ಪ್ರಧಾನಿ ಮೋದಿ ಎರಡು ದಿನ ಪ್ರವಾಸಕ್ಕಾಗಿ ಈಜಿಪ್ಟ್ ತಲುಪಿದ್ದಾರೆ. ಕೈರೋ ವಿಮಾನ ನಿಲ್ದಾಣದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಇದೇ ವೇಳೆ ಪ್ರಧಾನಿ ಮೋದಿಯನ್ನ ಸ್ವಾಗತಿಸು ಬಂದಿದ್ದ ಈಜಿಪ್ಟ್ ಯುವತಿ ಬಾಲಿವುಡ್ ಶೋಲೆ ಚಿತ್ರ ಏ ದೋಸ್ತಿ ಹಮ್ ನಹಿ ತೋಡೆಂಗೆ ಹಾಡು ಹಾಡಿದ್ದಾರೆ.

ಕೈರೋ(ಜೂ.24): ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಈಜಿಪ್ಟ್ ಪ್ರವಾಸ ಮಾಡಿದ್ದಾರೆ. ಎರಡು ದಿನದ ಪ್ರವಾಸಕ್ಕಾಗಿ ಕೈರೋಗೆ ಬಂದಿಳಿದ ಮೋದಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಈಜಿಪ್ಟ್ ಪ್ರಧಾನಿ ಮುಸ್ತಾಫಾ ಮಡ್‌ಬೌಲಿ ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿಯನ್ನು ಆತ್ಮೀಯವಾಗಿ ಬರ ಮಾಡಿಕೊಂಡಿದ್ದರು. ಬಳಿಕ ಮೋದಿಗೆ ಗಾರ್ಡ್ ಆಫ್ ಹಾನರ್ ನೀಡಲಾಗಿದೆ. ಮೋದಿಗೆ ಅದ್ಧೂರಿ ಸ್ವಾಗತ ನೀಡಲು ಈಜಿಪ್ಟ್ ಎಲ್ಲಾ ತಯಾರಿ ಮಾಡಿಕೊಂಡಿತ್ತು.ಭಾರತೀಯ ನೃತ್ಯ ಪ್ರಕಾರಗಳು, ಕಲಾ ತಂಡಗಳ ಪ್ರದರ್ಶನ ಮೇಳೈಸಿತ್ತು. ಈ ಕಲಾ ತಂಡದಲ್ಲಿದ್ದ ಯುುವತಿ ಪ್ರಧಾನಿ ಮೋದಿಗೆ ಬಾಲಿವುಡ್ ಶೋಲೆ ಚಿತ್ರದ ಹಾಡು ಹಾಡಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಏ ದೋಸ್ತಿ ಹಮ್ ನಹಿ ತೋಡೆಂಗೆ ಹಾಡನ್ನು ಹಾಡಿ ಮೋದಿಯನ್ನೇ ಚಕಿತಗೊಳಿಸಿದ್ದಾರೆ. ಯುವತಿ ಹಾಡಿಗೆ ಮೋದಿ ತಲೆದೂಗಿದ್ದಾರೆ. ಸುಶ್ರಾವ್ಯ ಹಾಡಿಗೆ ಮೋದಿ ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಮೋದಿಗೆ ಸಿಗುತ್ತಿರುವ ಅದ್ಧೂರಿ ಸ್ವಾಗತ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ.

Scroll to load tweet…

ಮೋದಿ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಈಜಿಪ್ಟ್ ಪ್ರವಾಸ ಮಾಡಿದ್ದಾರೆ. 26 ವರ್ಷಗಳ ಬಳಿಕ ಭಾರತದ ಪ್ರಧಾನಿ ಈಜಿಪ್ಟ್ ಪ್ರವಾಸ ಮಾಡಿದ್ದಾರೆ.ಈ ಪ್ರವಾಸದಲ್ಲಿ ಹಲವು ದ್ವಿಪಕ್ಷೀಯ ಮಾತುಕತೆಗಳು ನಡೆಯಲಿದೆ. ನಾಳೆ(ಜೂ.25) ಪ್ರಧಾನಿ ನರೇಂದ್ರ ಮೋದಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ಲಾ ಭೇಟಿಯಾಗಲಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ಲಾ ವಿಶೇಷ ಅತಿಥಿಯಾಗಿದ್ದರು. 

26 ವರ್ಷಗಳ ಬಳಿಕ ಭಾರತ ಪ್ರಧಾನಿ ಈಜಿಪ್ಟ್‌ಗೆ ಭೇಟಿ, ಮೋದಿಗೆ ಸ್ವಾಗತಿಸಿದ ಪಿಎಂ ಮುಸ್ತಾಫಾ!

ನಾಲ್ಕು ದಿನಗಳ ಅಮೆರಿಕ ಪ್ರವಾಸ ಪೂರ್ಣಗೊಳಿಸಿ ಈಜಿಪ್‌್ಟಗೆ ತೆರಳುವುದಕ್ಕೂ ಮುನ್ನ ವಾಷಿಂಗ್ಟನ್‌ನ ರೊನಾಲ್ಡ್‌ ರೇಗನ್‌ ಕಟ್ಟಡದಲ್ಲಿ ಶುಕ್ರವಾರ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಭಾರತ ಮತ್ತು ಅಮೆರಿಕದ ಸಹಭಾಗಿತ್ವ 21ನೇ ಶತಮಾನದ ಜಗತ್ತನ್ನು ಸುಂದರವಾಗಿ ರೂಪಿಸುವ ಉದ್ದೇಶ ಹೊಂದಿದೆ. ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದ್ದರೆ, ಅಮೆರಿಕವು ಆಧುನಿಕ ಪ್ರಜಾಪ್ರಭುತ್ವದ ನೇತಾರನಾಗಿದೆ. ಹೀಗಾಗಿ ಈ ಎರಡು ಅದ್ಭುತ ಪ್ರಜಾಪ್ರಭುತ್ವಗಳು ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವುದನ್ನು ಜಗತ್ತು ನೋಡುತ್ತಿದೆ. ಉಭಯ ದೇಶಗಳ ಸಂಬಂಧದ ಫಲ ಎಲ್ಲರಿಗೂ ಸಿಗಬೇಕು ಅಂದರೆ ಅದರಲ್ಲಿ ವಲಸಿಗರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ವಲಸಿಗರು ಭಾರತದಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಬೇಕು’ ಎಂದ​ರು.

‘ಭಾರತ ಹಾಗೂ ಅಮೆರಿಕ ಕೇವಲ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿಲ್ಲ. ನಾವು ಜನರ ಬದುಕು, ಕನಸು ಹಾಗೂ ಭವಿಷ್ಯವನ್ನು ರೂಪಿಸುತ್ತಿದ್ದೇವೆ. ಉತ್ತಮ ಭವಿಷ್ಯಕ್ಕಾಗಿ ಎರಡೂ ದೇಶಗಳು ಕ್ರಮ ಕೈಗೊಳ್ಳುತ್ತಿವೆ. ಭಾರತೀಯ ವಲಸಿಗರು ಅಮೆರಿಕದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಈಗ ಉಭಯ ದೇಶಗಳ ಸಂಬಂಧದಲ್ಲೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ’ ಎಂದು ಹೇಳಿದರು.

ಭಾರತ- ಅಮೆರಿಕಾ ಮಧ್ಯೆ ಆರ್ಟೆಮಿಸ್ ಒಪ್ಪಂದ: ಭೂಮಿ, ನೀರು, ಗಾಳಿ ಆಯ್ತು.. ಅಂತರಿಕ್ಷದಲ್ಲೂ ಭಲೆ ಜೋಡಿ!