Asianet Suvarna News Asianet Suvarna News

ಕೃಷ್ಣಮೃಗಗಳನ್ನು ಬೆನ್ನಟ್ಟುತ್ತಿರುವ ವಾಹನ ಸವಾರ: ವಿಡಿಯೋ ವೈರಲ್ ಕ್ರಮಕ್ಕೆ ಆಗ್ರಹ

ವಾಹನ ಸವಾರನೋರ್ವ ಎರಡು ಕೃಷ್ಣಮೃಗಗಳನ್ನು ಬೆನ್ನಟ್ಟುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸವಾರನ ಕಿಡಿಗೇಡಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

driver chasing two blackbucks video goes viral akb
Author
Bangalore, First Published Jun 23, 2022, 4:26 PM IST

ವಾಹನ ಸವಾರನೋರ್ವ ಎರಡು ಕೃಷ್ಣಮೃಗಗಳನ್ನು ಬೆನ್ನಟ್ಟುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸವಾರನ ಕಿಡಿಗೇಡಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ವಾಹನ ಬೆನ್ನಟ್ಟುತ್ತಿರುವುದರಿಂದ ಎರಡು ಕೃಷ್ಣಮೃಗಗಳು ಮಿಂಚಿನ ವೇಗದಲ್ಲಿ ರಸ್ತೆಯ ಮೇಲೆ ಓಡುತ್ತಿರುವುದನ್ನು ವಿಡಿಯೋ ತೋರಿಸುತ್ತಿದೆ. 

ವನ್ಯಪ್ರಾಣಿಗಳನ್ನು ಬೆನ್ನಟ್ಟುವುದು ಬೇಟೆಯಾಡುವುದು ವನ್ಯಜೀವಿ ಸಂರಕ್ಷಣಾ ಕ್ರಮದ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆಯೊಂದಿಗೆ ಏಳು ವರ್ಷಗಳವರೆಗೆ ಶಿಕ್ಷೆ  ವಿಸ್ತರಿಸಬಹುದು ಎಂದು ನಂದಾ  ಅವರು ಈ ವಿಡಿಯೋವನ್ನು ಶೇರ್ ಮಾಡಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಚಾಲಕನು ತನ್ನ ಸ್ವಂತ ಪ್ರದೇಶದಲ್ಲಿ ಕೃಷ್ಣ ಮೃಗವನ್ನು ಬೆನ್ನಟ್ಟುತ್ತಿರುವ ಹುಚ್ಚನಾಗಿರಬೇಕು. ವನ್ಯಪ್ರಾಣಿಗಳನ್ನು ಓಡಿಸುವುದು, ಬೇಟೆಯಾಡುವುದು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಚಾಲಕನ ವಿವರ ಯಾರಿಗಾದರೂ ತಿಳಿದಿದೆಯೇ? ಎಂದು ಸುಶಾಂತ್ ಪ್ರಶ್ನಿಸಿ @MilindPariwakam ಅವರಿಗೆ ಟ್ಯಾಗ್ ಮಾಡಿದ್ದಾರೆ. 

ಅವ್ಯಾಹತವಾಗಿ ನಡೆಯುತ್ತಿದೆ ಕೃಷ್ಣಮೃಗ ಬೇಟೆ :ಹಾಡಹಗಲೇ ಕೃತ್ಯ

ಕ್ಲಿಪ್ ಅನ್ನು ಆರಂಭದಲ್ಲಿ ಇಂಟರ್‌ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಸದಸ್ಯ ಮಿಲಿಂದ್ ಪರಿವಾಕಮ್ (Milind Pariwakam) ಅವರು ಪೋಸ್ಟ್ ಮಾಡಿದ್ದರು. ಮನುಷ್ಯರು ಮತ್ತು ವನ್ಯಜೀವಿಗಳಿಗೆ ಅಸುರಕ್ಷಿತವಾಗಿರುವ ರಸ್ತೆ ನಿರ್ಮಾಣದ ಇನ್ನೊಂದು ನಿದರ್ಶನವಿದು. ಜೊತೆಗೆ ಈ ವೀಡಿಯೋ ತೆಗೆದ ವ್ಯಕ್ತಿ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಅಡಿಯಲ್ಲಿ ಬೇಟೆಯಾಡುವ ಅಪರಾಧದಲ್ಲಿ ತಪ್ಪಿತಸ್ಥನಾಗಿದ್ದಾನೆ. ಅವನು ಕೃಷ್ಣಮೃಗಗಳನ್ನು ಬೆನ್ನಟ್ಟಬಾರದಿತ್ತು ಎಂದು ಪರಿವಾಕಂ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಬಳಕೆದಾರರು ಈ ರಸ್ತೆಯನ್ನು ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗ್ ಎಂದು ಗುರುತಿಸಿದ್ದಾರೆ. ಅನೇಕ ಬಳಕೆದಾರರು ಈ ವಿಡಿಯೋ ಸೆರೆಹಿಡಿದವರನ್ನು ಟೀಕಿಸಿದ್ದಾರೆ ಮತ್ತು ಕೃಷ್ಣಮೃಗಗಳನ್ನು ಬೆನ್ನಟ್ಟುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Blackbucks Back in Karnataka : ಆಂಧ್ರಕ್ಕೆ ಗುಳೆ ಹೋಗಿದ್ದ ಕೃಷ್ಣ ಮೃಗಗಳು ಮರಳಿ ತವರಿಗೆ

ಚಾಲಕನಿಗೆ ಖಂಡಿತ ಶಿಕ್ಷೆಯಾಗಬೇಕು. ಕೃಷ್ಣಮೃಗ ಗಾಬರಿಯಿಂದ ಓಡುತ್ತಿರುವ ರೀತಿ, ಅದೂ ರಸ್ತೆಯ ಗಟ್ಟಿಯಾದ ಮೇಲ್ಮೈಯಲ್ಲಿ ಓಡುವಾಗ ಏನಾದರು ಸಂಭವಿಸಿದರೆ ಅವುಗಳಿಗೆ ತುಂಬಾ ಕೆಟ್ಟದಾಗಿ ಗಾಯಗಳಾಗುವುದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಹುಚ್ಚುತನ ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಬಂಧಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯಿದೆ, 1972, (Wildlife Protection Act 1972) ಕೃಷ್ಣಮೃಗಗಳಿಗೆ ಹುಲಿಗಳಿಗೆ ನೀಡುವಷ್ಟೇ ರಕ್ಷಣೆ ನೀಡುತ್ತದೆ. ಆದಾಗ್ಯೂ, ಅವುಗಳ ಜನಸಂಖ್ಯೆಯು ಹೆಚ್ಚಾದಂತೆ, 1990 ರ ದಶಕದಲ್ಲಿ ಅವರ ಸ್ಥಾನಮಾನ ಬದಲಾಯಿತು. 2003 ರಲ್ಲಿ ಬಹುತೇಕ ಬೆದರಿಕೆಯುಳ್ಳ ವನ್ಯಜೀವಿಗಳು ಎಂದು ಬದಲಾಯಿಸಲಾಯಿತು. ಒಂದು ದಶಕದ ನಂತರ, ಅವರ ಜನಸಂಖ್ಯೆಯು ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಹಲವಾರು ಪ್ರದೇಶಗಳಲ್ಲಿ ಪ್ರಮುಖ ಏರಿಕೆಗೆ ಸಾಕ್ಷಿಯಾಯಿತು. ಹೀಗಾಗಿ 2017 ರಲ್ಲಿ, IUCN ಕೃಷ್ಣಮೃಗಗಳನ್ನು'ಕಡಿಮೆ ಕಾಳಜಿ'ಯ ವರ್ಗದ ಅಡಿಯಲ್ಲಿ ಪಟ್ಟಿ ಮಾಡಿದೆ.
 

Follow Us:
Download App:
  • android
  • ios