ಆನೆ ಪಕ್ಕಕ್ಕೆ ಹೋಗಿ ಪೋಸ್ ಕೊಟ್ಟ ಯುವತಿಯೆನ್ನು ಎತ್ತೆಸೆದ ಘಟನೆ ನಡೆದಿದೆ. ಎಲೆಗಳನ್ನು ತಿನ್ನುತ್ತಿದ್ದ ಆನೆಯ ಸಮೀಪಕ್ಕೆ ಹೋದ ಯುವತಿ ಬಳಿಕ ತನ್ನ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪಕ್ಕಕ್ಕೆ ಕರೆದಿದ್ದಾಳೆ. ಆದರೆ ಕ್ಷಣಮಾತ್ರದಲ್ಲಿ ಆನೆ ಯುವತಿಯನ್ನು ಎತ್ತೆಸೆದಿದೆ.
ಮೃಗಾಲಯ ಅಥವಾ ವನ್ಯ ಪ್ರಾಣಿಗಳ ಶಿಬಿರಕ್ಕೆ ತೆರಳುವ ಬಹುತೇಕ ಪ್ರವಾಸಿಗರು ಫೋಟೋ, ವಿಡಿಯೋಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಾರೆ. ಅದರಲ್ಲೂ ಮನ್ಯ ಪ್ರಾಣಿಗಳನ್ನು ದೂರದಿಂದ ನೋಡಿ ಆನಂದಿಸಬೇಕೆ ಹೊರತು, ಪಕ್ಕಕ್ಕೆ ಹೋಗುವು, ಫೋಟೋ ಕ್ಲಿಕ್ಕಿಸುವ ಸಾಹಸಕ್ಕೆ ಕೈಹಾಕಬಾರದು. ಇದು ಯಾವತ್ತಿಗೂ ಅಪಾಯವನ್ನೇ ತಂದೊಡ್ಡಲಿದೆ. ಇಷ್ಟೇ ಅಲ್ಲ, ವನ್ಯ ಮೃಗಗಳ ಸ್ವಾತಂತ್ರ್ಯಕ್ಕೂ ಧಕ್ಕೆ ತರಲಿದೆ. ಇವೆಲ್ಲವನ್ನೂ ನಿರ್ಲಕ್ಷಿಸಿ ಗರಿಗಳನ್ನು ತಿನ್ನುತ್ತಿದ್ದ ಆನೆಯ ಪಕ್ಕಕ್ಕೆ ತೆರಳಿದ ಯುವತಿಯನ್ನು ಆನೆ ತಳ್ಳಿದ ಘಟನೆ ನಡೆದಿದೆ. ಆನೆಯ ದಾಳಿಗೆ ಯುವತಿ ಮಾರುದ್ದ ದೂರಕ್ಕೆ ಚಿಮ್ಮಿದ್ದಾಳೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಸಾಕಾನೆಗಳ ಶಿಬಿರಕ್ಕೆ ತೆರಳಿದ ಯುವತಿ ಹಾಗೂ ಇತರರು ಆನೆಯ ವಿಡಿಯೋ ಮಾಡಲು ಮುಂದಾಗಿದ್ದಾರೆ. ದ್ವಿಚಕ್ರ ವಾಹನದಿಂದ ಇಳಿದ ಯುವತಿ ನೇರವಾಗಿ ಆನೆಯ ಬಳಿ ತೆರಳಿದ್ದಾರೆ. ಇತ್ತ ಆನೆ ಗರಿಗಳನ್ನು ತಿನ್ನುತ್ತಿತ್ತು. ಈ ವಿಡಿಯೋದಲ್ಲಿ ಎರಡು ಆನೆಗಳನ್ನು ಕಾಣಬಹುದು.
ಚಿಕ್ಕಮಗಳೂರು ನಗರದ ಆಸುಪಾಸಿನಲ್ಲೇ ಬೀಡುಬಿಟ್ಟ ಬಿಟ್ಟ ಕಾಡಾನೆಗಳು: ಆತಂಕದಲ್ಲಿ ಜನತೆ
ಯುವತಿ ವಾಹನ ಇಳಿಯುತ್ತಿದ್ದಂತೆ ವಿಡಿಯೋ ಶೂಟ್ ಆರಂಭಗೊಂಡಿದೆ. ಆನೆಯ ಹತ್ತಿರದ ಹೋದ ಯುವತಿ ವಿಡಿಯೋ ಮಾಡುತ್ತಿದ್ದ ಆಪ್ತರನ್ನು ಹತ್ತಿರ ಕರೆದಿದ್ದಾಳೆ. ಯುವತಿ ಆನೆ ಸಮೀಪಕ್ಕೆ ಬರುತ್ತಿದ್ದಂತೆ ಆನೆ ಲಕ್ಷಣಗಳು ಬದಲಾಗಿದೆ. ಸಮಾಧಾನದಿಂದ ತಿನ್ನುತ್ತಿದ್ದ ಆನೆಯಲ್ಲಿ ಆತಂಕ, ಭಯ ಶುರುವಾಗಿದೆ. ಆದರೆ ಯುವತಿ ಮತ್ತಷ್ಟು ಆನೆಯ ಹತ್ತಿರಕ್ಕೆ ಹೋಗಿ ನಿಂತಿದ್ದಾಳೆ.
ತಿನ್ನುತ್ತಿದ್ದ ಆನೆ ಏಕಾಏಕಿ ತಲೆ ಎತ್ತಿ ಯುವತಿ ಮೇಲೆ ದಾಳಿ ಮಾಡಿದೆ. ಆನೆಯ ದಾಳಿಗೆ ಯುವತಿ ಮಾರುದ್ದ ದೂರ ಹೋಗಿ ಬಿದ್ದಿದ್ದಾಳೆ. ಯುವತಿ ಬಿದ್ದ ಬಿನ್ನಲ್ಲೆ ಆನೆ ಕೂಡ ಗಾಬರಿಗೊಂಡಿದೆ. ಅದೃಷ್ಠವಶಾತ್ ಮತ್ತೆ ದಾಳಿ ಮಾಡಿಲ್ಲ. ಇತ್ತ ಯುವತಿ ಬಿದ್ದಲ್ಲಿಂದ ಎದ್ದು ದೂರಕ್ಕೆ ಓಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಕಾಫಿನಾಡಿಗೆ ಎಂಟ್ರಿ ಕೊಟ್ಟ ಬೀಟಮ್ಮ ಅಂಡ್ ಗ್ಯಾಂಗ್: ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು!
ವನ್ಯಪ್ರಾಣಿಗಳನ್ನು ಅದರಷ್ಟಕ್ಕೆ ಬಿಟ್ಟುಬಿಡಿ. ಅದರ ಮುಂದೆ ಪೋಟೋ, ಫೋಸ್, ಆತ್ಮೀಯಾರಗುವ ಪ್ರಯತ್ನ, ಮುಟ್ಟುವ ಪ್ರಯತ್ನ ಮಾಡಬೇಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ದೂರದಿಂದ ಆನೆ ನೋಡಿ ಖುಷಿಪಡುವುದಕ್ಕಿಂತ ಹತ್ತಿರ ಹೋಗುವ ಸಾಹಸ ಬೇಕಿತ್ತಾ ಎಂದು ಹಲವರು ಪ್ರಶ್ನಿಸಿದ್ದಾರೆ.
