ಮಾರ್ಚ್ 31ರಿಂದ ಸ್ಪೆಷಲ್ ಟ್ರೈನ್ಗಳು ಕ್ಯಾನ್ಸಲ್? ರೈಲ್ವೇ ಇಲಾಖೆ ಹೇಳಿದ್ದಿಷ್ಟು
ಮಾರ್ಚ್ 31ರಿಂದ ವಿಶೇಷ ರೈಲು ಸೇವೆಗಳು ರದ್ದು..? ರೈಲ್ವೇ ಇಲಾಖೆಯಿಂದ ಸ್ಪಷ್ಟನೆ
ದೆಹಲಿ (ಮಾ.17): ವಿಶೇಷ ರೈಲು ಸೇವೆ ಮಾರ್ಚ್ 31ರಿಂದ ರದ್ದಾಗಲಿದೆ ಎಂಬ ಸುದ್ದಿಯ ನಡುವೆ ಭಾರತೀಯ ರೈಲ್ವೇ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕೊರೋನಾ ಹೆಚ್ಚಾಗಿರುವುದರಿಂದ ಮತ್ತೆ ರೈಲ್ವೇ ಸೇವೆ ರದ್ದಾಗುತ್ತದೆ ಎಂಬ ವಿಚಾರ ಸುದ್ದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ರೈಲ್ವೆ ಇಲಾಖೆ ಸುಳ್ಳು ಸುದ್ದಿ ಓಡಾಡುತ್ತಿದೆ. ಆದರೆ ರೈಲ್ವೇ ಇಲಾಖೆ ಇಂತಹದ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಧ್ಯಭಾರತದಲ್ಲಿ ಮಿಗ್-21 ಕ್ರಾಷ್: ಏರ್‌ಫೋರ್ಸ್ ಪೈಲಟ್ ಹುತಾತ್ಮ
ರೈಲ್ವೆ ತನ್ನ ರೈಲುಗಳನ್ನು 2021 ರ ಮಾರ್ಚ್ 31 ರಿಂದ ರದ್ದುಗೊಳಿಸಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸುದ್ದಿ ವರದಿಗಳಿವೆ. ಇದು ಸಂಪೂರ್ಣವಾಗಿ ದಾರಿತಪ್ಪಿಸುವ ಸಂಗತಿಯಾಗಿದೆ ಇದರಲ್ಲಿ ಹುರುಳಿಲ್ಲ ಎಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ತಪ್ಪಾದ ಸುದ್ದಿ ತುಣುಕುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕಳೆದ ವರ್ಷದ ಸುದ್ದಿಗಳನ್ನು ಇಂದು ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಿಎಂ ಜೊತೆಗೆ ಮೋದಿ ಮೀಟಿಂಗ್: ಯೋಗಿ ಸೇರಿ ಮೂವರು ಮುಖ್ಯಮಂತ್ರಿ ಗೈರು!
ವಿಶೇಷ ರೈಲುಗಳಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಕ್ಸ್‌ಪ್ರೆಸ್ ರೈಲುಗಳು ಮತ್ತು ಉಪನಗರ ರೈಲುಗಳು ಹೀಗೆಯೇ ಮುಂದುವರಿಯುತ್ತವೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ಪ್ರಯಾಣ ಮಾಡುವಾಗ COVID-19 ಪ್ರೋಟೋಕಾಲ್ ಅನ್ನು ಅನುಸರಿಸುವಂತೆ ರೈಲ್ವೆ ಪ್ರಯಾಣಿಕರಿಗೆ ವಿನಂತಿಸಿದೆ.