ಸೆಖೆಯಿಂದ ಪಾರಾಗಲು ತಾತನ ಹೊಸ ಟ್ರಿಕ್ಸ್: ಇಂಟರ್‌ನೆಟ್‌ನಲ್ಲಿ ಫೋಟೋ ವೈರಲ್

ಸೆಖೆಯಿಂದ ಪಾರಾಗಲು ಅನೇಕರು ಹಲವು ತಂತ್ರಜ್ಞಾನಗಳ ಮೊರೆ ಹೋಗುತ್ತಾರೆ. ಇಲ್ಲೊಬ್ಬ ತಾತ ಬಿರು ಬೇಸಿಗೆಯ ಸೆಖೆಯಿಂದ ಪಾರಾಗಲೂ ಹೊಸದಾದ ಉಪಾಯ ಮಾಡಿದ್ದಾರೆ. ಇದು ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ. 

Uttar Pradesh mans jugaad to beat the heat goes viral in akb

ಲಕ್ನೋ: ರಾಜ್ಯದಲ್ಲಿ ಇದು ಮಳೆಯ ಕಾಲವಾದರೂ ದೇಶದ ಕೆಲವೆಡೆ ಅಥವಾ ಕೆಲವು ಭಾಗಗಳಲ್ಲಿ ಬೇಸಿಗೆಯ ಸೆಖೆ ಇದೆ. ಮಳೆ ಬಂದರೂ ಕೂಡ ಬಿಸಿಲು ಬಂದಾಗ ಉರಿ ತಡೆಯಲಾಗದಂತಹ ಸೆಖೆ ಇರುತ್ತದೆ. ಈ ಸೆಖೆಯಿಂದ ಪಾರಾಗಲು ಅನೇಕರು ಹಲವು ತಂತ್ರಜ್ಞಾನಗಳ ಮೊರೆ ಹೋಗುತ್ತಾರೆ. ಶ್ರೀಮಂತರು ಏಸಿ ಕೂಲರ್ ಮೊರೆ ಹೋದರೆ ಸಾಮಾನ್ಯ ಜನರು ಫ್ಯಾನ್‌ ಹಾಕುತ್ತಾರೆ. ಹಾಳೆಗಳು ರಟ್ಟು ಮುಂತಾದವುಗಳಿಂದ ಕೈಯಲ್ಲೇ ಗಾಳಿ ಬೀಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ತಾತ ಬಿರು ಬೇಸಿಗೆಯ ಸೆಖೆಯಿಂದ ಪಾರಾಗಲೂ ಹೊಸದಾದ ಉಪಾಯ ಮಾಡಿದ್ದಾರೆ. ಇದು ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ. 

ಸಾಮಾಜಿಕ ಜಾಲತಾಣಗಳಲ್ಲಿ(social media) ಇಂತಹ ವಿಶಿಷ್ಠವೆನಿಸುವ ಜುಗಾಡ್ ತಂತ್ರಜ್ಞಾನಗಳು ಸಾಕಷ್ಟಿವೆ. ಉಪಯುಕ್ತವೆನಿಸುವ ಈ ಟ್ರಿಕ್‌ಗಳು ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರವಾಗಿವೆ. ಅನೇಕರು ಇವುಗಳನ್ನು ಪ್ರಯೋಗ ಕೂಡ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ 77 ವರ್ಷದ ವೃದ್ಧರೊಬ್ಬರು ಬಿಸಿಲಿನ ಧಗೆಯಿಂದ ಮುಕ್ತಿ ಪಡೆಯಲು ಹೊಸ ಉಪಾಯ ಮಾಡಿದ್ದಾರೆ. ಉತ್ತರಪ್ರದೇಶದ ಲಖಿಂಪುರ ಖೇರಿ (Lakhimpur Kheri) ಜಿಲ್ಲೆಯ ಲಾಲೂರಾಮ್ (Lalluram) ಎಂಬುವವರು ಹೆಲ್ಮೆಟ್ (helmet) ಮೇಲೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಲ್ಲ ಪೋರ್ಟೆಬಲ್ ಫ್ಯಾನ್ (portable fan) ಅನ್ನು ಜೋಡಿಸಿದ್ದಾರೆ. ಇದನ್ನು ತಲೆಗೆ ಹಾಕಿಕೊಂಡೆ ಅವರು ಒಂದು ಎಲ್ಲೆಡೆಗೆ ಇವರು ಸಂಚರಿಸುತ್ತಾರೆ. 

ಸ್ಟೇರಿಂಗ್ ಇದೆ ಕಾರ್ ಅಲ್ಲ, ಬೈಕಲ್ಲೂ ಹ್ಯಾಂಡ್ ಬ್ರೇಕ್ ಫಿಕ್ಸ್, ಜುಗಾಡ್ ವಿಡಿಯೋ ವೈರಲ್..!

ಯಾಕೆ ಲಾಲೂರಾಮ್ ಈ ಐಡಿಯಾ ಮಾಡಿರಬಹುದು ಎಂದು ನೀವು ಪ್ರಶ್ನಿಸುತ್ತಿದ್ದೀರಾ? ಏಕೆಂದರೆ ಲಾಲೂರಾಮ್ ಮನೆಯಿಂದ ಮನೆಗೆ ಹೋಗುತ್ತಾ ಹೂವಿನ ವ್ಯಾಪಾರ ಮಾಡುತ್ತಿದ್ದು, ಈ ವೇಳೆ ಬಿಸಿಲಿನಲ್ಲಿಯೂ ಸಾಗಬೇಕಾಗುತ್ತದೆ. ಈ ಬಿಸಿಲಿನ ಧಗೆಯಿಂದ ಇವರು ಅನಾರೋಗ್ಯಕ್ಕೂ ಒಳಗಾಗಿದ್ದರಂತೆ, ಹೀಗಾಗಿ ತನ್ನ ದೈನಂದಿನ ಕೆಲಸ ಸರಿಯಾಗಿ ಮಾಡಲಾಗದೇ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಬದುಕು ಬಹಳ ಕಷ್ಟವೆನಿಸಿತಂತೆ. ಅಲ್ಲದೇ ದೈನಂದಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದಿತಂತೆ.

ಹೀಗಾಗಿ ಲಾಲೂರಾಮ್ ಅವರಿಗೆ ಈ ಪೋರ್ಟೆಬಲ್ ಫ್ಯಾನ್ ಐಡಿಯಾ ಹೊಳೆದಿದೆ. ಹೀಗಾಗಿ ಇವರು ಸೋಲಾರ್‌ ಶಕ್ತಿಯಿಂದ (solar power) ತಿರುಗಬಲ್ಲ ಫ್ಯಾನ್ ಅನ್ನು ತಮ್ಮ ತಲೆ ಮೇಲೆ ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಪೋರ್ಟೇಬಲ್ ಫ್ಯಾನ್ ಇವರಿಗೆ ಬಿಸಿಲಿನ ಧಗೆಯಿಂದ ಮುಕ್ತಿ ನೀಡಿದೆಯಂತೆ. ಇನ್ನು ಈ ಫ್ಯಾನ್‌ನ ಸಾಮರ್ಥ್ಯ ಎಷ್ಟು ಎಂದು ಕೇಳಿದಾಗ ಅವರು ಹೇಳಿದ್ದು, ಇದು ಸೂರ್ಯನ ಬಿಸಿಲಿನ ತಾಪವನ್ನು ಅವಲಂಬಿಸಿದೆ ಎಂದು ಅವರು ಹೇಳಿದ್ದಾರೆ. ಇದು ಅವರಿಗೆ ಸ್ವಲ್ಪ ಮಟ್ಟಿನ  ಸಮಾಧಾನ ನೀಡಿದೆಯಂತೆ. 

ಮರವೇರುವ ಬೈಕ್: ರೈತನ ಆವಿಷ್ಕಾರಕ್ಕೆ ಇಂಟರ್‌ನೆಟ್ ಬ್ರೇಕ್!

ಲಾಲೂರಾಮ್ ಅವರು, ಈ ಪೋರ್ಟೇಬಲ್ (ಸಂಚಾರಿ) ಫ್ಯಾನ್ ಅನ್ನು ಹಲವು ವ್ಯಕ್ತಿಗಳಿಂದ ಸಂಗ್ರಹಿಸಿದ ಪಡೆದ ವಸ್ತುಗಳೆಲ್ಲವನ್ನು ಸೇರಿಸಿ ತಯಾರಿಸಿದ್ದಾರಂತೆ. ಅಸೌಖ್ಯದಿಂದಾಗಿ ತನ್ನ ಬಳಿ ಯಾವುದೇ ಹಣವಿಲ್ಲ. ಇದೇ ಕಾರಣಕ್ಕೆ ನನಗೆ ಯಾವುದೇ ವಸ್ತುಗಳನ್ನು ಕೊಳ್ಳಲು ಹಣವಿರಲಿಲ್ಲ ಹೀಗಾಗಿ ಹಲವರೊಂದಿಗೆ ಕೆಲವೊಂದು ವಸ್ತುಗಳನ್ನು ಕೇಳಿ ಬಳಿಕ ಈ ಫ್ಯಾನ್ ತಯಾರಿಸಿರುವುದಾಗಿ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಹೊಟ್ಟೆಪಾಡಿಗಾಗಿ ವೃದ್ಧರೊಬ್ಬರು ಮಾಡಿದ ಈ ಹೊಸ ಉಪಾಯ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದಂತು ಸುಳ್ಳಲ್ಲ.  ಕೆಲ ದಿನಗಳ ಹಿಂದೆ ಶ್ವಾನವೊಂದು ಸೆಖೆ ತಡೆಯಲಾಗದೇ ನೀರು ತುಂಬಿಟ್ಟ ಡ್ರಮ್‌ಒಳಗೆ ಮುಳುಗೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Latest Videos
Follow Us:
Download App:
  • android
  • ios