Asianet Suvarna News Asianet Suvarna News

ಕುಡಿದ ಮತ್ತಿನಲ್ಲಿ ಹಳಿಗೆ ಬಿದ್ದ ವ್ಯಕ್ತಿ ಮೇಲಿಂದ ಸಾಗಿತು ರೈಲು, ನಂತರ ನಡೆಯಿತು ಪವಾಡ!

ಕಂಠಪೂರ್ತಿ ಕುಡಿದ ವ್ಯಕ್ತಿಯ ತಲೆ ಗಿರ ಗಿರ ತಿರುಗಿ ರೈಲು ಹಳಿ ದಾಟುತ್ತಿರುವಾಗ ಬಿದ್ದಿದ್ದಾನೆ.  ಮೇಳೆಲು ಸಾಧ್ಯವಾಗಿಲ್ಲ. ಕೆಲ ಹೊತ್ತಲ್ಲೇ ರೈಲು ಕೂಡ ಅದೇ ಹಳಿ ಮೂಲಕ ಸಾಗಿ ಬಂದಿದೆ. ಸಂಪೂರ್ಣ ರೈಲು ಸಾಗಿದ ಬೆನ್ನಲ್ಲೇ ಪೊಲೀಸರು ಓಡೋಡಿ ಬಂದಾಗ ಅಚ್ಚರಿಯಾಗಿದೆ.

Drunken man narrow escape from death after train passing over him bijor uttar Pradesh ckm
Author
First Published Aug 10, 2024, 8:22 AM IST | Last Updated Aug 10, 2024, 8:22 AM IST

ಲಖನೌ(ಆ.10) ಕುಡಿದು ತೂರಾಡುತ್ತಾ ಸಾಗುವ ದೃಶ್ಯಗಳು ಹೊಸದೇನಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ಕುಡಿದ ಮತ್ತಿನಲ್ಲಿ ನಡೆದುಕೊಂಡು ಸಾಗುತ್ತಿರುವಾಗ ರೈಲ್ವೇ ಹಳಿಗೆ ಬಿದ್ದಿದ್ದಾನೆ. ಮೊದಲ ತಲೆ ಗಿರ ಗಿರ ತಿರುಗುತ್ತಿತ್ತು. ಬಿದ್ದ ರಭಸಕ್ಕೆ ಎಲ್ಲವೂ ಮಂಜಾಗಿದೆ. ಮೇಲೆಳಲು ಸಾಧ್ಯವಾಗಿಲ್ಲ, ಏಳುವ ಪ್ರಯತ್ನವನ್ನೂ ಮಾಡಿಲ್ಲ. ಅಷ್ಟರಲ್ಲೇ ಅದೇ ಹಳಿಯಂದ ರೈಲೊಂದು ವೇಗವಾಗಿ ಸಾಗಿದೆ. ಈ ಮಾಹಿತಿ ಪಡೆದ ರೈಲ್ವೇ ಪೊಲೀಸರು ಓಡೋಡಿ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಪೊಲೀಸರಿಗೆ ಅಚ್ಚರಿಯಾಗಿದೆ. ಒಂದೇ ಒಂದು ಸಣ್ಣ ಗಾಯವಿಲ್ಲದೆ ಈತ ಪಾರಾಗಿದ್ದಾನೆ.ಉತ್ತರ ಪ್ರದೇಶದ ಬಿಜ್ನೋರ್ ಬಳಿ ಈ ಘಟನೆ ನಡೆದಿದೆ.

ಬಿಜ್ನೋರ್‌ನ ಪಟ್ಟಣದಲ್ಲಿರುವ ಬಾರ್‌ನಲ್ಲಿ ರಾತ್ರಿ ವೇಳೆ ಕಂಠಪೂರ್ತಿ ಕುಡಿದ ಈತ ನಡೆದುಕೊಂಡೇ ಮನೆ ಸೇರಲು ಮುಂದಾಗಿದ್ದಾನೆ. ನಡೆಯಲು ಸಾಧ್ಯವಾಗದಷ್ಟು ಕುಡಿದ ಕಾರಣ ತೂರಾಡುತ್ತಾ ಸಾಗಿದ್ದಾನೆ. ಆದರೆ ಹೆಚ್ಚಿನ ದೂರ ಸಾಗಲು ಸಾಧ್ಯವಾಗಿಲ್ಲ. ಎದ್ದು ಬಿದ್ದು ಸಾಗಿದ ಈತ ಕೆಲ ದೂರದಲ್ಲಿರುವ ರೈಲು ಹಳಿ ದಾಟಲು ಮುಂದಾಗಿದ್ದಾನೆ. ಆದರೆ ಮೊದಲೇ ನಡೆಯಲು ಪರದಾಡುತ್ತಿದ್ದ ಈತ ರೈಲು ಹಳಿಯಲ್ಲಿ ಬಿದ್ದಿದ್ದಾನೆ.

ತೀವ್ರ ಹಲ್ಲೆಯಿಂದ ಸತ್ತಿದ್ದಾನೆಂದು ಮಣ್ಣಿನಡಿ ಹೂತು ಹಾಕಿದ ವ್ಯಕ್ತಿಯನ್ನು ಬದುಕಿಸಿದ ಬೀದಿ ನಾಯಿ!

ಬಿದ್ದ ಬೆನ್ನಲ್ಲೇ ಈತನಿಗೆ ಮೇಲೆಳಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ ನಶೆ ಹೆಚ್ಚಾದ ಕಾರಣ ಅಲ್ಲೆ ಬಿದ್ದಿದ್ದಾನೆ. ಕೆಲ ಹೊತ್ತಲ್ಲೇ ಇದೇ ಹಳಿ ಮೂಲಕ ರೈಲು ಆಗಮಿಸಿದೆ. ರಾತ್ರಿಯಾಗಿದ್ದ ಕಾರಣ ಲೋಕೋ ಪೈಲೆಟ್‌ಗೆ ಸಮೀಪ ಬರುತ್ತಿದ್ದಂತೆ ರೈಲು ಹಳಿಯಲ್ಲಿ ಓರ್ವ ಬಿದ್ದಿರುವುದು ಗಮನಿಸಿದ್ದಾರೆ. ಆದರೆ ಅಷ್ಟೊತ್ತಿಗೆ ರೈಲು ಆತನ ಮೇಲಿಂದ ಸಾಗಿದೆ. ಪೈಲೆಟ್ ಆತಂಕದಿಂದ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಟಾರ್ಚ್ ಹಿಡಿದು ಸ್ಥಳಕ್ಕೆ ಓಡೋಡಿ ಬಂದ ಪೊಲೀಸರಿಗೆ ಅಚ್ಚರಿಯಾಗಿದೆ. ರೈಲು ಸಾಗಿದರೂ ಈತ ಅಲ್ಲೇ ಮಲಗಿದ್ದಾನೆ. ಈತನ ಮೇಲೆ ಒಂದು ಒಂದು ಗಾಯಗಳಿಲ್ಲ. ಪೊಲೀಸರ ಬಂದು ಈತನ ಎಬ್ಬಿಸಿದ್ದಾನೆ. ಹರಸಾಹಸ ಮಾಡಿ ಎದ್ದ ಈತ, ರೈಲು ಸಾಗಿದರೂ ಹೇಗೆ ಪಾರಾದೆ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಕುಡುಕನಿಗೆ ಯಾವುದು ನೆನಪಿಲ್ಲ. ಅತ್ತ ರೈಲು ಮೇಲಿಂದ ಸಾಗಿರುವ ಕುರಿತು ಸ್ಪಷ್ಟತೆ ಇರಲಿಲ್ಲ. 

 

 

ಪೊಲೀಸರು ಈತನ ಕರೆದುಕೊಂಡು ಬಂದಿದ್ದಾರೆ. ಬಳಿಕ ಈತನ ವಿಳಾಸ ಪಡೆದು ಮನೆಗೆ ತಲುಪಿಸಿದ್ದಾರೆ. ಇಷ್ಟೇ ಅಲ್ಲ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಕುಡಿದ ಮತ್ತಿನಲ್ಲಿ ಈತ ಹೇಗೆ ಮಲಗಿದ್ದಾನೆ ಅನ್ನೋದೇ ಗೊತ್ತಿಲ್ಲ. ಹೀಗಿದ್ದರು ಈತ ಯಾವುದೇ ಗಾಯಗಳಿಲ್ಲದೆ ಬಚಾವ್ ಆಗಿರುವುದು ಇದೀಗ ಅಚ್ಚರಿಗೆ ಕಾರಣವಾಗಿದೆ.

13ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಖುದ್ದಾಗಿ ಆ್ಯಂಬುಲೆನ್ಸ್ ಹತ್ತಿದ ಯುವತಿ: ಭೀಕರ ದೃಶ್ಯ ಸೆರೆ!
 

Latest Videos
Follow Us:
Download App:
  • android
  • ios