ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ. ಬಿಜೆಪಿ ಪ್ರಬಲ ಪೈಪೋಟಿ ನಡುವೆ ಟಿಎಂಸಿ 213 ಸ್ಥಾನ ಗೆಲ್ಲೋ ಮೂಲಕ 3ನೇ ಬಾರಿಗೆ ಬಂಗಾಳದ ಅಧಿಕಾರ ಚುಕ್ಕಾಣಿ ಹಿಡಿಲು ಸಜ್ಜಾಗಿದೆ. ಇದೀಗ ಮಮತಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕವನ್ನು ಟಿಎಂಸಿ ಘೋಷಿಸಿದೆ

ಕೋಲ್ಕತಾ(ಮೇ.03): ಪಶ್ಚಿಮ ಬಂಗಾಳದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಇದೀಗ ಹೊಸ ಸಂಪುಟ ರಚನೆಯಲ್ಲಿ ತೊಡಗಿದೆ. ಬಿಜೆಪಿಯ ಪ್ರಬಲ ಪೈಪೋಟಿ ಎದುರಿಸಿದ ಟಿಎಂಸಿ 213 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೇ.05 ರಂದು ಮಮತಾ ಬ್ಯಾನರ್ಜಿ 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ.

ಪ್ರಶಾಂತ್‌ ಕಿಶೋರ್‌ ಬಂಗಾಳದಲ್ಲಿ ಮಮತಾರನ್ನು ಗೆಲ್ಲಿಸಿದ್ದು ಹೀಗೆ!

ಟಿಎಂಸಿ ನಾಯಕ ಹಾಗೂ ಸಚಿವ ಪಾರ್ಥ ಚಟರ್ಜಿ ಪ್ರಮಾಣ ವಚನ ದಿನಾಂಕ ಘೋಷಿಸಿದ್ದಾರೆ. 3ನೇ ಬಾರಿಗೆ ಮಮತಾ ಬ್ಯಾನರ್ಜಿ ಅಧಿಕಾರದ ಗದ್ದುಗೆ ಏರಲಿದ್ದಾರೆ. ನಂದೀಗ್ರಾಮದಲ್ಲಿ ತಮ್ಮ ಶಿಷ್ಯ, ಟಿಎಂಸಿ ತೊರೆದು ಬಿಜೆಪಿ ಸೇರಿದ ಸುವೆಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದಾರೆ.

ಇಡೀ ಬಂಗಾಳದಲ್ಲಿ ಅಭೂತ ಪೂರ್ವ ಗೆಲುವು ದಾಖಲಿಸಿದ ಟಿಎಂಸಿಗೆ, ನಂದಿಗ್ರಾಮದಲ್ಲಿ ಮಮತಾ ಗೆಲುವಿನ ಸಂಭ್ರಮ ಆಚರಿಸಲು ಸಾಧ್ಯವಾಗಿಲ್ಲ ಸೋಲು ಕಂಡ ಮಮತಾ ಬ್ಯಾನರ್ಜಿ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರಾ ಅನ್ನೋ ಪ್ರಶ್ನೆಗಳು ಎದ್ದಿತ್ತು. ಆದರೆ ಇದೀಗ ಎಲ್ಲಾ ಕುತೂಹಲಗಳಿಗೆ ಉತ್ತರ ಸಿಕ್ಕಿದೆ.

Scroll to load tweet…

ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ನಿಜ!

ಪಶ್ಚಿಂ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 212 ಸ್ಥಾನ ಗೆದ್ದರೆ, ಬಿಜೆಪಿ 77 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.