Election Result ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾತ್ ರಾಜೀನಾಮೆ!

  • ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಭೇಟಿ ಮಾಡಿದ ಯೋಗಿ
  • ಯುಪಿ ಸಿಎಂ ಸ್ಥಾನಕ್ಕೆ ಯೋಗಿ ಆದಿತ್ಯನಾಥ್ ರಾಜೀನಾಮೆ
  • ಹೊಸ ಸರ್ಕಾರ ರಚನೆಗೆ ಹೈಕಮಾಂಡ್ ಜೊತೆ ಚರ್ಚೆ
Election Result 2022 Yogi Adityanath tendered his resignation as chief minister of Uttar Pradesh to Governor ckm

ಲಕ್ನೋ(ಮಾ.11): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಸತತ 2ನೇ ಬಾರಿ ಗದ್ದುಗೆ ಏರಲು ತಯಾರಿ ನಡೆಸುತ್ತಿದೆ. 255 ಸ್ಥಾನಗಳನ್ನು ಗೆದ್ದ ಬಿಜೆಪಿ ಹೊಸ ಇತಿಹಾಸ ರಚಿಸಿದೆ. ಹೊಸ ಸರ್ಕಾರ ರಚಿಸುವ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜಭವನದಲ್ಲಿ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಭೇಟಿ ಮಾಡಿದ ಯೋಗಿ ಆದಿತ್ಯಾಥ್, ರಾಜೀನಾಮೆ ಪತ್ರ ನೀಡಿದ್ದಾರೆ. ಮೊದಲ ಅವಧಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗಿ, ಹೊಸ ಸಂಪುಟ ರಚಿಸಲಿದ್ದಾರೆ. ಎರಡನೇ ಬಾರಿಗೂ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಈಗಾಗಲೇ ಬಿಜೆಪಿ ಕೇಂದ್ರ ನಾಯಕರು ಸ್ಪಷ್ಟಪಡಿಸಿದ್ದಾರೆ.

 

 

ಯುಪಿ ಗೆಲ್ಲಲು 193 ಕ್ಷೇತ್ರಗಳಿಗೆ ಮೋದಿ ಪರ್ಯಟನೆ, ಉನ್ನಾವೋ ಗೆಲುವಿನ ಹಿಂದಿದೆ ಈ ರಹಸ್ಯ!

ಚುನಾವಣೆ ಫಲಿತಾಂಶ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ನೀಡಿದ್ದ ಪ್ರಬಲ ಸ್ಪರ್ಧೆ ಮೆಟ್ಟಿನಿಂತ ಬಿಜೆಪಿ ಸತತ 2ನೇ ಬಾರಿ ಅಧಿಕಾರಕ್ಕೆ ಬಂದಿದೆ. ಕಳೆದ 35 ವರ್ಷಗಳಲ್ಲಿ ಮತ್ತೊಂದು ಅವಧಿಗೆ ಪುನರಾಯ್ಕೆಯಾದ ಮೊದಲ ಪಕ್ಷ ಎಂಬ ದಾಖಲೆ ಬರೆದಿದೆ. ಉತ್ತರಪ್ರದೇಶದಲ್ಲಿ ಗೆದ್ದವರು ಲೋಕಸಭೆ ಚುನಾವಣೆಯಲ್ಲೂ ಗೆಲ್ಲುತ್ತಾರೆ ಎಂಬ ಮಾತಿದೆ. ಇದಕ್ಕೆ ಪೂರಕವಾಗಿಯೇ ಈಗ ಈ ವಿದ್ಯಮಾನ ನಡೆದಿದ್ದು, ಉತ್ತರಪ್ರದೇಶದ ವಾರಾಣಸಿಯಿಂದ ಸಂಸದರಾಗಿರುವ ಹಾಗೂ 2024ರ ಮಹಾಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಪಾಲಿಗೆ ಇದು ಮಹತ್ವದ ಯಶಸ್ಸಾಗಿದೆ. ಅಂತೆಯೇ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವರ್ಚಸ್ಸು ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.

ಮಂಗಳೂರಿನ ಜೋಗಿ ಮಠಕ್ಕೆ ಪೀಠಾಧಿಪತಿ ನೇಮಕ ಮಾಡುವುದು Yogi Adityanath

5 ವರ್ಷ ಪೂರ್ಣಗೊಳಿಸಿ ಮರು ಅಯ್ಕೆಯಾದ ಮೊದಲ ಸಿಎಂ
ಮರಳಿ ಸಿಎಂ ಪಟ್ಟಏರುವ ಹೊಸ್ತಿಲಲ್ಲಿರುವ ಯೋಗಿ ಆದಿತ್ಯನಾಥ್‌ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಪೂರ್ಣ 5 ವರ್ಷ ಅಧಿಕಾರ ಚಲಾಯಿಸಿ ಪುನರಾಯ್ಕೆ ಮೊದಲ ವ್ಯಕ್ತಿ ಎಂಬ ಹಿರಿಮೆ ಇದೀಗ ಯೋಗಿ ಅವರಿಗೆ ಒಲಿದುಬಂದಿದೆ. ರಾಜ್ಯದಲ್ಲಿ ಈ ಹಿಂದೆ ನಾಲ್ಕು ಜನ ಸಿಎಂಗಳು ಮರಳಿ ಅಧಿಕಾರಕ್ಕೇರಿದ್ದರೂ ಅವರಾರ‍ಯರೂ 5ವರ್ಷಗಳ ಅವಧಿ ಪೂರ್ಣಗೊಳಿಸಿದ್ದಿಲ್ಲ. ಈವರೆಗೂ ಉತ್ತರಪ್ರದೇಶದಲ್ಲಿ 21 ಜನ ಮುಖ್ಯಮಂತ್ರಿಗಳಾಗಿ ಹೋಗಿದ್ದರೂ ಐದು ವರ್ಷ ಪೂರ್ಣಗೊಳಿಸಿದವರು ಮೂರೇ ಜನ. 2007ರಿಂದ 2012ರ ವರೆಗೆ ಬಿಎಸ್‌ಪಿಯ ಮಾಯಾವತಿ, 2012ರಿಂದ 2017ರವರೆಗೆ ಎಸ್‌ಪಿಯ ಅಖಿಲೇಶ್‌ ಯಾದವ್‌ ಮತ್ತು ಯೋಗಿ ಆದಿತ್ಯನಾಥ್‌.

ಸಿಎಂ ಯೋಗಿಗೆ 1ಲಕ್ಷ ಮತಗಳ ಅಂತರ ವಿಜಯ
ಇದೇ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಗೋರಕ್‌ಪುರ ಕ್ಷೇತ್ರದಲ್ಲಿ 1.03 ಲಕ್ಷಗಳ ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಶುಭವತಿ ಉಪೇಂದ್ರ ದತ್ತ ಶುಕ್ಲಾ ಅವರನ್ನು ಸೋಲಿಸಿದ್ದಾರೆ

ನೊಯ್ಡಾ ಮೂಢನಂಬಿಕೆ ಸುಳ್ಳು ಮಾಡಿದ ಯೋಗಿ
ಉತ್ತರ ಪ್ರದೇಶದ ನೊಯ್ಡಾಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸುಳ್ಳು ಮಾಡಿದ್ದಾರೆ. 2021ರಲ್ಲಿ ನೊಯ್ಡಾದಲ್ಲಿ ಕೈಗೊಳ್ಳಲಾಗಿದ್ದ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೋಗಿ ನೊಯ್ಡಾಗೆ ಭೇಟಿ ನೀಡಿದ್ದರು. ಯೋಗಿ ಅವರು ನೊಯ್ಡಾಗೆ ಭೇಟಿ ನೀಡಿರುವುದರಿಂದ ಈ ಬಾರಿ ಅಧಿಕಾರ ಕಳೆದುಕೊಳ್ಳುತ್ತಾರೆ. ಸಮಾಜವಾದಿ ಪಕ್ಷ ಗೆಲ್ಲುತ್ತದೆ ಎಂದು ಅಖಿಲೇಶ್‌ ಯಾದವ್‌ ಚುನಾವಣ ಪ್ರಚಾರದ ವೇಳೆ ಹಲವು ಬಾರಿ ಹೇಳಿದ್ದರು.

Latest Videos
Follow Us:
Download App:
  • android
  • ios