಬಿದ್ದ ಆನೆಗೆ ಮದವೇರಿದೆ. 

15 ಅಡಿ ಆಳದ ಬಾವಿಗೆ ಬಿದ್ದ ಆನೆ ಮರಿ; ಸತತ 4 ಗಂಟೆ ಕಾರ್ಯಚರಣೆ ಮೂಲಕ ರಕ್ಷಣೆ!

ಮದುವೆ ಸಮಾರಂಭಕ್ಕೆ ಆಗಮಿಸಿದ ನಾಲ್ಕು ಕಾರುಗಳನ್ನು ಆನೆ ಪುಡಿ ಮಾಡಿದೆ. ಮಂಟಪ, ಆಹಾರ ಕೌಂಟರ್, ಪಾರ್ಟಿ ಮೇಜುಗಳನ್ನು ಎತ್ತಿ ಬಿಸಾಡಿದೆ. ಆನೆಯ ರಂಪಾಟ ನೋಡಿದ ಮಧುಮಗ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್

ಬೇರೆ ದಾರಿ ಕಾಣದ ಕುಟುಂಬಸ್ಥರು ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಆನೆಯನ್ನು ಹಿಡಿದುಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ. ಇತ್ತ ಮದುಮಗನ ಮದುವೆ ಆರತಕ್ಷತೆ ರದ್ದಾಗಿದೆ.