ಬರೋಬ್ಬರಿ 13ನೇ ಮಹಡಿಯಿಂದ ಅಚಾನಕ್ಕಾಗಿ ಕೆಳಕ್ಕೆ ಬಿದ್ದಿದ್ದಾಳೆ. ಆದರೆ ಕೆಲ ಹೊತ್ತು ಸಾವರಿಸಿಕೊಂಡು ಮೆಲ್ಲನೆ ಎದ್ದ ಯುವತಿಗೆ ಗಂಭೀರ ಗಾಯಗಳೇನು ಆಗಿಲ್ಲ. ಬಳಿಕ ನಡೆದುಕೊಂಡು ಆ್ಯಂಬುಲೆನ್ಸ್ ಹತ್ತಿ ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಮೈಜುಮ್ಮೆನಿಸುವ ವಿಡಿಯೋ ವೈರಲ್ ಆಗಿದೆ. 

ಮಾಸ್ಕೋ(ಜು.25) ಸ್ವಲ್ಪ ಆಯ ತಪ್ಪಿ ಬಿದ್ದರೂ ಜೀವಕ್ಕೆ ಅಪಾಯ ಸಾಧ್ಯತೆ ಹೆಚ್ಚು. ಹೀಗಿರುವಾಗಿ ಬರೋಬ್ಬರಿ 13ನೇ ಮಹಡಿ ಮೇಲಿಂದ ಬಿದ್ದರೆ ಅಡ್ರೆಸ್ ಕೂಡ ಇರಲ್ಲ. ಆದರೆ ಇಲ್ಲೊಂದು ಅಚ್ಚರಿಯಾಗಿದೆ. ಯುವತಿ ಅಚಾನಕ್ಕಾಗಿ ಆಯ ತಪ್ಪಿ 13ನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾಳೆ. ಕೆಲ ಹೊತ್ತಲ್ಲೇ ಸಾವರಿಸಿಕೊಂಡು ಮೆಲ್ಲನೆ ಎದ್ದು ಕುಳಿತ ಯುವತಿ ಹೆಚ್ಚಿನ ಗಾಯಗಳಿಲ್ಲದೆ ಬದುಕುಳಿದಿದ್ದಾಳೆ. ಈ ಗಟನೆ ರಷ್ಯಾದ ನೊವೊಸಿಬಿರ್ಸಿಕ್‌ನಲ್ಲಿ ನಡೆದಿದೆ. ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ಆ್ಯಂಬುಲೆನ್ಸ್ ಆಗಮಿಸಿದೆ ಈ ವೇಳೆ ಯುವತಿ ನಡೆದುಕೊಂಡೇ ಆ್ಯಂಬುಲೆನ್ಸ್ ಬಳಿ ಸಾಗಿ ಆಸ್ಪತ್ರೆ ದಾಖಲಾಗಿದ್ದಾಳೆ. ಈ ಘಟನೆ ವಿಡಿಯೋ ಇದೀಗ ಹಲವು ಅಚ್ಚರಿಗೆ ಕಾರಣವಾಗಿದೆ.

ಯುವತಿ ಮೇಲಿನಿಂದ ಕೆಳಕ್ಕೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬಿದ್ದ ರಭಸದಿಂದ ಶ್ವಾಸಕೋಶದಲ್ಲಿ ಕೊಂಚ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಚಿಕಿತ್ಸೆ ಬಳಿಕ ಯುವತಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇತರ ಯಾವುದೇ ಗಾಯಗಳು, ಮೂಳೆ ಮೂರಿತ ಆಕೆಯ ದೇಹದಲ್ಲಿ ಇಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.

ಮನೆಗೆ ಬೆಂಕಿ ಹಚ್ಚಿದ್ದ ಹಮಾಸ್ ಉಗ್ರರು, ಕಿಟಕಿಯಲ್ಲಿ ಮಗು ಮಲಗಿಸಿ ಬದುಕಳಿದ ಇಸ್ರೇಲ್ ಕುಟುಂಬ!

13ನೇ ಮಹಡಿಯಲ್ಲಿ ನಿಂತಿದ್ದ ಯುವತಿ ಅಚಾನಕ್ಕಾಗಿ ಕೆಳಕ್ಕೆ ಉರುಳಿದ್ದಾಳೆ. ಅದೃಷ್ಟವಶಾತ್ ಯುವತಿ ಅಪಾರ್ಟ್‌ಮೆಂಟ್‌ನ ಗಾರ್ಡನ್‌ನ ಹುಲ್ಲು ಹಾಸಿನ ಮೇಲೆ ಬಿದ್ದಿದ್ದಾಳೆ. ಇದರ ಪರಿಣಾಮ ತೀವ್ರತೆ ಕಡಿಮೆಯಾಗಿದೆ. ಬಿದ್ದ ರಭಸದಲ್ಲಿ ಯುವತಿಗೆ ಉಸಿರಾಡಲು ಕಷ್ಟವಾಗಿದೆ. ಆದರೆ ಕೆಲ ಹೊತ್ತಲ್ಲಿ ಸಾವರಿಸಿಕೊಂಡಿದ್ದಾಳೆ. ಅದರೂ ಊಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೆಲ ಹೊತ್ತಲ್ಲೇ ನಿಧಾನವಾಗಿ ಯವತಿ ಎದ್ದು ಕುಳಿತಿದ್ದಾಳೆ. ಆದರೆ ಮೇಲೇಳಲು ಸಾಧ್ಯವಾಗಿಲ್ಲ.

ಯುವತಿ ಕೆಳಕ್ಕೆ ಬಿದ್ದ ವೇಳೆಯಲ್ಲಿ ಕೆಳಗೆ ಯಾರು ಇರಲಿಲ್ಲ. ಹೀಗಾಗಿ ಹೀಗೊಂದು ಘಟನೆ ನಡೆದಿದೆ ಅನ್ನೋದು ಯಾರಿಗೂ ತಿಳಿದಿಲ್ಲ. ಯುವತಿ ಸಾವರಿಸಿಕೊಂಡು ಎದ್ದು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾಳೆ. ಆ್ಯಂಬುಲೆನ್ಸ್ ಆಗಮಿಸಿದ ಬಳಿಕ ಮೆಲ್ಲನೆ ಎದ್ದು ನಡೆದುಕೊಂಡು ಆ್ಯಂಬುಲೆನ್ಸ್‌ನತ್ತ ತೆರಳಿದ್ದಾಳೆ. ಖುದ್ದು ಆಸ್ಪತ್ರೆ ದಾಖಲಾದ ಯುವತಿ ಚಿಕಿತ್ಸೆ ಬಳಿಕ ಬಿಡುಗಡೆಯಾಗಿದ್ದಾರೆ.

Scroll to load tweet…

ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಯುವತಿ ಅದೃಷ್ಟ ಚೆನ್ನಾಗಿದೆ. ಹುಲ್ಲು ಹಾಸಿನ ಮೇಲೆ ಬಿದ್ದಿದ್ದಾಳೆ. ಹೀಗಾಗಿ ಬದುಕಿ ಉಳಿದಿದ್ದಾಳೆ. ಆದರೂ ಇದು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಕೆಲವರು ಆಕೆ ಬಿದ್ದಿದ್ದಾಳೆ ನಿಜ, ಆದರೆ 13ನೇ ಮಹಡಿಯಿಂದ ಬಿದ್ದಿರಲು ಸಾಧ್ಯವಿಲ್ಲ. 13 ಮಹಡಿಗ ಕಟ್ಟಡ ಆಗಿರಬಹುದು. ಯುವತಿ 1ನೇ ಅಥವಾ 2ನೇ ಮಹಡಿಯಿಂದ ಬಿದ್ದಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟ್ಯಾಂಕರ್ - ರೋಲ್ಸ್ ರಾಯ್ಸ್ ನಡುವೆ ಭೀಕರ ಅಪಘಾತ; ಟ್ರಕ್‌ನ ಇಬ್ಬರ ಸಾವು ಕಾರಿನಲ್ಲಿದ್ದವರು ಸೇಫ್!