Yogi visit Delhi ವೆಂಕಯ್ಯ ನಾಯ್ಡು, ಬಿಎಲ್ ಸಂತೋಷ್ ಸೇರಿ ಪ್ರಮುಖರ ಭೇಟಿಯಾದ ಯೋಗಿ, ಸಂಪುಟ ರಚನೆ ಚರ್ಚೆ!

  • ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಗೆಲುವು, ಸಂಪುಟ ರಚನೆಗೆ ತಯಾರಿ
  • ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿಯಾದ ಯೋಗಿ
  • ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ ಯೋಗಿ ಆದಿತ್ಯನಾಥ್
  • ಸಂಪುಟ ರಚನೆ, ಪ್ರಮಾಣ ವಚನ ಸೇರಿ ಸಂಪುಟ ರಚನೆ ಚರ್ಚೆ
Election Result 2022 Uttar Pradesh Yogi Adityanath Meets vice president venkaiah naidu In Delhi ckm

ನವದೆಹಲಿ(ಮಾ.12): ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ನಾಲ್ಕು ರಾಜ್ಯಗಳಲ್ಲಿ ಸರ್ಕಾರ ರಚಿಸಲು ಬಿಜೆಪಿ ತಯಾರಿ ನಡೆಸುತ್ತಿದೆ. ಇದರ ಅಂಗವಾಗಿ ಅತೀ ದೊಡ್ಡರಾಜ್ಯದಲ್ಲಿ  ಹೊಸ ಸಂಪುಟ ರಚಿಸಲು ಮಾಜಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಸಂಜೆ ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ. ಇದಕ್ಕೂ ಮುನ್ನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಪ್ರಮುಖರನ್ನು ಯೋಗಿ ಆದಿತ್ಯನಾಥ್ ಬೇಟಿಯಾಗಿದ್ದಾರೆ.

ಪ್ರಧಾನಿ ಭೇಟಿಗೂ ಮೊದಲು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿಯಾದ ಯೋಗಿ ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ. ಇನ್ನು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಶ್ ಬೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಕೇಂದ್ರ ಸಚಿವ ಸರ್ಬಾನಂದ್ ಸೊನ್ವಾಲ್ ಜೊತೆಗೂ ಯೋಗಿ ಆದಿತ್ಯನಾಥ್ ಚರ್ಚೆ ನಡೆಸಿದ್ದರು.

ಪ್ರಧಾನಿ ಮೋದಿ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಲಿರುವ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಹೊಸ ಸಂಪುಟ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕ ಸೇರಿದಂತೆ ಹಲವು ಮಹತ್ವ ವಿಚಾರಗಳನ್ನು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

 

Election Result 5 ರಾಜ್ಯಗಳಲ್ಲಿ ಸರ್ಕಾರ ರಚನೆ ಕಸರತ್ತು ಶುರು

ಮಾ.18ರ ಹೋಳಿಗೂ ಮುನ್ನ ಯುಪಿ ಸಿಎಂ ಯೋಗಿ ಪ್ರಮಾಣ
ಉತ್ತರ ಪ್ರದೇಶದಲ್ಲಿ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ 2ನೇ ಬಾರಿ ಮುಖ್ಯಮಂತ್ರಿಯಾಗಿ ಮಾ.18ರ ಹೋಳಿ ಹಬ್ಬಕ್ಕೂ ಮೊದಲು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಮಾ.14 ಅಥವಾ 15ಕ್ಕೇ ಪದಗ್ರಹಣ ಮಾಡಬಹುದು ಎನ್ನಲಾಗಿದೆ.

7 ಹಂತಗಳಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 255 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟ 273 ಸ್ಥಾನಗಳನ್ನು ಗೆದ್ದುಕೊಂಡಿದೆ. ಉತ್ತರಪ್ರದೇಶದಲ್ಲಿ ಸರ್ಕಾರವೊಂದು ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು 37 ವರ್ಷಗಳ ಬಳಿಕ, ಮುಖ್ಯಮಂತ್ರಿಯೊಬ್ಬರು 5 ವರ್ಷ ಪೂರ್ಣಗೊಳಿಸಿ ಮರಳಿ ಅಧಿಕಾರಕ್ಕೆ ಬಂದಿದ್ದು ಇದೇ ಮೊದಲು, 15 ವರ್ಷಗಳ ಬಳಿಕ ವಿಧಾನಸಭೆಯಿಂದ ಆರಿಸಿ ಬಂದ ಜನಪ್ರತಿನಿಧಿ ಸಿಎಂ ಆಗುತ್ತಿದ್ದಾರೆ ಎಂಬ ಹಲವು ದಾಖಲೆಗಳು ಇದೀಗ ಬಿಜೆಪಿ ಮತ್ತು ಯೋಗಿ ಅವರ ಹೆಸರಿಗೆ ಬಂದಿದೆ.

Election Result ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾತ್ ರಾಜೀನಾಮೆ!

ಸಿಎಂ ಯೋಗಿಗೆ 1ಲಕ್ಷ ಮತಗಳ ಅಂತರ ವಿಜಯ
ಇದೇ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಗೋರಕ್‌ಪುರ ಕ್ಷೇತ್ರದಲ್ಲಿ 1.03 ಲಕ್ಷಗಳ ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಶುಭವತಿ ಉಪೇಂದ್ರ ದತ್ತ ಶುಕ್ಲಾ ಅವರನ್ನು ಸೋಲಿಸಿದ್ದಾರೆ.

2024ರ ಲೋಕಸಭೆ ಎಲೆಕ್ಷನ್‌ಗೆ ಬಿಜೆಪಿಗೆ ಟಾನಿಕ್‌
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಪ್ರಚಂಡ ಬಹುಮತ ಗಳಿಸಿ ಗೆದ್ದಿರುವುದು 2024ರ ಲೋಕಸಭೆ ಚುನಾವಣೆಯನ್ನು ಎದುರಿಸಲು ಬಿಜೆಪಿಗೆ ಬೂಸ್ಟರ್‌ ಡೋಸ್‌ ನೀಡಿದಂತಾಗಿದೆ.ಯುಪಿ ಗೆದ್ದವರು ದಿಲ್ಲಿ ಗೆಲ್ಲುತ್ತಾರೆ ಎಂಬ ನಂಬಿಕೆ ದೇಶದ ರಾಜಕೀಯ ವಲಯದಲ್ಲಿ ಬಹಳ ಹಿಂದಿನಿಂದ ಇದೆ. ಉತ್ತರ ಪ್ರದೇಶವು ದೇಶದಲ್ಲೇ ಅತಿಹೆಚ್ಚು ಜನಸಂಖ್ಯೆಯಿರುವ, ಅತಿಹೆಚ್ಚು ವಿಧಾನಸಭೆ (403) ಮತ್ತು ಲೋಕಸಭೆ (80) ಸ್ಥಾನಗಳನ್ನು ಹೊಂದಿರುವ ರಾಜ್ಯ. ಅಲ್ಲಿ ಲೋಕಸಭೆಗೆ ಯಾವ ಪಕ್ಷ ಅತಿಹೆಚ್ಚು ಸ್ಥಾನ ಗೆಲ್ಲುತ್ತದೆಯೋ ಆ ಪಕ್ಷ ದೆಹಲಿಯಲ್ಲಿ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಶಾಸಕರು ಯಾವ ಪಕ್ಷದಿಂದ ಗೆಲ್ಲುತ್ತಾರೋ ಆ ಪಕ್ಷಕ್ಕೆ ಲೋಕಸಭೆಯಲ್ಲಿ ಗೆಲ್ಲುವುದು ಸುಲಭವಾಗುತ್ತದೆ ಎಂಬುದು ಲೆಕ್ಕಾಚಾರ. ಹೀಗಾಗಿ ಉತ್ತರ ಪ್ರದೇಶದ ಗೆಲುವಿನಿಂದ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios