Asianet Suvarna News Asianet Suvarna News

Election Result 5 ರಾಜ್ಯಗಳಲ್ಲಿ ಸರ್ಕಾರ ರಚನೆ ಕಸರತ್ತು ಶುರು

- ಇಂದು ಮೋದಿ-ಯೋಗಿ ಭೇಟಿ

- ಸರ್ಕಾರ ರಚನೆ ಹಕ್ಕು ಮಂಡಿಸಿದ ಮಾನ್‌

- ಗೋವಾ ಸಿಎಂ ರಾಜೀನಾಮೆ

- ಮಣಿಪುರದಲ್ಲಿ ಬಿಜೆಪಿಗೆ ಜೆಡಿಯು ಬೆಂಬಲ
 

bjp and aap busy in  government formation in five states after election win san
Author
Bengaluru, First Published Mar 13, 2022, 4:15 AM IST

ನವದೆಹಲಿ (ಮಾ.13): ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ (Five State Election Result) ಪ್ರಕಟಗೊಂಡ ಬೆನ್ನಲ್ಲೇ, ಎಲ್ಲಾ 5 ರಾಜ್ಯಗಳಲ್ಲೂ ಸರ್ಕಾರ ರಚನೆಯ (government formation) ಪ್ರಕ್ರಿಯೆಗಳು ಗರಿಗೆದರಿವೆ. 5 ರಾಜ್ಯಗಳ ಪೈಕಿ ಎಲ್ಲೂ ಅತಂತ್ರ ಸ್ಥಿತಿ ರಚನೆಯಾಗದ ಕಾರಣ, ಫಲಿತಾಂಶ ಪ್ರಕಟಕ್ಕೆ ಮುನ್ನ ಕಂಡುಬಂದಿದ್ದ ರೆಸಾರ್ಟ್‌ ರಾಜಕೀಯಕ್ಕೆ (Resort Politics) ಇದೀಗ ತೆರೆ ಬಿದ್ದಿದೆ. ಜೊತೆಗೆ ಎಲ್ಲಾ 5 ರಾಜ್ಯಗಳಲ್ಲೂ ಸುಲಲಿತವಾಗಿ ಹೊಸ ಸರ್ಕಾರ ರಚನೆ ಪ್ರಕ್ರಿಯೆಗಳು ಮುಂದುವರೆದಿವೆ.

ಹಕ್ಕು ಮಂಡನೆ: ಪಂಜಾಬ್‌ನಲ್ಲಿ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚನೆಯ ಅವಕಾಶ ಪಡೆದುಕೊಂಡಿರುವ ಆಮ್‌ಆದ್ಮಿ ಪಕ್ಷ (Aam Admi Party), ಶನಿವಾರ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಸಿಂಗ್‌ ಮಾನ್‌ (Bhagwant singh Mann) ಅವರನ್ನು ರಾಜ್ಯಪಾಲ ಬನ್ವಾರಿ ಲಾಲ್‌ ಪುರೋಹಿತ್‌ ಅವರನ್ನು ಭೇಟಿ ಮಾಡಿ ಈ ಹಕ್ಕು ಮಂಡಿಸಿದರು. ಮಾ.16ರಂದು ಪ್ರಮಾಣ ವಚನ ಸ್ವೀಕರಿಸಲು ಈಗಾಗಲೇ ಆಮ್‌ ಆದ್ಮಿ ಪಕ್ಷದ ನಿರ್ಧರಿಸಿದೆ.

ಇಂದು ಮೋದಿ-ಯೋಗಿ ಭೇಟಿ: ಉತ್ತರಪ್ರದೇಶದಲ್ಲಿ ದಾಖಲೆಯ 2ನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಯೋಗಿ ಆದಿತ್ಯನಾಥ್‌ (Yogi Adityanath) ಭಾನುವಾರ ದೆಹಲಿಗೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಅವರನ್ನು ಭೇಟಿ ಮಾಡಲಿದ್ದಾರೆ.

ಗೋವಾ ಸಿಎಂ ರಾಜೀನಾಮೆ: ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಶನಿವಾರ ರಾಜ್ಯಪಾಲ ಶ್ರೀಧರನ್‌ ಪಿಳ್ಳೈ ಅವರನ್ನು ಭೇಟಿ ಮಾಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. Ã

ಬಿಜೆಪಿಗೆ ಜೆಡಿಯು ಬೆಂಬಲ: ಮಣಿಪುರದಲ್ಲಿ ಬಿಜೆಪಿ ಸರ್ಕಾರವನ್ನು ಬೆಂಬಲಿಸುವುದಾಗಿ 6 ಸದಸ್ಯರನ್ನು ಹೊಂದಿರುವ ಜೆಡಿಯು ಹೇಳಿದೆ. 60 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 32 ಸ್ಥಾನ ಗೆದ್ದಿರುವ ಬಿಜೆಪಿ ಸ್ವಂತ ಬಲದಿಂದಲೇ ಸರ್ಕಾರ ರಚಿಸುವ ಅವಕಾಶವನ್ನು ಹೊಂದಿದೆ.

ಧಮಿ ಪರ ಒಲವು: ಚುನಾವಣೆಯಲ್ಲಿ ಸೋತ ಹೊರತಾಗಿಯೂ ಪುಷ್ಕರ್‌ ಸಿಂಗ್‌ ಧಮಿ ಅವರನ್ನೇ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಮುಂದುವರೆಸಲು ರಾಜ್ಯದ ಹಲವು ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಧಾನಸಭೆಗೆ ಆಯ್ಕೆಯಾಗಿರುವ 6 ಶಾಸಕರು, ಧಮಿ ಅವರಿಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡುವುದಾಗಿ ಘೋಷಿಸಿದ್ದಾರೆ.

ದಕ್ಷಿಣಕ್ಕೆ ಆಪ್‌: ಬೃಹತ್‌ ಸದಸ್ಯತ್ವ ಆಂದೋಲನ, ಪಾದಯಾತ್ರೆಗೆ ಸಿದ್ಧತೆ
ನವದೆಹಲಿ (ಮಾ.13):
ಪಂಜಾಬ್‌ನಲ್ಲಿ ದೊರೆತ ಅಭೂತ ಜಯದಿಂದ ಉತ್ತೇಜಿತವಾಗಿರುವ ಆಮ್‌ ಆದ್ಮಿ ಪಕ್ಷ (ಆಪ್‌) ಇದೀಗ ದಕ್ಷಿಣ ಭಾರತದತ್ತ (South India) ಗಮನ ಹರಿಸಿದೆ. ದಕ್ಷಿಣದ ರಾಜ್ಯಗಳಲ್ಲಿ ಬೃಹತ್‌ ಸದಸ್ಯತ್ವ ಆಂದೋಲನ ಹಾಗೂ ಪಾದಯಾತ್ರೆಗಳನ್ನು ಕೈಗೊಳ್ಳಲು ಪಕ್ಷದ ನಾಯಕತ್ವ ನಿರ್ಧರಿಸಿದೆ.

Khel Mahakumbh 2022 ಅಹಮದಾಬಾದ್‌ನಲ್ಲಿ 11ನೇ ಖೇಲ್ ಮಹಾಕುಂಭಕ್ಕೆ ಪ್ರಧಾನಿ ಮೋದಿ ಚಾಲನೆ!
ದೆಹಲಿಯಲ್ಲಿ ಸತತ ಎರಡನೇ ಬಾರಿ ಸರ್ಕಾರ ರಚಿಸಿ, ಪಂಜಾಬ್‌ನಲ್ಲಿ ದೊಡ್ಡ ಜಯ ಸಾಧಿಸಿದ ನಂತರ ದೇಶಾದ್ಯಂತ ಪಕ್ಷವನ್ನು ಬೆಳೆಸಲು ಮುಂದಾಗಿರುವ ನಾಯಕರು, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಹಾಗೂ ಲಕ್ಷದ್ವೀಪದಲ್ಲಿ ಸದಸ್ಯತ್ವ ಆಂದೋಲನಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಸೋಮನಾಥ್‌ ಭಾರ್ತಿ (Somnath Bharti) ತಿಳಿಸಿದ್ದಾರೆ.

ಯುಪಿಯಲ್ಲಿ ಒಳ್ಳೆ ಕೆಲಸ ಮಾಡಿದ್ರೆ ಕಮ್ಮಿ ಸೀಟ್‌ ಯಾಕೆ ಬಂದ್ವು?: ಮೋದಿಗೆ ಸಲಿಂ ಅಹ್ಮದ್ ಪ್ರಶ್ನೆ
ಜನರ ಮನಸ್ಥಿತಿಯನ್ನು ಗಮನಿಸಿದರೆ ಆಪ್‌ನ ರಾಜಕಾರಣದತ್ತ ಅವರು ಒಲವು ತೋರುತ್ತಿರುವುದು ಕಂಡುಬರುತ್ತಿದೆ. ದಕ್ಷಿಣ ಭಾರತದಿಂದ ನಮಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಪಕ್ಷದ ಸ್ಥಳೀಯ ತಂಡಗಳು ದೊಡ್ಡ ಪ್ರಮಾಣದಲ್ಲಿ ಶೀಘ್ರದಲ್ಲೇ ಸದಸ್ಯತ್ವ ಆಂದೋಲನ ಆರಂಭಿಸಲಿವೆ ಎಂದು ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಆಪ್‌ ಸಕ್ರಿಯವಾಗಿದ್ದು, ಮುಂಬರುವ ಬೆಂಗಳೂರು ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

Follow Us:
Download App:
  • android
  • ios