Asianet Suvarna News Asianet Suvarna News

ರಾಮಲೀಲಾ ಮೈದಾನದಲ್ಲಿ ರಾವಣ ದಹನ ಮಾಡಿ ವಿಜಯದಶಮಿ ಆಚರಿಸಿದ ಪ್ರಧಾನಿ ಮೋದಿ!

ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಜಯದಶಮಿ ಹಬ್ಬಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ರಾವಣ ದಹನ ಮಾಡಿ ಜನತೆಯನ್ನುದ್ದೇಶಿ ಮಾತನಾಡಿದ್ದಾರೆ.

Dussehra Festival PM Modi participate Ravan Dahan at Ram leela maidan Delhi on Vijaya Dashami ckm
Author
First Published Oct 24, 2023, 7:23 PM IST

ದೆಹಲಿ(ಅ.24)  ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು ವಿಜಯದಶಮಿ ಆಚರಣೆಯ ಪ್ರಯುಕ್ತ, ದೇಶದೆಲ್ಲೆಡೆ ರಾವಣ ಪ್ರತಿಕೃತಿ ದಹನ ಮಾಡಲಾಗುತ್ತದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಸಿದ್ದ ದಸರಾ ಹಬ್ಬ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಪ್ರಧಾನಿ ಮೋದಿ ರಾವಣನ ಪ್ರತಿಕೃತಿ ದಹನ ಮಾಡುವ ಮೂಲಕ ವಿಜಯದಶಮಿ ಹಬ್ಬ ಆಚರಿಸಿದ್ದಾರೆ.

ಶ್ರೀ ರಾಮಲೀಲಾ ಸೊಸೆೈಟ್ ಆಯೋಜಿಸಿದ 11ನೇ ವರ್ಷದ ವಿಜಯ ದಶಮಿ ಹಬ್ಬ ಆಚರಣೆಯಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ದೇಶದ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಶುಭಾಶಯದ ಮೂಲಕ ಮಾತು ಆರಂಭಿಸಿದ ಮೋದಿ, ಕಳೆದೆ 5 ಶತಮಾನಗಳಿಂದ ಕಾಯುತ್ತಿದ್ದ ಶ್ರೀ ರಾಮ ಮಂದಿರ ಕಾರ್ಯ ಭರದಿಂದ ಸಾಗಿದೆ. ನಾವೆಲ್ಲಾ ಶ್ರೀ ರಾಮ ಮಂದಿರ ಉದ್ಘಾಟನೆ ದಿನಕ್ಕಾಗಿ ಕಾಯುತ್ತಿದ್ದೇವೆ. ಶ್ರೀ ರಾಮ, ಸೀತಾ ದೇವಿಯನ್ನು ಮರಳಿ ಕರೆತರಲು ಲಂಕಾ ದಹನ ಮಾಡಬೇಕಾಯಿತು. ಕೊನೆಗೆ ರಾವಣನ ಸಂಹರಿಸಿದರು. ಲೋಕ ಕಲ್ಯಾಣಕ್ಕಾಗಿ ದುಷ್ಠರ ಸಂಹರಿಸಿ ಬೆಳಕು ನೀಡಿದರು. ಇದೀಗ ರಾಮ ಮಂದಿರವೂ ನಿರ್ಮಾಣವಾಗುತ್ತಿದೆ. ಇವೆಲ್ಲ ನಮ್ಮ ಸೌಭಾಗ್ಯ ಎಂದು ಮೋದಿ ಹೇಳಿದ್ದಾರೆ.

ಮೈಸೂರು ದಸರಾ 2023: ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದು ನಮ್ಮ ಸಹನೆ ಹಾಗೂ ತಾಳ್ಮೆಗೆ ಸಿಕ್ಕ ಗೆಲುವು ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಚೀನಾಗೆ ಆಯುಧ ಪೂಜೆ ಮಹತ್ವ ಸಾರುವ ಮೂಲಕ ತಿರುಗೇಟು ನೀಡಿದ್ದಾರೆ. ಭಾರತದಲ್ಲಿ ಆಯುಧ ಪೂಜೆ ಆಚರಣೆ ಮಾಡಲಾಗಿದೆ. ಭಾರತದಲ್ಲಿ ಆಯುಧಗಳನ್ನು ಪೂಜೆ ಮಾಡಲಾಗುತ್ತದೆ. ಇದು ಜಾಗ ಆಕ್ರಮಿಸಿಕೊಳ್ಳಲು ಅಲ್ಲ, ಈ ಪೂಜೆ ನಮ್ಮ ಮಣ್ಣನ್ನು ರಕ್ಷಿಸಲು ಎಂದು ಮೋದಿ ಹೇಳಿದ್ದಾರೆ.

 

 

ದುರ್ಗಾ ಮಾತೆಯ ಪೂಜೆ ಮಾಡಲಾಗಿದೆ. ಶಕ್ತಿ ದೇವತೆಯನ್ನು ನಾವು ಆರಾಧಿಸುತ್ತೇವೆ. ಇದು ವಿಶ್ವದ ಕಲ್ಯಾಣಕ್ಕಾಗಿ ಹಾಗೂ ಸಮೃದ್ಧಿಗಾಗಿ. ಭಾರತೀಯರಿಗೆ ಗೀತಾ ಬೋಧನೆ ತಿಳಿದಿದೆ. ತೇಜಸ್, ಐಎನ್‌ಎಸ್ ಉತ್ಪಾದನೆಯೂ ತಿಳಿದಿದೆ. ಶ್ರೀರಾಮನ ಘನತೆ ತಿಳಿದಿದೆ. ನಮ್ಮ ಗಡಿಗಳನ್ನು ರಕ್ಷಿಸವು ಕಾರ್ಯವೂ ನಮಗೆ ತಿಳಿದಿದೆ ಎಂದು ಮೋದಿ ಹೇಳಿದ್ದಾರೆ. 

ಅಖಂಡ ಭಾರತ ಧ್ಯೇಯವನ್ನು ಉಳಿಸುವಲ್ಲಿ ಆರ್‌ಎಸ್ಎಸ್‌ ಕೊಡುಗೆ ಶ್ಲಾಘಿಸಿದ ಶಂಕರ್‌ ಮಹದೇವನ್‌!

ಈ ಪವಿತ್ರ ಹಬ್ಬವು ನಕಾರಾತ್ಮಕ ಶಕ್ತಿಗಳ ಅಂತ್ಯವನ್ನು ಸೂಚಿಸುತ್ತದೆ ಮತ್ತು ಜೀವನದಲ್ಲಿ ಒಳ್ಳೆಯದನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ಸಾರುತ್ತದೆ ಎಂದು ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

Follow Us:
Download App:
  • android
  • ios