ಭಾರಿ ಕುತೂಹಲ ಕೆರಳಿಸಿದ ಅಸ್ಸಾಂ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಅಸ್ಸಾಂ ಜನತೆ ಮತ್ತೆ ಬಿಜೆಪಿಯತ್ತ ಒಲವು ತೋರಿದ್ದಾರೆ. ಹೀಗಾಗಿ  ಬಿಜೆಪಿ ಮೈತ್ರಿ ಕೂಟ NDA ಮತ್ತೆ ಅಧಿಕಾರಕ್ಕೇರಲು ಸಜ್ಜಾಗಿದೆ.

ಅಸ್ಸಾಂ(ಮೇ.01); ಪಂಚ ರಾಜ್ಯಗಳ ಚುನಾವಣೆ ಪೈಕಿ ಅಸ್ಸಾಂ ಹಲವು ಕಾರಣಗಳಿಂದ ಭಾರಿ ಕುತೂಹಲ ಕೆರಳಿಸಿತ್ತು. ಬಿಜೆಪಿ ಅಧಿಕಾರ ಉಳಿಸಿಕೊಳ್ಳುತ್ತಾ ಅಥವಾ ಕಾಂಗ್ರೆಸ್ ಕಮಾಲ್ ಮಾಡುತ್ತಾ ಅನ್ನೋ ಪ್ರಶ್ನೆ ಮೂಡಿತ್ತು. ಇದೀಗ ಚುನಾವಣಾ ಫಲಿತಾಂಶ ಎಲ್ಲಾ ಕುತೂಹಲಕ್ಕೆ ಉತ್ತರ ನೀಡಿದೆ. ಅಸ್ಸಾಂನಲ್ಲಿ ಬಿಜೆಪಿ ಕೂಟದ ಎನ್‌ಡಿಎ ಮತ್ತೆ ಅಧಿಕಾರಕ್ಕೇರಲು ಸಜ್ಜಾಗಿದೆ.

ಬಸವಕಲ್ಯಾಣ ಬೈಎಲೆಕ್ಷನ್‌: ಬಿಜೆಪಿ ಅಭ್ಯರ್ಥಿ ಶರಣು ಸಲಗರಗೆ ಪ್ರಚಂಡ ಗೆಲುವು

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ NDA ಮೈತ್ರಿಕೂಟ 78 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದರೆ, ಇತ್ತ ಕಾಂಗ್ರೆಸ್ ನೇತೃತ್ವದ ಮಹಜೋತ್ ಕೂಟ 47 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಇದೇ ಮುನ್ನಡೆ ಮುಂದುವರಿದರೆ ಈ ಬಾರಿ NDA 90 ಸ್ಥಾನ ಗೆಲ್ಲಲಿದೆ. ಇತ್ತ ಕಾಂಗ್ರೆಸ್ 35 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಲಿದೆ ಅನ್ನೋ ಲೆಕ್ಕಾಚಾರ ಹೊರಬಂದಿದೆ.

2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 86 ಸ್ಥಾನ ಗೆಲ್ಲೋ ಮೂಲಕ ಅಸ್ಸಾಂನಲ್ಲಿ ಅಧಿಕಾರದ ಗದ್ದುಗೆ ಏರಿತ್ತು. ಸರ್ಬಾನಂದ ಸೊನೋವಾಲ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು. ಈ ಬಾರಿ ಲೆಕ್ಕಾಚಾರದಲ ಪ್ರಕಾರ 4 ಸ್ಥಾನಗಳನ್ನು ಅಧಿಕ ಗೆಲ್ಲಲಿದೆ. ಇದು ಸದ್ಯದ ಮುನ್ನಡೆಗಳ ಆಧಾರದ ಲೆಕ್ಕಾಚಾರವಾಗಿದೆ. 

ದೇವರನಾಡಿನಲ್ಲಿ ಆಡಳಿತರೂಢ ಪಕ್ಷ ಮತ್ತೆ ಅಧಿಕಾರಕ್ಕೆ: ನಾಲ್ಕು ದಶಕದ ಇತಿಹಾಸ!

ಅಸ್ಸಾಂನಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದೇ ವೇಳೆ ಸೋನೋವಾಲ್ ಮತ್ತೆ ಅಧಿಕಾರಕ್ಕೇರುವುದು ಖಚಿತ ಎಂದಿದ್ದಾರೆ. ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ರಚಿಸುತ್ತದೆ ಎಂದು ನಾವು ಖಚಿತವಾಗಿ ಹೇಳಬಹುದು. ನಮ್ಮ ಪಾಲುದಾರರಾದ ಎಜಿಪಿ ಮತ್ತು ಯುಪಿಪಿಎಲ್ ಜೊತೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಸೋನೋವಾಲ್ ಹೇಳಿದ್ದಾರೆ. 

ಅಸ್ಸಾಂನಲ್ಲಿ ಎರಡು ಹಂತದದಲ್ಲಿ ಮತದಾನ ನಡೆದಿತ್ತು. ಮಾರ್ಚ್ 27 ರಂದು ಮೊದಲ ಹಾಗೂ ಎಪ್ರಿಲ್ 1 ರಂದು 2ನೇ ಹಾಗೂ ಅಂತಿಮ ಹಂತದಲ್ಲಿ ಮತದಾನ ನಡೆದಿತ್ತು.

"