Asianet Suvarna News Asianet Suvarna News

ಮೈಸೂರು ದಸರಾ 2023: ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

ಇಂದು ಬೆಳಗ್ಗೆ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿಲಿದ್ದಾರೆ ಬೆಳಗ್ಗೆ 8:30 ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಮಠದಲ್ಲಿ ತಿಂಡಿ ಸವಿಯಲಿದ್ದಾರೆ. ಅಲ್ಲಿಂದ ನೇರವಾಗಿ ಬೆಳಗ್ಗೆ 11 ಗಂಟೆಗೆ ಲಲಿತ ಮಹಲ್ ಪ್ಯಾಲೇಸ್‌ಗೆ ಸಿದ್ದರಾಮಯ್ಯ ತೆರಳಲಿದ್ದಾರೆ. ಲಲಿತ ಮಹಲ್ ಪ್ಯಾಲೇಸ್‌ನಿಂದ ಸಚಿವರ ಹಾಗೂ ಗಣ್ಯರ ಜೊತೆ ಅರಮನೆಗೆ ಪಯಣ ಬೆಳೆಸಲಿದ್ದಾರೆ. 

CM Siddaramaiah Will Be Attend Jamboo Savari in Mysuru Dasara 2023 grg
Author
First Published Oct 24, 2023, 8:01 AM IST

ಮೈಸೂರು(ಅ.24): ಇಂದು(ಮಂಗಳವಾರ) ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ನಡೆಯಲಿದೆ. ಮೈಸೂರು ದಸರಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಲಿದ್ದಾರೆ.  ಇಂದು ಬೆಳಗ್ಗೆ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿಲಿದ್ದಾರೆ ಬೆಳಗ್ಗೆ 8:30 ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಮಠದಲ್ಲಿ ತಿಂಡಿ ಸವಿಯಲಿದ್ದಾರೆ. ಅಲ್ಲಿಂದ ನೇರವಾಗಿ ಬೆಳಗ್ಗೆ 11 ಗಂಟೆಗೆ ಲಲಿತ ಮಹಲ್ ಪ್ಯಾಲೇಸ್‌ಗೆ ಸಿದ್ದರಾಮಯ್ಯ ತೆರಳಲಿದ್ದಾರೆ. ಲಲಿತ ಮಹಲ್ ಪ್ಯಾಲೇಸ್‌ನಿಂದ ಸಚಿವರ ಹಾಗೂ ಗಣ್ಯರ ಜೊತೆ ಅರಮನೆಗೆ ಪಯಣ ಬೆಳೆಸಲಿದ್ದಾರೆ. 

ಮಧ್ಯಾಹ್ನ 1.46 ರಿಂದ 2.08 ರ ಶುಭಲಘ್ನದಲ್ಲಿ ಅರಮನೆಯ ಬಲರಾಮದ್ವಾರದಲ್ಲಿ ನಂದಿ ಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪೂಜೆ ಸಲ್ಲಿಸಲಿದ್ದಾರೆ. ನಂತರ ವಿಶ್ವವಿಖ್ಯಾತ ಅಂಬಾರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 4.40 ರಿಂದ 5 ಗಂಟೆಗೆ ಸಲ್ಲುವ ಶುಭ ಮೀನಾ ಲಘ್ನದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿಗೆ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. 

Mysuru Dasara 2023: ಸತತ 4ನೇ ಬಾರಿ ಅಭಿಮನ್ಯುವಿನ ಮೇಲೆ ಅಂಬಾರಿ

ಸಿಎಂ ಸಿದ್ದರಾಮಯ್ಯಗೆ, ಡಿಸಿಎಂ ಡಿ.ಕೆ. ಶಿವಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ. 

ನಂತರ ಸಂಜೆ 7.30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬನ್ನಿ ಮಂಟಪಕ್ಕೆ ತೆರಳಲಿದ್ದಾರೆ. ಬನ್ನಿಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯತಿನಲ್ಲಿ ಸಿಎಂ ಗೌವರ ವಂದನೆ ಸ್ವೀಕಾರ ಮಾಡಲಿದ್ದಾರೆ. ಸಿಎಂ ಜೊತೆಗೆ ರಾಜ್ಯಪಾಲರೂ ಗೌರವ ವಂದನೆ ಸ್ವೀಕಾರ ಮಾಡಲಿದ್ದಾರೆ. ನಂತರ ಮೈಸೂರಿನ ನಿವಾಸದಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದಾರೆ. 

ನಾಳೆಯೂ ಮೈಸೂರಿನಲ್ಲಿ ನಡೆಯುವ ಹಲವು ಕಾರ್ಯಕ್ರಮದಲ್ಲಿ ಸಿಎಂ ಭಾಗಿ

ನಾಳೆಯೂ ಮೈಸೂರಿನಲ್ಲಿ ನಡೆಯುವ ಹಲವು ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಲಿದ್ದಾರೆ. ಇಂದು ನಡೆಯಲಿರುವ 414ನೇ ದಸರಾ ಜಂಬೂ ಸವಾರಿ ಆಚರಣೆಗೆ ಅರಮನೆ ಅಂಗಳದಲ್ಲಿ 30 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. 

ಅರಮನೆಯಲ್ಲಿ ದಸರಾ ಸಡಗರ 

ಬೆಳಿಗ್ಗೆ 6ರಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಬೆಳಗ್ಗೆ 9 ಕ್ಕೆ ಅರಮನೆ ಅಂಬಾವಿಲಾಸ ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ನಡೆಯಲಿದೆ. ಬೆಳಗ್ಗೆ 9.30 ಕ್ಕೆ ರಾಜರ ಬೆಳ್ಳಿ ರಥಕ್ಕೆ ಪೂಜೆ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಯದುವೀರ್ ವಿಜಯ ಯಾತ್ರೆ ನಡೆಯಲಿದೆ. ಮಧ್ಯಾಹ್ನ 12 ಕ್ಕೆ ಭುವನೇಶ್ವರಿ ದೇವಸ್ಥಾನದಲ್ಲಿ ಯದುವೀರ್ ಬನ್ನಿ ಪೂಜೆ ನಡೆಯಲಿದೆ. ಇದರೊಂದಿಗೆ ಅರಮನೆಯ ದಸರಾ ಕಾರ್ಯಕ್ರಮ ಮುಕ್ತಾಯವಾಗಲಿದೆ. 

ಅಂಬಾರಿ ಹೊರಲು ಸಜ್ಜಾದ ಅಭಿಮನ್ಯು

ನಾಲ್ಕನೇ ಬಾರಿಗೆ ಅಂಬಾರಿ ಹೊರಲು ಅಭಿಮನ್ಯು ಸಜ್ಜಾಗಿದ್ದಾನೆ. ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ದೇಶಾದ್ಯಂತ 200 ಆನೆ, 50 ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಅಭಿಮನ್ಯು ಪಾಲ್ಗೊಂಡಿದ್ದಾನೆ. 

ದಸರಾ ಜಂಬೂ ಸವಾರಿಯ ಸ್ತಬ್ದಚಿತ್ರಗಳ ವಿವರ: 

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ 31 ಸ್ತಬ್ದ ಚಿತ್ರಗಳು ಹಾಗೂ ವಿವಿಧ ಇಲಾಖೆಗಳ 18 ಸ್ತಬ್ದ ಚಿತ್ರಗಳು ಸೇರಿದಂತೆ ಒಟ್ಟು 49 ವಿವಿಧ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.

 1.ಬಾಗಲಕೋಟೆ ಜಿಲ್ಲೆಯಿಂದ ಬಾದಾಮಿ ಚಾಲುಕ್ಯರ ರಾಜವಂಶ ಹಾಗೂ ಶ್ರೀ ಬನಶಂಕರಿ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
2. ಬಳ್ಳಾರಿ ಜಿಲ್ಲೆಯಿಂದ ಕುಮಾರಸ್ವಾಮಿ ದೇವಸ್ಥಾನ ಪಾರ್ವತಿ ದೇವಿ ದೇವಾಲಯ, ಕಸೂತಿ, ನಾರಿಹಳ್ಳ ಅಣೆಕಟ್ಟು ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
3. ಬೆಳಗಾವಿ ಜಿಲ್ಲೆಯಿಂದ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
4.  ಬೆಂಗಳೂರು ಗ್ರಾಮಾಂತರದಿಂದ  ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ, ನೆಲಮಂಗಲ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
5. ಬೆಂಗಳೂರು ನಗರದಿಂದ  ಚಂದ್ರಯಾನ 3ರ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
6. ಬೀದರ್ ಜಿಲ್ಲೆಯಿಂದ ಕೃಷ್ಣಮೃಗ ಸಂರಕ್ಷಣಾ ಧಾಮದ ಅರಣ್ಯ ಪ್ರದೇಶದ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
7. ಚಾಮರಾಜನಗರ ಜಿಲ್ಲೆಯಿಂದ  ಜಾನಪದ, ಭಕ್ತಿಯ ಬಿಡು ಹುಲಿ, ಆನೆಗಳ ಸಂತೃಪ್ತಿಯ ಕಾಡು ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
8. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಏಕತೆಯಲ್ಲಿ ಅನೇಕತೆ ಎಂಬ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
9. ಚಿಕ್ಕಮಗಳೂರು ಜಿಲ್ಲೆಯಿಂದ ಬೆಟ್ಟದಿಂದ ಬಟ್ಟಲಿಗೆ ಎಂಬ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
10. ಚಿತ್ರದುರ್ಗ ಜಿಲ್ಲೆಯಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
11. ದಕ್ಷಿಣ ಕನ್ನಡ ಜಿಲ್ಲೆಯಿಂದ ಪಿಲಕುಲ ಗುತ್ತಿನ ಮನೆ - ವಿವೇಕಾನಂದ ತಾರಾಲಯ- ಬೀಚ್ ಸರ್ಫಿಂಗ್ ಸ್ಥಬ್ಧ ಚಿತ್ರ ನಿರ್ಮಾಣವಾಗಿದೆ.
12. ದಾವಣಗೆರೆ ಜಿಲ್ಲೆಯಿಂದ ಸಂತ ಸೇವಾವಾಲಾ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯದ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
13. ಧಾರವಾಡ ಜಿಲ್ಲೆಯಿಂದ ಧಾರವಾಡ ಪೇಡ ಧಾರವಾಡಿ ಎಮ್ಮೆ ನಮ್ಮ ಹೆಮ್ಮೆ ಎಂಬ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
14. ಗದಗ ಜಿಲ್ಲೆಯಿಂದ ಸಬರಮತಿ ಆಶ್ರಮದ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
15. ಹಾಸನ ಜಿಲ್ಲೆಯಿಂದ ಹಾಸನಾಂಬ ದೇವಾಲಯ, ಹಲ್ಮಿಡಿ -ಈಶ್ವರ ದೇವಸ್ಥಾನ ಸಿದ್ದೇಶ್ವರ ದೇವಾಲಯದ ಸ್ತಬ್ಧಚಿತ್ರ ನಿರ್ಮಾಣವಾಗಿದೆ.
16. ಹಾವೇರಿ ಜಿಲ್ಲೆಯಿಂದ ಶಂಕನಾದ ಮುಳುಗುತ್ತಿರುವ ಶ್ರೀ ಕನಕದಾಸರು ಹಾಗೂ ಗದ್ದಿಗೆ ಕಾಗಿನೆಲೆ ಸ್ಥಬ್ಧ ಚಿತ್ರ ನಿರ್ಮಾಣವಾಗಿದೆ.
17. ಕಲ್ಬುರ್ಗಿ ಜಿಲ್ಲೆಯಿಂದ ರಾಜವಂಶಸ್ತ್ರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ ವನ್ಯಜೀವಿಧಾಮದ ಸ್ತಬ್ದ ಚಿತ್ರ ನಿರ್ಮಾಣವಾಗಿದೆ.
18. ಕೊಡಗು ಜಿಲ್ಲೆಯಿಂದ ಕೊಡಗಿನ ಪ್ರೇಕ್ಷಣೀಯ ಸ್ಥಳಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
19. ಕೋಲಾರ ಜಿಲ್ಲೆಯಿಂದ ನರೇಗಾ ಯೋಜನೆ ಅಡಿ ವೀರಗಲ್ಲುಗಳ ಉತ್ಕನನ ಹಾಗೂ ಮರುಸ್ಥಾಪನೆಯ ಸ್ಥಬ್ಧ ಚಿತ್ರ ನಿರ್ಮಾಣವಾಗಿದೆ.
20. ಕೊಪ್ಪಳ ಜಿಲ್ಲೆಯಿಂದ ಕಿನ್ನಾಳ ಕಲೆ ಹಾಗೂ ಕೈಮಗ್ಗ ಕುರಿತ ಸ್ತಬ್ದ ಚಿತ್ರ ನಿರ್ಮಾಣವಾಗಿದೆ.
21. ಮಂಡ್ಯ ಜಿಲ್ಲೆಯಿಂದ ಸಾಂಪ್ರದಾಯಿಕ ಉದ್ಯಮ ಆಲೆಮನೆ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
22. ಮೈಸೂರು ಜಿಲ್ಲೆಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
23. ರಾಯಚೂರು ಜಿಲ್ಲೆಯಿಂದ ನವರಂಗ ದರ್ವಾಜ ಹಾಗೂ ಆರ್ಟಿಫಿಎಸ್ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
24. ರಾಮನಗರ ಜಿಲ್ಲೆಯಿಂದ ಚನ್ನಪಟ್ಟಣದ ಚಂದದ ಗೊಂಬೆಗಳು ಹಾಗೂ ಇತ್ಯಾದಿ ಕಲೆಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
25. ಶಿವಮೊಗ್ಗ ಜಿಲ್ಲೆಯಿಂದ ಕುವೆಂಪುರವರ ಪ್ರತಿಮೆ, ಕುಪ್ಪಳ್ಳಿ,ಗುಡವಿ ಪಕ್ಷಿಧಾಮ, ನಗರ ಸಿಂಹದಾಮ, ಶಿವಪ್ಪ ನಾಯಕ ಪ್ರತಿಮೆಯ ಸ್ತಬ್ಧಚಿತ್ರ ನಿರ್ಮಾಣವಾಗಿದೆ. 
26. ತುಮಕೂರು ಜಿಲ್ಲೆಯಿಂದ ಮೂಡಲಪಾಯ ಯಕ್ಷಗಾನ, ತವರು ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
27. ಉಡುಪಿ ಜಿಲ್ಲೆಯಿಂದ ತ್ಯಾಜ್ಯ ಮುಕ್ತ ಮತ್ಸ್ಯ ಸ್ನೇಹಿ ಸಮುದ್ರ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
28. ಉತ್ತರ ಕನ್ನಡ ಜಿಲ್ಲೆಯಿಂದ ಶರಾವತಿ ಮಡಿಲಲ್ಲಿ ವನ್ಯಜೀವಿ ಹಾಗೂ ಸಿಂಹದ ಬಾಲದ ಸಿಂಗಳಿಕ ಸಂರಕ್ಷಣೆ ಕುರಿತ ತಬ್ದ ಚಿತ್ರ ನಿರ್ಮಾಣಗೊಂಡಿದೆ.
29. ವಿಜಯಪುರ ಜಿಲ್ಲೆಯಿಂದ ಜ್ಞಾನ ಯೋಗಶ್ರಮದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
30. ವಿಜಯನಗರ ಜಿಲ್ಲೆಯಿಂದ ವಿಠಲ ದೇವಸ್ಥಾನದ ಕುರಿತ ಸ್ತಬ್ದ ಚಿತ್ರ ನಿರ್ಮಾಣವಾಗಿದೆ.
31, ಯಾದಗಿರಿ ಜಿಲ್ಲೆಯಿಂದ ವೇಣುಗೋಪಾಲ ಸ್ವಾಮಿ ದೇವಸ್ಥಾನದ  ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 49 ಸ್ತಬ್ಧಚಿತ್ರ

ವಿವಿಧ ಇಲಾಖೆಗಳಿಂದ 18 ಸ್ತಬ್ಧಚಿತ್ರಗಳ ನಿರ್ಮಾಣ

1. ಸ್ತಬ್ಧ ಚಿತ್ರ ಉಪಸಮಿತಿಯಿಂದ ಅರಮನೆ ವಾದ್ಯಗೋಷ್ಠಿಯ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
 2. ಸ್ತಬ್ಧ  ಚಿತ್ರ ಉಪಸಮಿತಿಯಿಂದ ಯುನೋ ಸ್ಕೋ ದಿಂದ ಗುರುತಿಸಲ್ಪಟ್ಟ ವಿಶ್ವ ಪಾರಂಪರಿಕ ಹೊಯ್ಸಳ ದೇವಸ್ಥಾನ, ಬೇಲೂರು ಹಳೇಬೀಡು, ಸೋಮನಾಥಪುರ ದೇವಾಲಯ, ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
3. ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಪೀಠಿಕೆ ಇಲಾಖೆಗಳ ಯೋಜನೆಗಳ ಕುರಿತ ಸ್ತಬ್ದ ಚಿತ್ರ ನಿರ್ಮಾಣವಾಗಿದೆ.
4. ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
5. ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ  ಗೃಹಲಕ್ಷ್ಮಿ ಯೋಜನೆ ಹಾಗೂ ಇತರೆ ಯೋಜನೆಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.
6. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಹಾಗೂ ಇಲಾಖೆಗೆ ಸಂಬಂಧಿಸಿದಂತೆ ಇತರೆ ಯೋಜನೆಗಳ ಕುರಿತ ಸ್ತಬ್ದ ಚಿತ್ರ ನಿರ್ಮಾಣವಾಗಿದೆ.
7. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಹಸಿವಿನಿಂದ ಯಾರು ಬಳಲಬಾರದು ಅದಕ್ಕಾಗಿ ಬಂದಿದೆ ಅನ್ನಭಾಗ್ಯ ಎಂಬ ಸ್ತಬ್ದ ಚಿತ್ರ ನಿರ್ಮಾಣವಾಗಿದೆ.
8. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಶೌರ್ಯ, ನ್ಯಾಯ, ರಕ್ಷೆ ಕುರಿತ ಸ್ತಬ್ಧ ಚಿತ್ರ ನಿರ್ಮಾಣಗೊಂಡಿದೆ.
9. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಅಂಗಾಂಗ ದಾನ ಆಶಾಕಿರಣ ಕುರಿತ ಸ್ತಬ್ದ ಚಿತ್ರ ನಿರ್ಮಾಣವಾಗಿದೆ.
10. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ವತಿಯಿಂದ ಕ್ಷೀರಭಾಗ್ಯ ಯೋಜನೆ ಕುರಿತು ಸ್ತಬ್ದ ಚಿತ್ರ ನಿರ್ಮಾಣಗೊಂಡಿದೆ.
11. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಗೃಹಜೋತಿ, ಕೃಷಿ ಸೋಲಾರ್ ಸೆಟ್, ಈವಿ ಚಾರ್ಜರ್ ಪಾಯಿಂಟ್ ಕುರಿತ ಸ್ತಬ್ದ ಚಿತ್ರ ನಿರ್ಮಾಣಗೊಂಡಿದೆ.
12. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯ 1924 -2024 ಶತಮಾನೋತ್ಸವ ಕುರಿತ ಸ್ತಬ್ದ ಚಿತ್ರ ನಿರ್ಮಾಣಗೊಂಡಿದೆ.
13. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಲಕ್ಕುಂಡಿ ಬ್ರಹ್ಮ ಜಿನಾಲಯ ಕುರಿತ ತಬ್ದ ಚಿತ್ರ ನಿರ್ಮಾಣಗೊಂಡಿದೆ.
14. ಕಾವೇರಿ ನೀರಾವರಿ ನಿಗಮ (ನಿ) ಮೈಸೂರು ವತಿಯಿಂದ ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿಯ ಕುರಿತು ಸ್ತಬ್ದ ಚಿತ್ರ ನಿರ್ಮಾಣಗೊಂಡಿದೆ.
15. ವಾಕ್ ಶ್ರವಣ ಸಂಸ್ಥೆಯಿಂದ ವಾಕ್ ಶ್ರವಣ ದೋಷದಿಂದ ಉತ್ತಮ ಜೀವನದೆಡೆಗೆ ಆಯುಷ್ ಕೊಡುಗೆ ಎಂಬ ಸ್ತಬ್ದ ಚಿತ್ರ ನಿರ್ಮಾಣಗೊಂಡಿದೆ.
16. ಡಾಕ್ಟರ್ ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ  ಲಿಡ್ಕರ್ ಅಪ್ಪಟ ಚರ್ಮ ಉತ್ಪನ್ನಗಳ ಆಗರ ಮತ್ತು ಚರ್ಮ ಕುಶಲಕರ್ಮಿಗಳ ಅಭಿವೃದ್ಧಿಯ ಆಶಾಕಿರಣ ಎಂಬ ಸ್ತಬ್ದ ಚಿತ್ರ ನಿರ್ಮಾಣಗೊಂಡಿದೆ.
17. ಸಮಾಜ ಕಲ್ಯಾಣ ಇಲಾಖೆಯ ಇಂದ ಭಾರತೀಯ ಸಂವಿಧಾನ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಅವರ ಕುರಿತ ಸ್ತಬ್ಧ ಚಿತ್ರ ನಿರ್ಮಾಣಗೊಂಡಿದೆ.
18. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವತಿಯಿಂದ ಸಂವಿಧಾನ ಪೀಠಿಕೆ ಓದು ಕಡ್ಡಾಯ ಎಂಬ ಸ್ತಬ್ಧ ಚಿತ್ರ ನಿರ್ಮಾಣಗೊಂಡಿದೆ.
ಈ ಎಲ್ಲಾ ಸ್ತಬ್ದ ಚಿತ್ರಗಳು ಜಂಬೂ ಸವಾರಿ ತೆರಳುವ ಮಾರ್ಗದಲ್ಲಿ ತೆರಳಲಿದೆ.

Follow Us:
Download App:
  • android
  • ios