Asianet Suvarna News Asianet Suvarna News

Arunachal, Sikkim Assembly elections: ಮತ ಎಣಕೆ ದಿನಾಂಕವನ್ನು ಜೂನ್‌ 4 ರಿಂದ 2ಕ್ಕೆ ಬದಲಾಯಿಸಿದ ಇಸಿಐ

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಏಪ್ರಿಲ್ 19 ರಂದು ಮತದಾನ ನಡೆಯಲಿದೆ.
 

EC changes counting date from June 4 to June 2 of Arunachal Sikkim Assembly elections san
Author
First Published Mar 17, 2024, 5:02 PM IST

ನವದೆಹಲಿ (ಮಾ.17): ಭಾರತೀಯ ಚುನಾವಣಾ ಆಯೋಗವು ಭಾನುವಾರ ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಬದಲಾವಣೆ ಮಾಡಿದೆ. ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುವ ಜೂನ್‌ 4ರ ಬದಲಾಗಿ ಈ ಎರಡು ರಾಜ್ಯಗಳ ಮತ ಎಣಿಕೆ ಜೂನ್‌ 2 ರಂದು ನಡೆಯಲಿದೆ ಎಂದು ಕೇಮದ್ರ ಚುನಾವಣಾ ಆಯೋಗ ತಿಳಿಸಿದೆ. ಎರಡು ವಿಧಾನಸಭಾ ಚುನಾವಣೆಗಳಲ್ಲಿ ಚಲಾವಣೆಯಾದ ಮತಗಳನ್ನು ಲೋಕಸಭೆ ಚುನಾವಣೆಯ ಮತಗಳೊಂದಿಗೆ ಜೂನ್ 4 ರಂದು ಎಣಿಕೆ ಮಾಡಲಾಗುವುದು ಎಂದು ಚುನಾವಣಾ ಆಯೋಗವು ಈ ಹಿಂದೆ ಘೋಷಿಸಿತ್ತು. ಆದರೆ ಎರಡು ವಿಧಾನಸಭೆಗಳ ಅವಧಿ ಜೂನ್ 2 ರಂದು ಕೊನೆಗೊಳ್ಳುತ್ತಿರುವುದರಿಂದ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ. "ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಸಂಸದೀಯ ಕ್ಷೇತ್ರಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ" ಎಂದು ಅದು ಗಮನಿಸಿದೆ. ಸಂಸತ್ ಚುನಾವಣೆ ಜತೆಗೆ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯುತ್ತಿದೆ.

ಅರುಣಾಚಲ ಪ್ರದೇಶದ ಎಲ್ಲಾ 60 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಬಾರಿ ಪಕ್ಷ 16 ಮಂದಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ಮೂವರು ಹಾಲಿ ಸಚಿವರ ಟಿಕೆಟ್‌ ಕಡಿತಗೊಂಡಿದೆ. ಮುಖ್ಯಮಂತ್ರಿ ಪೆಮಾ ಖಂಡು ಅವರು ಪ್ರಸ್ತುತ ಸದನದಲ್ಲಿ ಪ್ರತಿನಿಧಿಸುವ ಮುಕ್ತೋ ಸ್ಥಾನದಿಂದಲೇ ಈ ಬಾರಿಯೂ ಸ್ಪರ್ಧಿಸುತ್ತಿದ್ದಾರೆ.

ಚುನಾವಣಾ ಆಯೋಗ ಸಾರ್ವತ್ರಿಕ ಚುನಾವಣೆಯ ಜೊತೆಗೆ ಸಿಕ್ಕಿಂನಲ್ಲಿಯೂ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಲ್ಲಿ, ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಮತ್ತು ಜೂನ್ 2 ರಂದು ಮತಗಳ ಎಣಿಕೆ ನಡೆಯಲಿದೆ. ಪ್ರಸ್ತುತ ವಿಧಾನಸಭೆಯ ಅಧಿಕಾರಾವಧಿಯು ಜೂನ್ 2 ರಂದು ಕೊನೆಗೊಳ್ಳಲಿದೆ. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ (SKM) ಪ್ರೇಮ್ ಸಿಂಗ್ ತಮಾಂಗ್ ಪ್ರಸ್ತುತ 32 ಸ್ಥಾನಗಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆ.

ಅರುಣಾಚಲ ಸಂಪರ್ಕಿಸುವ ವಿಶ್ವದ ಅತಿ ಉದ್ದದ ಜೋಡಿ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ

ರಾಜ್ಯದಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಧಿಕಾರದಲ್ಲಿದೆ: ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) ಪ್ರಸ್ತುತ ರಾಜ್ಯದಲ್ಲಿ ಆಡಳಿತ ಪಕ್ಷವಾಗಿದೆ. ಸಿಕ್ಕಿಂ ಅಸೆಂಬ್ಲಿಯಲ್ಲಿ ಅವರ ಶಾಸಕರ ಸಂಖ್ಯೆ 17. ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF) ಕೆಲವು ದಿನಗಳ ಹಿಂದೆ 6 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿತ್ತು. ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರು ಒಂಬತ್ತನೇ ಬಾರಿಗೆ ಶಾಸಕರಾಗಲು ನಾಮ್ಚಿ-ಸಿಂಘಿತಂಗ್‌ನಿಂದ ಸ್ಪರ್ಧಿಸಲಿದ್ದಾರೆ.

21 ಸಿಕ್ಸರ್‌, 33 ಬೌಂಡರಿ, ಕೇವಲ 147 ಎಸೆತಗಳಲ್ಲಿ 300 ರನ್‌; ವಿಶ್ವ ದಾಖಲೆ ನಿರ್ಮಿಸಿದ ತನ್ಮಯ್‌ ಅಗರ್ವಾಲ್‌!


 

Follow Us:
Download App:
  • android
  • ios