ಒಡಿಶಾ(ಏ.11): ಜನವರಿಯಿಂದ ಆನೆಗಳು ಒಂದು ಕಡೆಯಿಂದ ಮತ್ತೊಂದು ಕಡೆ ಅಲೆದಾಟ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಆಹಾರ ಹುಡುಕುತ್ತಾ ತಿರುಗಾಟ ಆರಂಭಿಸುತ್ತದೆ. ಆಹಾರ ಕೊರತೆಯಿಂದಲೇ ಅರಣ್ಯದಂಚಿನ ಗ್ರಾಮಗಳಿಗೆ ಆನೆಗಳ ಲಗ್ಗೆ ಇಡುತ್ತಲೇ ಇರುತ್ತದೆ. ಹೀಗೆ ಪಶ್ಚಿಮ ಬಂಗಾಳ ಗಡಿಯಿಂದ ಒಡಿಶಾದ ಮಯೂರ್ಬಾನಿ ಜಿಲ್ಲೆಯ ಗಾನಾ ಅರಣ್ಯಕ್ಕೆ ತೆರಳಿದೆ.  ಈ ವೇಳೆ ಅರಣ್ಯದಂಚಿನ ಗ್ರಾಮದಲ್ಲಿದ್ದ 15 ಅಡಿ ಆಳದ ಬಾವಿಗೆ ಬಿದ್ದು ನರಕಯಾನೆ ಅನುಭವಿಸಿದೆ. ಆದರೆ ಅರಣ್ಯ ಅಧಿಕಾರಿಗಳ ಸತತ ಕಾರ್ಯಚರಣೆ ಮೂಲಕ ಆನೆ ಮರಿಯನ್ನು ರಕ್ಷಿಸಲಾಗಿದೆ.

ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್.

ಮರಿ ಆನೆ ಸೇರಿದಂತೆ 20 ಆನೆಯ ಹಿಂಡು ಗಾನಾ ಅರಣ್ಯ ಪ್ರವೇಶಿಸಲು ಸಾಗಿದೆ. ಆದರೆ ಅರಣ್ಯ ಪ್ರವೇಶಿಸುವ ಮೊದಲು ಸಿಗುವ ಗ್ರಾಮದಲ್ಲಿ ಪಾಳುಬಿದ್ದಿದ್ದ ಬಾವಿಗೆ ಆನೆ ಮರಿ ಬಿದ್ದಿದೆ. ಆನೆಗಳ ಹಿಂಡು ಘರ್ಜಿಸಲು ಆರಂಭಿಸಿದೆ. ಸ್ಥಳೀಯರ ಮಾಹಿತಿ ಪಡೆದ ಸ್ಥಳಕ್ಕಾಗಿಮಿಸಿದ ಅರಣ್ಯಾಧಿಕಾರಿಗಳು ಆನೆ ಮರಿ ಬಾವಿಗೆ ಬಿದ್ದಿರುವುದನ್ನು ಪತ್ತೆ ಹಚ್ಚಿದ್ದಾರೆ.

 

ಸಕ್ರೆಬೈಲು ಆನೆ ಬಿಡಾರದಲ್ಲಿ ಸಂಭ್ರಮ : ಹೆಣ್ಣು ಮರಿಗೆ ಜನ್ಮ ನೀಡಿದ ಭಾನುಮತಿ

ತಕ್ಷಣವೇ ಅರಣ್ಯಾಧಿಕಾರಿಗಳು ಜೆಸಿಬಿ ಕರೆಸಿ ಕಾರ್ಯಚರಣೆ ಆರಂಭಿಸಿದ್ದಾರೆ. ಸತತ ನಾಲ್ಕುಗಂಟೆಗಳ ಕಾರ್ಯಚರಣೆ ಬಳಿಕ ಆನೆಮರಿಯನ್ನು ಮೇಲಕ್ಕೆ ಎತ್ತಿದ್ದಾರೆ.  15 ಅಡಿ ಬಾವಿಗೆ ಬಿದ್ದ ಕಾರಣ ಆನೆ ಮರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆನೆ ಕಾರಿಡಾರ್‌ಗೆ ಅಡ್ಡಿ ಪಡಿಸದಂತೆ ಅರಣ್ಯಾಧಿಕಾರಿಗಳು  ಮನವಿ ಮಾಡಿದ್ದಾರೆ.