ಈ ಸಲ ಏನಾಗಿದೆ ಎಂದರೆ ನಾವು ಕುಂಭ ಮೇಳಕ್ಕೆ ಸ್ನಾನ ಮಾಡಲು ಹೋಗಿದ್ದೆವು, ನಮ್ಮ ಹೆಂಗಸು ಮೂರು ಬಾರಿ ತಪ್ಪಿಸಿಕೊಂಡಿದ್ದರು. ಆದರೆ ಅರ್ಧ ಗಂಟೆಯೊಳಗೆ ಅವರನ್ನು ಪೊಲೀಸರು ಕರೆದುಕೊಂಡು ಬಂದು ನಮ್ಮ ಬಳಿ ಬಿಟ್ಟರು, ಈ ವ್ಯವಸ್ಥೆ ಬಹಳ ಕೆಟ್ಟದಾಗಿದೆ ಎಂದ ವೃದ್ಧ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಅನೇಕರು ಕಷ್ಟವೋ ಸುಖವೋ ಒಮ್ಮೆ ಈ ಅನುಭವ ಪಡೆಯಬೇಕು ಎಂದು ಹೋಗಲು ಹಾತೊರೆಯುತ್ತಿದ್ದಾರೆ. ಈ ಕುಂಭಮೇಳದಲ್ಲಿ ಜನರು ದಾರಿ ತಪ್ಪಿ ಕುಟುಂಬದಿಂದ ತಮ್ಮವರಿಂದ ಬೇರ್ಪಡುತ್ತಾರೆ. ಇದು ಶತಶತಮಾನಗಳಿಂದಲೂ ನಡೆಯುತ್ತಿದ್ದು, ಕೆಲವರು ಮತ್ತೆ ಒಂದಾದರೆ ಮತ್ತೆ ಕೆಲವರು ಸಿಗುವುದೇ ಇಲ್ಲ, ಇನ್ನು ಕೆಲವರು ಬೇಕೆಂದೇ ತಮ್ಮ ವೃದ್ಧ ಪೋಷಕರು ಅಥವಾ ಪತ್ನಿಯನ್ನು ಕುಂಭ ಮೇಳದಲ್ಲಿ ಬಿಟ್ಟು ಎಸ್ಕೇಪ್ ಆಗುವಂತಹ ಘಟನೆಯೂ ನಡೆಯುತ್ತದೆ. ಈ ಮಧ್ಯೆ ಮಹಾಕುಂಭ ಮೇಳಕ್ಕೆ ನಡೆದು ಹೋಗುತ್ತಿರುವ ವೃದ್ಧರೊಬ್ಬರು ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅದರಲ್ಲಿ ಅವರು ಕುಂಭ ಮೇಳದಲ್ಲಿ ಮೂರು ಬಾರಿ ಕಳೆದುಹೋದರು ಸಿಕ್ಕಿದ ಪತ್ನಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಈ ವೀಡಿಯೋವನ್ನು ನೋಡಿದ ಜನ ತಾತಪ್ಪನಿಗೆ ಬುದ್ಧಿ ಹೇಳಿದ್ದಾರೆ. 

ಕುಂಭಮೇಳವು ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾಗಮವಾಗಿದೆ. ಪ್ರಪಂಚದ ವಿವಿಧ ಮೂಲೆಗಳಿಂದ ಲಕ್ಷಾಂತರ ಜನರು ಒಂದು ಸಣ್ಣ ಸ್ಥಳದಲ್ಲಿ ಸೇರುತ್ತಾರೆ, ಇದರಿಂದಾಗಿ ಜನಸಂದಣಿ ನಿರ್ವಹಣೆ ಮತ್ತು ಸುರಕ್ಷತೆಯಲ್ಲಿ ಗಮನಾರ್ಹ ಸವಾಲುಗಳು ಎದುರಾಗುತ್ತವೆ. ಹೀಗಾಗಿ ಆಗಿನ ಕಾಲದಿಂದಲೂ ಇಲ್ಲಿ ಜನ ತಪ್ಪಿ ಹೋಗುವುದು ಕುಟುಂಬದಿಂದ ಬೇರ್ಪಡುವುದು ಸಾಮಾನ್ಯ ಎನಿಸಿದೆ. ಹೀಗಿರುವಾಗ ಈ ವೃದ್ಧ ಪ್ರಯಾಗ್‌ರಾಜ್‌ನಲ್ಲಿ ಮಾಡಲಾದ ಜನಸಂದಣಿ ನಿರ್ವಹಣಾ ವ್ಯವಸ್ಥೆಗಳ ಬಗ್ಗೆ ಮಾತನಾಡುತ್ತ ಸೆಲ್ಪೀ ವೀಡಿಯೋ ರೆಕಾರ್ಡ್ ಮಾಡಿದ್ದಾರೆ.

ಈ ವೀಡಿಯೋದಲ್ಲಿ ಇಲ್ಲಿ ವ್ಯವಸ್ಥೆ ಬಹಳ ಕೆಟ್ಟದಾಗಿದೆ. ಪ್ರತಿ ವರ್ಷದ ವ್ಯವಸ್ಥೆ ಏನಿತ್ತು ಅಂದ್ರೆ, ಇಲ್ಲಿ ಸ್ನಾನ ಮಾಡಲು ಬರುವ ಯಾರಾದರು ಇಲ್ಲಿ ತಪ್ಪಿಸಿಕೊಳ್ಳುತ್ತಿದ್ದರು. ಇದಾದ ಬಳಿಕ ಅವರು 10 ವರ್ಷ ಅಥವಾ 15 ವರ್ಷಗಳ ನಂತರ ವಾಪಸ್ ಸಿಗುತ್ತಿದ್ದರು. ಇವರ ಬಳಿ ಶಂಕರ, ಹನುಮಾನ್ ಹೀಗೆ ದೇವರ ಫೋಟೋವೋ ಹಚ್ಚೆಯೂ ಇರುತ್ತಿತ್ತು. ಇದನ್ನು ನೋಡಿದ ಅವರ ಕುಟುಂಬದವರು ಇದು ನಮ್ಮ ಹುಡುಗ, ಇದು ನಮ್ಮ ಹೆಂಡತಿ, ಇದು ನಮ್ಮ ಗಂಡ ಎಂದು ಹೇಳಿ ಅವರನ್ನು ಬಂದು ಕರೆದುಕೊಂಡು ಹೋಗುತ್ತಿದ್ದರು. 

ಆದರೆ ಈ ಸಲ ಏನಾಗಿದೆ ಎಂದರೆ ನಾವು ಕುಂಭ ಮೇಳಕ್ಕೆ ಸ್ನಾನ ಮಾಡಲು ಹೋಗಿದ್ದೆವು, ನಮ್ಮ ಹೆಂಗಸು ಮೂರು ಬಾರಿ ತಪ್ಪಿಸಿಕೊಂಡಿದ್ದರು. ಆದರೆ ಅರ್ಧ ಗಂಟೆಯೊಳಗೆ ಅವರನ್ನು ಪೊಲೀಸರು ಕರೆದುಕೊಂಡು ಬಂದು ನಮ್ಮ ಬಳಿ ಬಿಟ್ಟರು, ಈ ವ್ಯವಸ್ಥೆ ಬಹಳ ಕೆಟ್ಟದಾಗಿದೆ. ಹೇಗೆ ದೂರ ಬಿಟ್ಟರೂ ಅವರು ಮತ್ತೆ ಬಂದರು. ಮೂರು ಬಾರಿ ತಪ್ಪಿಸಿಕೊಂಡರು. ಆದರೆ ಅವರು ವಾಪಸ್ ಬಂದರೂ ಹಾಗಿದ್ರೆ ಈ ವ್ಯವಸ್ಥೆ ಎಂತಹದ್ದು ಎಂದು ವೃದ್ಧ ಸೆಲ್ಫಿ ವೀಡಿಯೋದಲ್ಲಿ ಹೇಳಿದ್ದು ವೃದ್ಧನ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಆದರೆ ಈ ವೀಡಿಯೋದಲ್ಲಿ ವೃದ್ಧ ಹೇಳಿರುವುದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ಬಹಳ ನಕ್ಕಿದ್ದು ಹಲವು ಕಾಮೆಂಟ್ ಮಾಡಿದ್ದಾರೆ. ಸತ್ತರೂ ಜೊತೆಗೆ ಬದುಕಿದರೂ ಜೊತೆಗೆ ಎಂದು ಆಕೆ ಮಾತು ಕೊಟ್ಟಿದ್ದಾಳೆ ಹಾಗಾಗಿ ದೂರ ಆಗಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅರೇ ತಾತ ಇವಗಂತೂ ತುಂಬಾ ಕೆಟ್ಟದಾಗಿದೆ ವ್ಯವಸ್ಥೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ ಯೋಗಿಜೀ ಅವರಿಗೂ ಗೊತ್ತು ಇಂತಹ ಜನರೂ ಇರುತ್ತಾರೆ ಎಂದು ಅದಕ್ಕೆ ಈ ರೀತಿ ವ್ಯವಸ್ಥೆ ಮಾಡಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಈ ವೀಡಿಯೋವನ್ನು ನಿತಿನ್ ಶುಕ್ಲಾ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. 

Scroll to load tweet…