ಜೈಪುರದ ಅಮೀರ್ ಕೋಟೆಯಲ್ಲಿ ಆನೆ ಸಫಾರಿ ಅತ್ಯಂತ ಜನಪ್ರಿಯ. ವಿದೇಶಿ ಪ್ರವಾಸಿಗರು ಆನೆ ಮೂಲಕ ಕೋಟೆ ಸಫಾರಿಗೆ ತೆರಳುತ್ತಾರೆ. ಹೀಗೆ ಸಫಾರಿಗೆ ಹೊರಟಡಲು ಸಜ್ಜಾದ ರಷ್ಯಾದ ಇಬ್ಬರು ಪ್ರವಾಸಿಗರನ್ನು ಆನೆ ಎತ್ತಿ ಎಸೆದ ಘಟನೆ ನಡೆದಿದೆ.
ಜೈಪುರ(ಫೆ.29) ಭಾರತ ಪ್ರವಾಸದಲ್ಲಿದ್ದ ರಷ್ಯಾ ನಾಗರೀಕರ ಮೇಲೆ ಆನೆ ದಾಳಿ ನಡೆದಿದೆ. ಜೈಪುರದ ಪ್ರಖ್ಯಾತ ಅಮೀರ್ ಕೋಟೆಯಲ್ಲಿ ಆನೆ ಸಫಾರಿ ಹೊರಡಲು ಸಜ್ಜಾಗಿದ್ದ ರಷ್ಯಾ ನಾಗರೀಕರನ್ನು ರೊಚ್ಚಿಗೆದ್ದ ಆನೆ ಎತ್ತಿ ಎಸೆದಿದೆ. ಗೌರಿ ಅನ್ನೋ ಹೆಣ್ಣಾನೆ ಪ್ರವಾಸಿಗರ ಮೇಲೆ ದಾಳಿ ನಡೆಸಿದೆ. ಇದರ ಪರಿಣಾಮ ಪ್ರವಾಸಿಗರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ವಿಡಿಯೋವನ್ನು ಪ್ರಾಣಿ ಸಂರಕ್ಷಣಾ ಸಂಘಟನೆ ಪೇಟಾ ಹಂಚಿಕೊಂಡಿದ್ದು, ತಕ್ಷಣವೇ ಆನೆ ಸಫಾರಿ ಬದಲು ಎಲೆಕ್ಟ್ರಿಕ್ ವಾಹನ ಬಳಸುವಂತೆ ಸೂಚಿಸಿದೆ.
ರಷ್ಯಾದ ಇಬ್ಬರು ಪ್ರವಾಸಿಗರು ಆನೆ ಸಫಾರಿಗೆ ಬುಕ್ ಮಾಡಿದ್ದಾರೆ. ಬಳಿಕ ಮಹಿಳೆ ಆನೆ ಮೇಲೆ ಹತ್ತಿದ್ದರೆ, ಮತ್ತೊರ್ವ ಇನ್ನಷ್ಟೇ ಹತ್ತಬೇಕಿತ್ತು. ಈ ವೇಳೆ ಹಣ್ಣಾನೆ ಗೌರಿ ಕೆಳಗಿದ್ದ ಪ್ರವಾಸಿಗನ ಸೊಂಡಿಲಿನಿಂದ ಎತ್ತಿ ಒಂದೆರಡು ಸುತ್ತು ತಿರುಗಿಸಿ ಬಿಸಾಡಿದೆ. ಮಾವುತ ಅದೆಷ್ಟೆ ಪ್ರಯತ್ನಿಸಿದರೂ ಆನೆ ಪ್ರವಾಸಿಗರ ಮೇಲೆ ದಾಳಿ ನಿಲ್ಲಿಸಲಿಲ್ಲ. ಸಿಬ್ಬಂದಿಗಳು ಮಧ್ಯಪ್ರವೇಶಿಸಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದೆ.
ಪೋಸ್ ಕೊಡಲು ಹೋದ ಯುವತಿ ಎತ್ತೆಸೆದ ಆನೆ, ನಿಂಗಿದು ಬೇಕಿತ್ತಾ ಎಂದ ನೆಟ್ಟಿಗರು?
ಪ್ರವಾಸಿಗನ ಎತ್ತಿ ಬಿಸಾಡವ ವೇಳೆ ಮೇಲೆ ಕುಳಿತಿದ್ದ ಪ್ರವಾಸಿಗರು ಕೆಳಕ್ಕೆ ಬಿದ್ದಿದ್ದಾರೆ.ಇದರಿಂದ ಇಬ್ಬರಿಗೂ ಗಾಯಗಳಾಗಿದೆ. ತಕ್ಷಣವೇ ಇಬ್ಬರನ್ನು ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಫೆಬ್ರವರಿ 13 ರಂದು ನಡೆದಿದೆ. ಇಬ್ಬರು ರಷ್ಯಾ ಪ್ರವಾಸಿಗರು ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಪ್ರವಾಸಿ ತಾಣಗಳಲ್ಲಿ ಆನೆ ಸಫಾರಿ ಯಾಕೆ ಅನ್ನೋ ಪ್ರಶ್ನೆ ಮತ್ತೆ ಕೇಳಿಬರುತ್ತಿದೆ.
ಪ್ರಾಣಿ ಸಂರಕ್ಷಣಾ ಸಂಘಟನೆ ಪೇಟಾ ಈ ಕುರಿತು ವಿಡಿಯೋ ಹಂಚಿಕೊಂಡು ರಾಜಸ್ಥಾನ ಸರ್ಕಾರದ ವಿರುದ್ಧ ಗರಂ ಆಗಿದೆ. ಸಪಾರಿಯ ಹೆಣ್ಣಾನೆಯನ್ನು ಶಿಬಿರಕ್ಕೆ ಮರಳಿಸಲು ಸೂಚಿಸಿದ್ದಾರೆ. ಇದೇ ವೇಳೆ ಪ್ರವಾಸಿಗರ ಕೋಟೆ ವೀಕ್ಷಣೆಗೆ ಪ್ರಾಣಿಗಳ ಬದಲು ಎಲೆಕ್ಟ್ರಿಕ್ ವಾಹನ ಬಳಸುವಂತೆ ಮನವಿ ಮಾಡಿದೆ.
ಚಿಕ್ಕಮಗಳೂರು ನಗರದ ಆಸುಪಾಸಿನಲ್ಲೇ ಬೀಡುಬಿಟ್ಟ ಬಿಟ್ಟ ಕಾಡಾನೆಗಳು: ಆತಂಕದಲ್ಲಿ ಜನತೆ
2022ರಲ್ಲೂ ಗೌರಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿತ್ತು. ಪ್ರಾಣಿಗಳ ಸಂರಕ್ಷಣಾ ಇಲಾಖೆ 2018ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಗೌರಿ ಹೆಣ್ಣಾನೆಯನ್ನು ಸರ್ಕಾರ ಅನಧಿಕೃತವಾಗಿ ಬಳಸಿಕೊಳ್ಳುತ್ತಿದೆ. ಕಳೆದ 20 ವರ್ಷದಿಂದ ಸಫಾರಿಯಲ್ಲಿ ತೊಡಗಿಸಿಕೊಂಡಿರುವ ಆನೆಯನ್ನು ಮುಕ್ತಗೊಳಿಸಬೇಕು ಎಂದು ಸೂಚಿಸಿತ್ತು. ಆದರೆ ಇದುವರೆಗೂ ಗೌರಿಗೆ ವಿಶ್ರಾಂತಿ ನೀಡಿಲ್ಲ.
