Asianet Suvarna News Asianet Suvarna News

ಬಸವಕಲ್ಯಾಣ ಬೈಎಲೆಕ್ಷನ್‌: ಬಿಜೆಪಿ ಅಭ್ಯರ್ಥಿ ಶರಣು ಸಲಗರಗೆ ಪ್ರಚಂಡ ಗೆಲುವು

ಬಸವಕಲ್ಯಾಣ ಮತ ಕ್ಷೇತ್ರದ ಜನ ನನ್ನ ತಂದೆ ತಾಯಿಗಿಂತ ದೊಡ್ಡವರು| ನನ್ನ ಗೆಲುವು ಬಸವಕಲ್ಯಾಣ ಜನರ ಪಾದಕ್ಕೆ ಅರ್ಪನೆ| ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್‌, ಡಿಸಿಎಂ ಸವದಿ, ಬಸವಕಲ್ಯಾಣ ಕ್ಷೇತ್ರದ ಉಸ್ತುವಾರಿ ವಿ.ಸೋಮಣ್ಣ, ಸಂಸದ ಭಗವಂತ ಖೂಬಾ ಸೇರಿದಂತೆ ಬಿಜೆಪಿ ನಾಯಕರ ಗೆಲುವು ಇದಾಗಿದೆ: ಸಲಗರ| 

BJP Candidate Sharanu Salagar Won in Basavakalyan Byelection grg
Author
Bengaluru, First Published May 2, 2021, 2:07 PM IST

ಬೀದರ್(ಮೇ.02): ಜಿಲ್ಲೆಯ ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಭರ್ಜರಿ ಗೆಲವು ದಾಖಲಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಮ್ಮ, ಜೆಡಿಎಸ್‌ ಅಭ್ಯರ್ಥಿ ಯಾಸ್ರಬ್‌ ಖಾದ್ರಿ ಹಾಗೂ ಬಿಜೆಪಿ ಭಂಡಾಯ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ ಖೂಬಾ ಅವರಿಗೆ ತೀವ್ರ ನಿರಾಸೆಯಾಗಿದೆ.

ಪ್ರಚಂಡ ಗೆಲುವಿನ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಶರಣು ಸಲಗರ ಅವರು, ಬಸವಕಲ್ಯಾಣ ಮತ ಕ್ಷೇತ್ರದ ಜನ ನನ್ನ ತಂದೆ ತಾಯಿಗಿಂತ ದೊಡ್ಡವರಾಗಿದ್ದಾರೆ. ಇವತ್ತಿನ ನನ್ನ ಗೆಲುವು ಬಸವಕಲ್ಯಾಣ ಜನರ ಪಾದಕ್ಕೆ ಅರ್ಪಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್‌, ಡಿಸಿಎಂ ಸವದಿ, ಬಸವಕಲ್ಯಾಣ ಕ್ಷೇತ್ರದ ಉಸ್ತುವಾರಿ ವಿ.ಸೋಮಣ್ಣ, ಸಂಸದ ಭಗವಂತ ಖೂಬಾ ಸೇರಿದಂತೆ ಬಿಜೆಪಿ ನಾಯಕರ ಗೆಲುವು ಇದಾಗಿದೆ ಎಂದು ಬಣ್ಣಿಸಿದ್ದಾರೆ.

ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ 30 ಸಾವಿರ ಮತಗಳಿಂದ ಗೆಲವು: ಬಿಜೆಪಿ ಎಡವಿದ್ದೆಲ್ಲಿ..?

ದಿನದ 24 ಗಂಟೆಗಳಲ್ಲಿ 19 ಗಂಟೆ ಜನರಿಗಾಗಿ ಸಮಯ ಮೀಸಲಿಡುತ್ತೇನೆ. ಜನರ ತೊಂದರೆ ನಿರ್ಮೂಲನೆಗಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. 7 ಜನ್ಮ ಸಮಯ ಕೊಟ್ಟರೂ ಬಸವಕಲ್ಯಾಣ ಜನರ ರುಣ ತೀರಿಸಲು ಆಗಲ್ಲ. ಹಗಲು- ರಾತ್ರಿ ಎನ್ನದೇ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಬಸವಕಲ್ಯಾಣದಲ್ಲಿ ಜಯ ಸಾಧಿಸಿದ ಶರಣು ಸಲಗರ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಅಶ್ವತ್ಥ್‌ ನಾರಾಯಣ ಹಾಗೂ ಲಕ್ಷ್ಮಣ ಸವದಿ ಸೇರಿದಂತೆ ಮತ್ತಿತರು ಗಣ್ಯರು ಅಭಿನಂದನೆಗಳನ್ನ ಸಲ್ಲಿಸಿದ್ದಾರೆ. 

"

ಬಸವಕಲ್ಯಾಣ ಮಹಾ ಜನತೆಗೆ ಕೋಟಿ ಕೋಟಿ ನಮನ 

ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಶರಣು ಸಲಗರ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರು, ಬಸವಕಲ್ಯಾಣ ಮಹಾ ಜನತೆಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ. ಶರಣು ಸಲಗರ ಅವರಿಗೆ ಅವರು ಆಶೀರ್ವಾದ ಮಾಡಿದ್ದು ನಾವು ಯಾವತ್ತು ಮರೆಯಲ್ಲ. ರಾಜ್ಯ, ರಾಷ್ಟ್ರ ನಾಯಕರು ಕುಳಿತುಕೊಂಡು ಶರಣು ಸಲಗರರನ್ನ ಗೆಲ್ಲಿಸಿದ್ದೇವೆ. ಬಸವಕಲ್ಯಾಣ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ಬಸವಕಲ್ಯಾಣ ಜನರ ಋಣ ತೀರಿಸುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವಕಲ್ಯಾಣ ಗುರುತಿಸುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬೀದರ್‌ ಜಿಲ್ಲೆಯಿಂದ ನಾನೊಬ್ಬನೇ ಬಿಜೆಪಿ ಶಾಸಕನಿದ್ದೆ ಈಗ ಬಸವಕಲ್ಯಾಣ ಜನ ಕೈ ಬಲಪಡಿಸಿದ್ದಾರೆ. ಶರಣು ಸಲಗರ ನೇತೃತ್ವದಲ್ಲಿ ಶೀಘ್ರದಲ್ಲೇ ಅನುಭವ ಮಂಟಪ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ. ಶರಣು ಸಲಗರ ಸ್ಥಳೀಯದವರೇ ಆಗಿದ್ದಾರೆ ಮುಂದೆ ಪರ್ಮನೆಂಟ್‌ ಆಗಿ ಸ್ಥಳೀಯದವರಾಗಿ ಜನರ ಸೇವೆ ಮಾಡುತ್ತಾರೆ. ನಮ್ಮ ಮಾರ್ಗದರ್ಶನದಲ್ಲಿ ಅವರನ್ನ ಮತ್ತಷ್ಟು ಸ್ಟ್ರಾಂಗ್ ಮಾಡುತ್ತೇನೆ. ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ವಿ.ಸೋಮಣ್ಣ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇವೆ. ಅವರಿಗೂ ಕೂಡ ನಾನು ಅಭುನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios