ಆಮ್ ಆದ್ಮಿ ಪಾರ್ಟಿಯಿಂದ ಮಹತ್ವದ ಹೆಜ್ಜೆ, ಏಕಾಏಕಿ ಹರ್ಯಾಣ ಘಟಕ ವಿಸರ್ಜಿಸಿದ ಕೇಜ್ರಿವಾಲ್!
ಹಿಮಾಚಲ ಪ್ರದೇಶ ಚುನಾವಣೆ ಬಳಿಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಗೆ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ. ಒಂದಲ್ಲ ಒಂದು ಹಿನ್ನಡೆ, ಮುಖಭಂಗ ಎದುರಾಗುತ್ತಲೇ ಇದೆ. ಇದೀಗ ಏಕಾಏಕಿ ಹರ್ಯಾಣದ ಆಮ್ ಆದ್ಮಿ ಪಾರ್ಟಿ ಘಟಕವನ್ನು ಸಂಪೂರ್ಣವಾಗಿ ವಿಸರ್ಜಿಸಲಾಗಿದೆ.
ನವದೆಹಲಿ(ಜ.25): ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಾರ್ಟಿಗೆ ಹಿಮಾಚಲ ಪ್ರದೇಶ ಚುನಾವಣೆ ಹಿನ್ನಡೆ ತಂದಿತ್ತು. ಇತ್ತ ಪಕ್ಷದ ನಾಯಕರು ಭ್ರಷ್ಟಚಾರ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಜೈಲು ಪಾಲಾಗಿದ್ದಾರೆ. ಮತ್ತೊಂದೆಡೆ ಪಕ್ಷ ಸಂಘಟನೆಗೆ ಅತೀವ ಒತ್ತು ನೀಡಿರುವ ಅರವಿಂದ್ ಕೇಜ್ರಿವಾಲ್‌ಗೆ ಇದೀಗ ಮತ್ತೊಂದು ಹಿನ್ನಡೆಯಾಗಿದೆ. ಏಕಾಏಕಿ ಹರ್ಯಾಣ ಆಮ್ ಆದ್ಮಿ ಪಾರ್ಟಿ ಘಟಕವನ್ನು ವಿಸರ್ಜಿಸಲಾಗಿದೆ. ಹರ್ಯಾಣ ಆಮ್ ಆದ್ಮಿ ಪಾರ್ಟಿ ಹೊಸದಾಗಿ ಸದಸ್ಯರನ್ನು ನೇಮಕ ಮಾಡಲಿದೆ ಎಂದಿದೆ.
ಹರ್ಯಾಣದಲ್ಲಿ ಆಮ್ ಆದ್ಮಿ ಪಾರ್ಟಿ ಕೈಗೊಂಡಿರುವ ಈ ನಡೆ ರಾಜಕೀಯವಾಗಿ ಸವಾಲಾಗಿದೆ. ಮುಂದಿನ ವರ್ಷ ಹರ್ಯಾಣದಲ್ಲಿ ಚುನಾವಣೆ ಎದುರಾಗಲಿದೆ. ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಇತ್ತ ಹರ್ಯಾಣದ ಮೇಲೆ ಹಿಡಿತ ಸಾಧಿಸಲು ಹೊರಟ್ಟಿದ್ದ ಆಪ್ ಇದೀಗ ಹೊಸದಾಗಿ ಪದಾಧಿಕಾರಿಗಳು, ಸದಸ್ಯರ ನೇಮಕ ಮಾಡಬೇಕಾಗಿದೆ.
Mayor election Result ಚಂಡೀಘಡದಲ್ಲಿ ಆಪ್‌ಗೆ ಹಿನ್ನಡೆ, 1 ಮತದಿಂದ ಬಿಜೆಪಿಗೆ ಗೆಲುವು!
ಪಂಜಾಬ್ ಗೆಲುವಿನ ಬಳಿಕ ಆಮ್ ಆದ್ಮಿ ಪಾರ್ಟಿ ಹರ್ಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಪಾರ್ಟಿ ವಿಸ್ತರಣೆ ಮಾಡಲು ಆಪ್ ಮುಂದಾಗಿತ್ತು. ಇದಕ್ಕಾಗಿ ಹಿಮಾಚಲ ಪ್ರದೇಶದಲ್ಲಿ ಶಕ್ತಿಮೀರಿ ಪ್ರಯತ್ನ ಮಾಡಿತ್ತು. ಆದರೆ ಆಪ್ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು. ಆದರೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಪ್ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಈ ಚುನಾವಣೆ ಬಳಿಕ ಹರ್ಯಾಣದಲ್ಲಿ ಪಕ್ಷ ವಿಸ್ತರಣೆಗೆ ಆಪ್ ಮುಂದಾಗಿತ್ತು.
ಕಳೆದ ವರ್ಷ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವಾರ್ ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದರು. ಇದರ ಬೆನ್ನಲ್ಲೇ ಮಾಜಿ ಕಾಂಗ್ರೆಸ್ ನಾಯಕಿ ನಿರ್ಮಲ್ ಸಿಂಗ್ ಹಾಗೂ ಪುತ್ರಿ ಚಿತ್ರಾ ಸಿಂಗ್ ಆಪ್ ಸೇರಿಕೊಂಡಿದ್ದರು. ಇದರೊಂದಿಗೆ ನಿರ್ಮಲ್ ಸಿಂಗ್ ನೇತೃತ್ವದ ಡೇಮಾಕ್ರಟಿಕ್ ಫ್ರಂಟ್ ಪಕ್ಷ ಕೂಡ ಆಪ್ ಜೊತೆ ವಿಲೀನಗೊಂಡಿತ್ತು. ಈ ಮೂಲಕ ಹರ್ಯಾಣದಲ್ಲಿ ಆಪ್ ವಿಸ್ತಾರಗೊಂಡಿತ್ತು. ಆದರೆ ಹರ್ಯಾಣ ಆಮ್ ಆದ್ಮಿ ಪಾರ್ಟಿ ಅರವಿಂದ್ ಕೇಜ್ರಿವಾಲ್ ಕೈಗೆ ಸಿಗದಾಯಿತು. ಮೂಲ ಸಿದ್ದಾಂತಗಳಿಂದ ಹರ್ಯಾಣ ಆಪ್ ದೂರ ಸರಿಯುತ್ತಿದ್ದಂತೆ ಭಾಸವಾಗಿತ್ತು.
ಹರ್ಯಾಣ ಆಮ್ ಆದ್ಮಿ ಪಾರ್ಟಿಯನ್ನು ಹದ್ದುಬಸ್ತಿನಲ್ಲಿಡಲು ಇದೀಗ ಸಂಪೂರ್ಣ ಹರ್ಯಾಣ ಆಪ್ ವಿಭಾಗವನ್ನು ವಿಸರ್ಜಿಸಲಾಗಿದೆ. ಹೊಸ ಸದಸ್ಯರ ನೇಮಕ ನಡೆಯಲಿದೆ. ಇದು ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಹೊಸ ಸವಾಲು ನೀಡಲಿದೆ.
ಆಪ್‌ಗೆ ಜಾಹೀರಾತು ಶಾಕ್: 10 ದಿನದಲ್ಲಿ 163 ಕೋಟಿ ರೂ. ಪಾವತಿಗೆ ಸರ್ಕಾರ ನೋಟಿಸ್
ಆಪ್ ಪುನಾರಚನೆ: ಪೃಥ್ವಿರೆಡ್ಡಿ ಮತ್ತೆ ರಾಜ್ಯಾಧ್ಯಕ್ಷ
ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಆಮ್ ಆದ್ಮಿ ಪಕ್ಷವು (ಆಪ್) ಕರ್ನಾಟಕ ರಾಜ್ಯ ಘಟಕವನ್ನು ಪುನರ್‌ರಚಿಸಿದ್ದು, ರಾಜ್ಯಾಧ್ಯಕ್ಷರನ್ನಾಗಿ ಪೃಥ್ವಿರೆಡ್ಡಿ ಅವರನ್ನೇ ಮುಂದುವರೆಸಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ನೂತನ ಘಟಕ ಮತ್ತು ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ಪಟ್ಟಿಪ್ರಕಟಿಸಿದರು.ಪ್ರಚಾರ ಮತ್ತು ಜನಸಂಪರ್ಕ ಸಮಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು, ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಭಾಸ್ಕರ್ ರಾವ್ ಹಾಗೂ ಮಾಧ್ಯಮ ಮತ್ತು ಸಂವಹನಾ ಉಸ್ತುವಾರಿಯಾಗಿ ಬ್ರಿಜೇಶ್ ಕಾಳಪ್ಪ ಅವರಿಗೆ ಜವಾಬ್ದಾರಿ ನೀಡಲಾಗಿದೆ.