Asianet Suvarna News Asianet Suvarna News

ಉದ್ಘಾಟನೆಗೂ ಮುನ್ನವೇ ಕುಸಿದು ಬಿತ್ತು ಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ, ವಿಡಿಯೋ ವೈರಲ್!

1,710ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಬಿಹಾರದ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿದೆ. ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ್ದಈ ಸೇತುವೆ ಕುಸಿಯು ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ

Under construction Bihar Aguwani Sultanganj bridge collapses into river Ganga video viral ckm
Author
First Published Jun 4, 2023, 8:18 PM IST

ಪಾಟ್ನಾ(ಜೂ.04): ಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಉದ್ಘಾಟನೆಗೊಳ್ಳುವ ಮೊದಲೇ ಕುಸಿದು ಬಿದ್ದಿದೆ. ಬಿಹಾರದ ಭಾಗಲ್ಪುರದಲ್ಲಿ ಅಂತಿಮ ಹಂತದ ಕಾಮಗಾರಿಯಲ್ಲಿದ್ದ ಅಗುವಾನಿ ಸುಲ್ತಾನ್‌ಗಂಜ್ ಸೇತುವೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಬರೋಬ್ಬರಿ 1,710ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಈ ಸೇತುವೆ ಇದೀಗ ನೀರುಪಾಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಹತ್ವಾಕಾಂಕ್ಷಿಯ ಯೋಜನೆ ಇದಾಗಿದೆ. ಆದರೆ ಈ ಸೇತುವೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಇಂದು(ಜೂ.04) ಭಾನುವಾರ ಕಾಮಕಾರಿ ನಡೆಯುತ್ತಿರಲಿಲ್ಲ.ಇತ್ತ ಘಟನಾ ಸ್ಥಳದಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ ದುರಂತದಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ. ಸೇತುವೆ ಕುಸಿತ ಆರಂಭವಾಗುತ್ತಿದ್ದಂತೆ ಸ್ಥಳೀಯರು, ಕಾರ್ಮಿಕರು ವಿಡಿಯೋ ಮಾಡಿದ್ದಾರೆ. ಸೇತುವೆ ಕುಸಿಯುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ. ಒಡಿಶಾ ರೈಲು ದುರಂತದ ನೋವು ಮಾಸುವ ಮುನ್ನವೇ ಮತ್ತೊಂದು ಮಹಾ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ.

 

Bihar: ಉದ್ಘಾಟನೆಗೂ ಮುನ್ನವೇ ಎರಡು ತುಂಡಾದ 13 ಕೋಟಿ ರೂ. ವೆಚ್ಚದ ಸೇತುವೆ

ಸಿಎಂ ನಿತೀಶ್ ಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. 2022ರಲ್ಲಿ ಈ ಸೇತುವೆ ಕಳಪೆ ಕಾಮಗಾರಿ ವರದಿಯಾಗಿತ್ತು. ಈ ವರದಿ ಹೊರಬಿದ್ದ ಬೆನ್ನಲ್ಲೇ ಸೇತುವೆ ಕುಸಿದು ಬಿದ್ದಿತ್ತು. ಬಳಿಕ ಮತ್ತೆ ಕಾಮಗಾರಿ ಆರಂಭಿಸಿದ ಬಿಹಾರ ಸರ್ಕಾರ 2023ರ ವೇಳೆ ಬಹತೇಕ ಕಾಮಗಾರಿ ಮುಗಿಸಿತ್ತು. ಅಂತಿಮ ಹಂತದ ಕಾಮಾಗಾರಿ ಬಾಕಿ ಉಳಿದಿತ್ತು. ಇದೀಗ ಎರಡನೇ ಬಾರಿಗೆ ಈ ಸೇತುವೆ ಕುಸಿದು ಬಿದ್ದಿದೆ.

 

 

ಎಪ್ರಿಲ್ ತಿಂಗಳಲ್ಲಿ ಒಡಿಶಾ ಸೇರಿದಂತೆ ಕರಾವಳಿ ರಾಜ್ಯಗಳಿಗೆ ಅಪ್ಪಳಿಸಿದ ಚಂಡಮಾರುತದ ವೇಳೆ ಬಿಹಾರದ ಇದೇ ಸೇತುವೆ ಕೂಡ ಹಾನಿಯಾಗಿತ್ತು. ಈ ಸಂದರ್ಭದಲ್ಲೂ ಸೇತುವೆ ಕಳಪೆ ಕಾಮಗಾರಿ ಕುರಿತು ಹಲವು ಪ್ರಶ್ನೆ ಎದ್ದಿತ್ತು. ಇದೀಗ ಸೇತುವೆ ಸಂಪೂರ್ಣವಾಗಿ ಕುಸಿಯುವ ಮೂಲಕ ಅತ್ಯಂತ ಕಳಪೆ ಕಾಮಗಾರಿ ಅನ್ನೋದು ಸಾಬೀತಾಗಿದೆ. ಅಗುವಾನಿ ಸುಲ್ತಾನಗಂಜ್ ಸೇಚುವೆಯ ಮೂರು ಪಿಲ್ಲರ್ ಕಾಮಾಗಾರಿ ನಡೆಯುತ್ತಿತ್ತು. ಈ ಪಿಲ್ಲರು ಕುಸಿಯುತ್ತಿದ್ದಂತೆ ಸಂಪೂರ್ಣ ಸೇತುವೆ ಕುಸಿದಿದೆ.

ಇದೀಗ ನಿತೀಶ್ ಕುಮಾರ್ ಸರ್ಕಾರದ ಕಳಪೆ ಕಾಮಗಾರಿ, ಕಮಿಷನ್ ದಂಧೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 1,710 ಕೋಟಿ ರೂಪಾಯಿ ವೆಚ್ಚದ ಸೇತುವೆ ನೀರಿನಲ್ಲಿ ಮುಳುಗಿದೆ. ಇದರ ಬಹುತೇಕ ಹಣ ನಿತೀಶ್ ಸರ್ಕಾರದಲ್ಲಿರುವ ಕೆಲವರ ಕೈಸೇರಿದೆ. ಕಮಿಷನ್ ದಂಧೆಯಿಂದ ಈ ಸೇತುವೆ ಕುಸಿದಿದೆ. ರಾಜ್ಯದ ಜನರ ದುಡ್ಡನ್ನು ನೀರಿನಲ್ಲಿ ಹೋಮ ಮಾಡಿದ್ದೀರಿ ಎಂದು ಬಿಹಾರದ ಎಲ್ಒಪಿ ನಾಯಕ ವಿಜಯ್ ಕುಮಾರ್ ಸಿನ್ಹ ಆರೋಪಿಸಿದ್ದಾರೆ.

ನಳಂದ ಜಿಲ್ಲೆಯಲ್ಲಿ ಬಿಹಾರ ಸರ್ಕಾರದ ಕಟ್ಟಿದ ಹೊಸ ಸೇತುವೆ ಕುಸಿದು ಓರ್ವ ಕಾರ್ಮಿಕ ಮೃತಪಟ್ಟಿದ್ದರೆ, ಮತ್ತೊರ್ವ ಗಂಭೀರವಾಗಿ ಗಾಯಗೊಂಡಿದ್ದರು. ನಿತೀಶ್ ಕುಮಾರ್ ಸರ್ಕಾರ ಕಟ್ಟಿದ ಸೇತುವೆಯಲ್ಲಿ ಪ್ರಯಾಣ ಮಾಡುವುದೇ ಅಪಾಕಾರಿ. ಎರಡು ಸೇತುವೆಗಳು ಅಂತಿಮ ಹಂತದ ಕಾಮಗಾರಿ ವೇಳೆ ಕುಸಿದು ಬಿದ್ದಿದೆ. ಇನ್ನು ಉದ್ಗಾಟನೆ ಬಳಿಕ ಈ ರೀತಿ ಘಟನೆ ಸಂಭವಿಸಿದರೆ ಸಾವು ನೋವಿನ ಸಂಖ್ಯೆ ವರದಿಯಾಗಲಿದೆ. ಆದರೆ ಸರ್ಕಾರ ಮಾತ್ರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಿಜಯ್ ಕುಮಾರ್ ಸಿನ್ಹ ಆರೋಪಿಸಿದ್ದಾರೆ. 

ನಿರ್ಮಾಣ ಹಂತದಲ್ಲಿದ್ದ ಸೇತುವೆ ದಿಢೀರ್ ಕುಸಿತ : ದೊಡ್ಡ ಅನಾಹುತದಿಂದ ಕಾರ್ಮಿಕರು ಜಸ್ಟ್ ಮಿಸ್‌..!

ನಿತೀಶ್ ಕುಮಾರ್ ತನ್ನ ರಾಜ್ಯದಲ್ಲಿ ನಡೆಯುತ್ತಿರುವ ಕಾಮಾಗಾರಿ ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದೀಗ ನಿತೀಶ್ ಕುಮಾರ್ ಪ್ರತಿಪಕ್ಷಗಳನ್ನು ಒಗ್ಗೂಡಿಸಿ ಕೇಂದ್ರ ಬಿಜೆಪಿ ವಿರುದ್ಧ ಹೋರಾಡುವ ಕನಸು ಕಾಣುತ್ತಿದ್ದಾರೆ ಎಂದು ವಿಜಯ್ ಕುಮಾರ್ ಸಿನ್ಹ ಆಕ್ರೋಶ ಹೊರಹಾಕಿದ್ದಾರೆ.

Follow Us:
Download App:
  • android
  • ios