Asianet Suvarna News Asianet Suvarna News

21 ಸಿಕ್ಸರ್‌, 33 ಬೌಂಡರಿ, ಕೇವಲ 147 ಎಸೆತಗಳಲ್ಲಿ 300 ರನ್‌; ವಿಶ್ವ ದಾಖಲೆ ನಿರ್ಮಿಸಿದ ತನ್ಮಯ್‌ ಅಗರ್ವಾಲ್‌!

Tanmay Agarwal: ಹೈದರಾಬಾದ್‌ ತಂಡದ ಪರವಾಗಿ ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ತನ್ಮಯ್‌ ಅಗರ್ವಾಲ್‌, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿವೇಗವಾಗಿ ತ್ರಿಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎನ್ನುವ ವಿಶ್ವದಾಖಲೆ ನಿರ್ಮಿಸಿದ್ದಾರೆ.

Ranji Trophy 2024 Tanmay Agarwal hit 21 sixes and 33 fours scored triple century in 147 balls san
Author
First Published Jan 26, 2024, 9:38 PM IST

ಹೈದರಾಬಾದ್‌ (ಜ.26): ಭಾರತದ ಕ್ರಿಕೆಟ್‌ ಅಭಿಮಾನಿಗಳ ಚಿತ್ತ ಹೈದರಾಬಾದ್‌ನತ್ತ ನೆಟ್ಟಿದೆ. ಅದಕ್ಕೆ ಕಾರಣ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಪಂದ್ಯವಲ್ಲ. ಬದಲಾಗಿ ಬ್ಯಾಟ್ಸ್‌ಮನ್‌ ತನ್ಮಯ್‌ ಅಗರ್ವಾಲ್‌ ಅವರತ್ತ ಎಲ್ಲರ ಗಮನಸೆಟ್ಟಿದೆ. ಶುಕ್ರವಾರ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಆಂಧ್ರಪ್ರದೇಶದ ಆರಂಭಿಕ ಬ್ಯಾಟ್ಸ್‌ಮನ್‌ ತನ್ಮಯ್‌ ಅಗರ್ವಾಲ್‌, ಪ್ರಥಮ ದರ್ಜೆ ಕ್ರಿಕೆಟ್‌ನ ಅತಿವೇಗದ ತ್ರಿಶತಕ ಸಿಡಿಸಿದ್ದಾರೆ. ಇದರ ಬೆನ್ನಲ್ಲಿಯೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಮಾಜಿ ಬ್ಯಾಟ್ಸ್‌ಮನ್‌ ಬ್ರಿಯಾನ್‌ ಲಾರಾ ಅವರ ಅಜೇಯ 501 ರನ್‌ಗಳ ದಾಖಲೆಯನ್ನು ಮುರಿಯಲಿದ್ದಾರೆಯೇ ಎನ್ನುವ ಕುತೂಹಲ ಕಾಡಿದೆ. 1994ರ ಜೂನ್‌ 6 ರಂದು ವೆಸ್ಟ್‌ ಇಂಡೀಸ್‌ ಬ್ಯಾಟ್ಸ್‌ಮನ್ ಇಂಗ್ಲೀಷ್‌ ಕೌಂಟಿ ತಂಡ ವಾರ್ವಿಕ್‌ಷೈರ್‌ ಪರವಾಗಿ ಆಡುವ ವೇಳೆ ಅಜೇಯ 501 ರನ್‌ ಬಾರಿಸಿದ್ದರು. ಇದು ಪ್ರಥಮ ದರ್ಜೆ ಕ್ರಿಕಟ್‌ನಲ್ಲಿ ಬ್ಯಾಟ್ಸ್‌ಮನ್‌ ಒಬ್ಬರ ಗರಿಷ್ಠ ಮೊತ್ತ ಎನಿಸಿದೆ. ಇನ್ನು ಶುಕ್ರವಾರ ಆರಂಭವಾದ ಪಂದ್ಯದಲ್ಲಿ ತನ್ಮಯ್‌ ಅಗರ್ವಾಲ್‌ 160 ಎಸೆತಗಳಲ್ಲಿ 21 ಸಿಕ್ಸರ್‌ ಹಾಗೂ 33 ಬೌಂಡರಿಯೊಂದಿಗೆ 323 ರನ್‌ ಬಾರಿಸಿದ್ದು, ಶನಿವಾರಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಕೇವಲ 147 ಎಸೆತಗಳಲ್ಲಿ ತ್ರಿಶತಕದ ಗಡಿ ಮುಟ್ಟುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿವೇಗದ ತ್ರಿಶತಕ ಬಾರಿಸಿದ ಆಟಗಾರ ಎನ್ನುವ ವಿಶ್ವದಾಖಲೆ ನಿರ್ಮಿಸಿದ್ದಾರೆ.

ತ್ರಿಶತಕ ಮಾತ್ರವಲ್ಲದೆ,  ತನ್ಮಯ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿವೇಗದ ದ್ವಿಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೇವಲ 119 ಎಸೆತಗಳಲ್ಲಿ ಅವರು ದ್ವಿಶತಕ ಪೂರೈಸಿದ್ದರು. ಇದುವರೆಗೆ 21 ಸಿಕ್ಸರ್‌ಗಳನ್ನು ಬಾರಿಸಿರುವ ತನ್ಮಯ್, ರಣಜಿ ಟ್ರೋಫಿಯ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನೂ ಮಾಡಿದ್ದಾರೆ.

ಅರುಣಾಚಲ ಪ್ರದೇಶ ಮತ್ತು ಹೈದರಾಬಾದ್ ನಡುವೆ ನಡೆಯುತ್ತಿರುವ ಪಂದ್ಯದ ಮೊದಲ ದಿನವೇ ತನ್ಮಯ್ ಅತಿವೇಗದ ತ್ರಿಶತಕ ಬಾರಿಸಿದ ಸಾಧನೆ ಮಾಡಿದರು. ದಿನದಾಟದ ಅಂತ್ಯಕ್ಕೆ 323 ರನ್ ಗಳ ಸ್ಕೋರ್ ತಲುಪಿದ್ದಾರೆ. ಆರಂಭಿಕರಾಗಿ ಆಡುವ ತನ್ಮಯ್ ಈ ಅದ್ಭುತ ಇನ್ನಿಂಗ್ಸ್‌ ಕಟ್ಟಿದರು. ಇವರಿಗೆ ನಾಯಕ ಗೆಹ್ಲೋಟ್ ರಾಹುಲ್ ಸಿಂಗ್ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಹೈದರಾಬಾದ್‌ ತಂಡದ ನಾಯಕ 105 ಎಸೆತಗಳಲ್ಲಿ 26 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 185 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 345 ರನ್‌ಗಳ ಜೊತೆಯಾಟ ಆಡಿದರು.

ಮ್ಯಾಚ್‌ ಫಿಕ್ಸಿಂಗ್‌ ಆರೋಪ, ಶೋಯೆಬ್‌ ಮಲೀಕ್‌ ಬಿಪಿಎಲ್‌ ಒಪ್ಪಂದ ರದ್ದು; ದೇಶಭಕ್ತಿಯ ಪೋಸ್ಟ್‌ ಹಾಕಿದ ಸಾನಿಯಾ!

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅರುಣಾಚಲ ಪ್ರದೇಶ ತಂಡ ಮೊದಲ ದಿನವೇ 39.4 ಓವರ್‌ಗಳಲ್ಲಿ172 ರನ್‌ಗೆ ಆಲೌಟ್‌ ಆಯಿತು. ಬಳಿಕ ಬ್ಯಾಟಿಂಗ್‌ ಆರಂಭಿಸಿದ ಹೈದರಾಬಾದ್‌ ತಂಡ 48 ಓವರ್‌ಗಳಲ್ಲಿ 1 ವಿಕೆಟ್‌ಗೆ 529 ರನ್‌ ಬಾರಿಸಿದೆ. ತನ್ಮಯ್‌ ಜೊತೆ 24 ಎಸೆತಗಳಲ್ಲಿ 19 ರನ್‌ ಬಾರಿಸಿರುವ ಅಭಿರತ್‌ ರೆಡ್ಡಿ ಕ್ರೀಸ್‌ನಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧ 175 ರನ್‌ ಮುನ್ನಡೆಗೇರಿದ ಭಾರತ!

ಪಂದ್ಯದ ಮೊದಲ ದಿನದಾಟವಷ್ಟೇ ಮುಗಿದಿದೆ. ಹಾಗೇನಾದರೂ ಬ್ರಿಯಾನ್‌ ಲಾರಾ ಅವರ ದಾಖಲೆ ಮುರಿಯಲೇಬೇಕು ಎನ್ನುವ ಉದ್ದೇಶದಲ್ಲಿ ತನ್ಮಯ್‌ ಅಗರ್ವಾಲ್‌ಗೆ ಅದು ಕಷ್ಟವೇನೆಲ್ಲ. ಅವರು ಆಡುತ್ತಿರುವ ವೇಗ ನೋಡಿದಲ್ಲಿ, ಶನಿವಾರ ಈ ದಾಖಲೆ ಕೂಡ ನಿರ್ಮಾಣವಾಗುವ ಸಾಧ್ಯತೆ ಇದೆ.

 

Follow Us:
Download App:
  • android
  • ios