Asianet Suvarna News Asianet Suvarna News

ವಿಶ್ವಸಂಸ್ಥೆ ಕಂಪನಿ ರೀತಿ ಆಗಿದೆ, ಜಗತ್ತಿನ ವಾಸ್ತವ ತಿಳಿಸುತ್ತಿಲ್ಲ: ಜೈಶಂಕರ್‌!

ಸಿಂಬಿಯಾಸಿಸ್‌ ಇಂಟರ್‌ನ್ಯಾಷನಲ್‌ ಆಯೋಜಿಸಿದ್ದ, ಜಿ20 ಫೆಸ್ಟಿವಲ್ ಅಫ್‌ ಥಿಂಕರ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ವಿಶ್ವಸಂಸ್ಥೆಯ ಈಗಿನ ಕಾರ್ಯಕಲಾಪಗಳನ್ನು ಟೀಕೆ ಮಾಡಿದರು. ಈಗಿನ ವಿಶ್ವಸಂಸ್ಥೆ ಕಂಪನಿ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಟೀಕೆ ಮಾಡಿದ್ದಾರೆ.

EAM Jaishankar UN no longer reflects reality of world this is like a company san
Author
First Published Feb 24, 2023, 4:35 PM IST

ಪುಣೆ (ಫೆ. 24): ಪ್ರಸ್ತುತ ಇರುವ ವಿಶ್ವಸಂಸ್ಥೆ ಜಗತ್ತಿನ ವಾಸ್ತವಗಳನ್ನು ನಿಖರವಾಗಿ ತಿಳಿಸುತ್ತಿಲ್ಲ. ಅವುಗಳನ್ನು ಸೂಕ್ತವಾಗಿ ಪ್ರತಿನಿಧಿಸುತ್ತಿಲ್ಲ ಆ ಕಾರಣದಿಂದಸ ವಿಶ್ವಸಂಸ್ಥೆಯಲ್ಲಿ ಸುಧಾರಣೆಗಳು ಆಗಬೇಕಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಸುಬ್ರಹ್ಮಣ್ಯಂ ಜೈಶಂಕರ್‌ ಹೇಳಿದ್ದಾರೆ. ಸಿಂಬಯೋಸಿಸ್ ಇಂಟರ್‌ನ್ಯಾಶನಲ್ ಆಯೋಜಿಸಿದ್ದ ಜಿ20 ಫೆಸ್ಟಿವಲ್ ಆಫ್ ಥಿಂಕರ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಸಚಿವರು, 'ಈಗಿನ ವಿಶ್ವಸಂಸ್ಥೆ ಬಹುತೇಕವಾಗಿ ಕಂಪನಿಯಂತೆ ಕೆಲಸ ಮಾಡುತ್ತಿದೆ. ಷೇರುದಾರರು ಬದಲಾಗಿದೆ. ಆದರೆ, ಕಂಪನಿ ನಿರ್ವಹಣೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈಗಿರುವ ಹೊಸ ಷೇರುದಾರರು ನ್ಯಾಯಯುತವಾದ ನಿರ್ವಹಣೆ ಬೇಕು. ಆದರೆ ಹಳೆಯ ವ್ಯಕ್ತಿಗಳು ಬದಲಾವಣೆಯನ್ನು ಬಹಳ ಸುಲಭವಾಗಿ ಆಗಲು ಬಿಡುತ್ತಿಲ್ಲ. ಅದಲ್ಲದೆ, ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲು ಕೂಡ ಸಾಧ್ಯವಿಲ್ಲ. ಆದರೆ, ಪ್ರತಿ ದಿನಗಳು ಕಳೆದ ಹಾಗೆ ಒತ್ತಡ ಮಾತ್ರ ಹೆಚ್ಚಾಗುತ್ತಿದೆ ಎಂದು ಜೈಶಂಕರ್‌ ಹೇಳಿದ್ದಾರೆ.

ಕೋವಿಡ್‌-19 (Covid 19) ಸಾಂಕ್ರಾಮಿಕ ರೋಗದ ಉದಾಹರಣೆ ಮೂಲಕ ಜೈಶಂಕರ್‌ (S Jaishankar) ವಿಶ್ವಸಂಸ್ಥೆ (United Nations) ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದನ್ನು ಮನದಟ್ಟು ಮಾಡಿದರು. ಕೋವಿಡ್‌-19ನಂಥ ಜಾಗತಿಕ ವಿಕೋಪದ ಸಮಯದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು ನಿರ್ಣಾಯಕ ಪಾತ್ರಗಳನ್ನು ವಹಿಸಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರ ನೀಡುವ ವೇಳೆ ಹೇಳಿದರು. ಕೋವಿಡ್‌ನಂಥ ಸಮಯದಲ್ಲಿ ಹೆಚ್ಚಿನ ದೇಶಗಳು ಅವರನ್ನು ಅವರೇ ಕಾಪಾಡಿಕೊಳ್ಳಬೇಕಾದ ಸ್ಥಿತಿಗೆ ಬಂದಿತ್ತು. ಹಾಗಾಗಿ ವಿಶ್ವಸಂಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆಯೇ ಎನ್ನುವ ಪ್ರಶ್ನೆಗೆ, ಜೈಶಂಕರ್‌ ಉತ್ತರ ನೀಡಿದರು.

ಅಫ್ಘಾನಿಸ್ತಾನದ ಪರಿಸ್ಥಿತಿ ಕೂಡ ಒಂದು ಹಂತದಲ್ಲಿ ಸುಧಾರಿಸುತ್ತದೆ ಎಂದು ನಾವೆಲ್ಲರೂ ಭಾವಿಸುತ್ತೇವೆ ಎಂದು ಅವರು ಚರ್ಚೆಯ ವೇಳೆ ಹೇಳಿದರು. ಭಾರತವು ಪ್ರಸ್ತುತ ವಿದ್ಯಾರ್ಥಿ ವೀಸಾಗಳಿಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ಏಷ್ಯಾ ಆರ್ಥಿಕ ಸಂವಾದದಲ್ಲಿ ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳನ್ನು ಉಲ್ಲೇಖಿಸಿ ಮಾತನಾಡುತ್ತಾ ನೆರೆಯ ರಾಷ್ಟ್ರವು ಆರ್ಥಿಕ ಸಂಕಷ್ಟವನ್ನು ಅನುಭವಿಸುವುದನ್ನು ಯಾವ ದೇಶ ಕೂಡ ಬಯಸೋದಿಲ್ಲ ಎಂದು ಹೇಳಿದರು. ಇದರಿಂದ ನಮ್ಮ ದೇಶದ ಮೇಲೂ ಪರಿಣಾಮ ಬೀರುತ್ತದೆ ಎಂದರು. "ನಾವು 30 ವರ್ಷಗಳ ಹಿಂದೆ ಇದನ್ನು ಅನುಭವಿಸಿದ್ದೇವೆ ಎಂಬುದನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕೆಂದು ಬಯಸುತ್ತೇನೆ. ಆದರೆ ಯಾವುದೇ ದೇಶವು ತನ್ನ ಮೂಲ ಉದ್ಯಮ ಭಯೋತ್ಪಾದನೆಯಾಗಿದ್ದರೆ ಕಠಿಣ ಪರಿಸ್ಥಿತಿಯಿಂದ ಹೊರಬರಲು ಮತ್ತು ಸಮೃದ್ಧ ಶಕ್ತಿಯಾಗಲು ಸಾಧ್ಯವಿಲ್ಲ" ಎಂದರು.

ಚೀನಾ ಅತಿಕ್ರಮಣಕ್ಕೆ ಉಪಗ್ರಹ ಸಾಕ್ಷಿ ಇದೆ: ಜೈಶಂಕರ್‌

ಪುಣೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು "ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆನ್ ಅನಿಶ್ಚಿತ ಪ್ರಪಂಚ" ಎಂಬ ತಮ್ಮ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ, ವಿದೇಶಾಂಗ ಸಚಿವರು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಉಲ್ಲೇಖಗಳೊಂದಿಗೆ ಪೌರಾಣಿಕ ಸಾಹಿತ್ಯವು ಭಾರತದ ದ್ವಿಪಕ್ಷೀಯ ಚಟುವಟಿಕೆಗೆ ಹೇಗೆ ಸಹಾಯ ಮಾಡಿದೆ ಎನ್ನುವುದನ್ನು ವಿವರಿಸಿದರು.

ಚೀನಾ ಗಡಿಗೆ ರಾಹುಲ್ ಸೂಚನೆ ಮೇರೆಗೆ ಸೇನೆ ಕಳಿಸಿದ್ದಲ್ಲ: ಜೈಶಂಕರ್‌ ತಿರುಗೇಟು

ಜಗತ್ತಿನ ಅತಿದೊಡ್ಡ ರಾಜತಾಂತ್ರಿಕ ಅಧಿಕಾರಿ ಯಾರು ಎನ್ನುವ ಪ್ರಶ್ನೆಗೆ, ಬಹುಶಃ ಹನುಮಂತ ಹಾಗೂ ಶ್ರೀ ಕೃಷ್ಣ ಜಗತ್ತು ಕಂಡ ದೊಡ್ಡ ರಾಜತಾಂತ್ರಿಕ ಅಧಿಕಾರಿಗಳು ಎಂದರು. ಅವರ ಪ್ರಕಾರ, ನೀವು ಭಗವಾನ್ ಹನುಮಂತನನ್ನು ನೋಡಿದರೆ, ಅವರು ರಾಜತಾಂತ್ರಿಕತೆಯನ್ನು ಮೀರಿ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಂಡು, ಬಹುಪಯೋಗಿ ರಾಜತಾಂತ್ರಿಕರಾಗಿದ್ದರು. ತಮ್ಮ ವ್ಯಾಪ್ತಿಯನ್ನೂ ಮೀರಿ ಅವರು ಸೀತೆಯನ್ನು ಉಳಿಸಿದರು ಮತ್ತು ಲಂಕೆಗೆ ಬೆಂಕಿ ಹಚ್ಚಿದರು ಎಂದರು.

Follow Us:
Download App:
  • android
  • ios