ನವದೆಹಲಿ(ಮಾ.18): ಚುನಾವಣಾ ಆಯೋಗ ಆಡಳಿತ ಪಕ್ಷದ ಕೈಗೊಂಬೆಯಾಗಿದೆ ಎಂದು ಆರೋಪಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ ಕಟು ಶಬ್ಧಗಳಲ್ಲಿ ತಿರುಗೇಟು ನೀಡಿದೆ.

5 ಲಕ್ಷ ಉದ್ಯೋಗ, ಉಚಿತ ರೇಶನ್; ಬಂಗಾಳ ಚುನಾವಣೆಗೆ ಮಮತಾ ಪ್ರಣಾಳಿಕೆ

ಈ ಕುರಿತು ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿರುವ ಪಶ್ಚಿಮ ಬಂಗಾಳದ ಉಪ ಚುನಾವಣಾ ಆಯುಕ್ತ ಸಂದೀಪ್‌ ಜೈನ್‌, ಪುನರಾವರ್ತಿತ ಆರೋಪ ಮತ್ತು ಅವಮಾನಿಸುವ ಹೇಳಿಕೆಯ ಮೂಲಕ ಸಂಸ್ಥೆಯನ್ನು ಕೀಳಾಗಿ ಕಾಣುವ ಯತ್ನಮಾಡಬೇಡಿ. ನಾವು ರೀತಿಯ ಆರೋಪಗಳಿಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ. ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಜೊತೆ ಅಂತರವನ್ನು ಕಾಯ್ದುಕೊಂಡಿದೆ. ರಾಜಕೀಯ ಪಕ್ಷಗಳ ಆರೋಪಗಳಿಗೆಲ್ಲಾ ಚುನಾವಣಾ ಆಯೋಗ ಕಿವಿಗೊಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಮಾರ್ಚ್ 31ರಿಂದ ಸ್ಪೆಷಲ್ ಟ್ರೈನ್ಗಳು ಕ್ಯಾನ್ಸಲ್? ರೈಲ್ವೇ ಇಲಾಖೆ ಹೇಳಿದ್ದಿಷ್ಟು

ಮಂಗಳವಾರ ರಾರ‍ಯಲಿಯೊಂದರಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಟಿಎಂಸಿ ಮುಖಂಡರನ್ನು ಹಣಿಯಲು ಸಂಚು ರೂಪಿಸಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ಚುನಾವಣಾ ಆಯೋಗ ಕುಣಿಯುತ್ತಿದೆಯೇ ಎಂದು ತಿಳಿಯಲು ನಾನು ಬಯಸುತ್ತೇನೆ ಎಂದು ಹೇಳಿದ್ದರು.