Asianet Suvarna News Asianet Suvarna News

Breaking: ಹರಿಯಾಣ ಚುನಾವಣೆ: ಮತದಾನದ ದಿನಾಂಕ ಬದಲಾವಣೆ

ಭಾರತದ ಚುನಾವಣಾ ಆಯೋಗವು ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕವನ್ನು ಅಕ್ಟೋಬರ್ 1 ರಿಂದ ಅಕ್ಟೋಬರ್ 5 ಕ್ಕೆ ಬದಲಾಯಿಸಿದೆ. ಅಸೋಜ್ ಅಮವಾಸ್ಯೆ ಹಬ್ಬವನ್ನು ಆಚರಿಸುವ ಬಿಷ್ಣೋಯ್ ಸಮುದಾಯದ ಮನವಿಗಳನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Election Commission revised  Haryana election to October 5 Vote Count on 8th san
Author
First Published Aug 31, 2024, 6:57 PM IST | Last Updated Aug 31, 2024, 7:01 PM IST

ನವದೆಹಲಿ (ಆ.31): ಭಾರತದ ಚುನಾವಣಾ ಆಯೋಗವು (ECI) ಹರಿಯಾಣ ಅಸೆಂಬ್ಲಿ ಚುನಾವಣೆಯ ಮತದಾನದ ದಿನಾಂಕದಲ್ಲಿ ಬದಲಾವಣೆಯನ್ನು ಘೋಷಿಸಿದೆ. ಅಕ್ಟೋಬರ್‌ 1 ರ ಬದಲಾಗಿ ಅಕ್ಟೋಬರ್‌ 5 ರಂದು ಹರಿಯಾಣ ವಿಧಾನಸಭೆ ಚುನಾವಣೆ ನಡೆಯದೆ. ಇನ್ನು ಜಮ್ಮು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಅಕ್ಟೋಬರ್‌ 4ರ ಬದಲಿಗೆ ಅಕ್ಟೋಬರ್‌ 8ಕ್ಕೆ ಬದಲಾಯಿಸಲಾಗಿದೆ. ಅಸೋಜ್ ಅಮವಾಸ್ಯೆ ಹಬ್ಬವನ್ನು ಆಚರಿಸುವ ಬಿಷ್ಣೋಯ್ ಸಮುದಾಯದ ದೀರ್ಘಕಾಲದ ಸಂಪ್ರದಾಯವನ್ನು ಪರಿಗಣಿಸಿ ದಿನಾಂಕಗಳನ್ನು ಪರಿಷ್ಕರಿಸುವ ನಿರ್ಧಾರವನ್ನು ಮಾಡಲಾಗಿದೆ.

ಜಮ್ಮು ಕಾಶ್ಮೀರ, ಹರ್ಯಾಣ ವಿಧಾನಸಭೆ ಚುನಾವಣೆ ಘೋಷಣೆ: ಸೆ.18 ಮತದಾನ ಆರಂಭ, ಅ. 4ಕ್ಕೆ ಫಲಿತಾಂಶ!

"ಶತಮಾನಗಳ ಹಳೆಯ ಅಸೋಜ್ ಅಮವಾಸ್ಯೆ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಹರಿಯಾಣದ ಬಿಷ್ಣೋಯ್ ಸಮುದಾಯದ ಜನರು ರಾಜಸ್ಥಾನಕ್ಕೆ ಸಾಮೂಹಿಕವಾಗಿ ತೆರಳುವ ಕುರಿತು ರಾಷ್ಟ್ರೀಯ ರಾಜಕೀಯ ಪಕ್ಷಗಳು, ರಾಜ್ಯ ರಾಜಕೀಯ ಪಕ್ಷಗಳು ಮತ್ತು ಅಖಿಲ ಭಾರತ ಬಿಷ್ಣೋಯಿ ಮಹಾಸಭಾದಿಂದ ಬಂದ ಮನವಿಗಳನ್ನು ಸ್ವೀಕರಿಸಲಾಗಿದೆ" ಎಂದು ಚುನಾವಣಾ ಸಮಿತಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. "ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಮತದಾನದ ಹಕ್ಕನ್ನು ನಿರಾಕರಿಸಬಹುದು ಮತ್ತು ಹರಿಯಾಣದ ಶಾಸಕಾಂಗ ಸಭೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಕಡಿಮೆ ಮಾಡಬಹುದು" ಆ ಕಾರಣಕ್ಕಾಗಿ ಬದಲಾವಣೆ ಮಾಡಿರುವುದಾಗಿ ತಿಳಿಸಿದೆ.

ಆಮ್ ಆದ್ಮಿ ಪಾರ್ಟಿಯಿಂದ ಮಹತ್ವದ ಹೆಜ್ಜೆ, ಏಕಾಏಕಿ ಹರ್ಯಾಣ ಘಟಕ ವಿಸರ್ಜಿಸಿದ ಕೇಜ್ರಿವಾಲ್!

Latest Videos
Follow Us:
Download App:
  • android
  • ios