Asianet Suvarna News Asianet Suvarna News

ಸೋಂಕಿತರ ತುರ್ತು ಚಿಕಿತ್ಸೆಗೆ DRDO ಅಭಿವೃದ್ಧಿಪಡಿಸಿದ 2DG ಔಷಧಿ ಬಳಕೆಗೆ ಮಾರ್ಗಸೂಚಿ ಪ್ರಕಟ!

  • ಸೋಂಕಿತರ ಚಿಕಿತ್ಸೆಗೆ 2DG ಔಷಧಿ ಬಳಕೆಗೆ ಮಾರ್ಗಸೂಚಿ
  • 2DG ಔಷಧಿ ಯಾರಿಗೆ ನೀಡಬೇಕು ಮಹತ್ವದ ಸೂಚನೆ ನೀಡಿದ DRDO
  • ಕೊರೋನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ
     
DRDO issues directions for emergency use of 2DG coronavirus drug ckm
Author
Bengaluru, First Published Jun 1, 2021, 8:21 PM IST

ನವದೆಹಲಿ(ಜೂ.01): ಕೊರೋನಾ ಸೋಂಕಿತರ ಚಿಕಿತ್ಸೆ ಭಾರತೀಯ ರಕ್ಷಣಾ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಅಭಿವೃದ್ಧಿ ಪಡಿಸಿದ 2-ಡಿಯೋಕ್ಸಿ-ಡಿ-ಗ್ಲುಕೋಸ್ ಅಥವಾ 2DG ದೇಶಿಯ ಔಷಧ ಬಳಕೆಗೆ ಅನುಮತಿ ನೀಡಲಾಗಿದೆ. ಜೊತೆಗೆ  2DG ಔಷಧಿ ಬಳಕೆಗೆ ಮಾರ್ಗಸೂಚಿಯನ್ನು DRDO ಬಿಡುಗಡೆ ಮಾಡಿದೆ.

ಕೊರೋನಾ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿ: ಡಿಆರ್‌ಡಿಒ ಔಷಧಕ್ಕೆ 990 ರು.

2DG ಔಷಧಿ ವೈದ್ಯರ ಸೂಚನೆ ಹಾಗೂ ಆರೈಕೆಯಲ್ಲಿ ನೀಡಬೇಕು. ಕೋವಿಡ್‌‌ನಿಂದ ತೀವ್ರವಾಗಿ ಬಳಲುತ್ತಿರುವ ಸೋಂಕಿತರಿಗೆ ಗರಿಷ್ಠ 10 ದಿನಗಳ ವರೆಗೆ ನೀಡಬೇಕು ಎಂದು ಡಿಆರ್‌ಡಿಓ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ. ಆದರೆ ಮಧುಮೇಹ, ತೀವ್ರ ಹೃದಯ ಸಮಸ್ಯೆ, ಉಸಿರಾಟದ ಸಮಸ್ಯೆ ಸಿಂಡ್ರೋಮ್(ARDS), ಯಕೃತ್ತಿನ ಮತ್ತು ಮೂತ್ರಪಿಂಡದ ಸಮಸ್ಯೆಗಳ ರೋಗಿಗಳಲ್ಲಿ 2DG ಔಷಧಿ ಅಧ್ಯಯನ ಮಾಡಿಲ್ಲ. ಹೀಗಾಗಿ ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಡಿಆರ್‌ಡಿಓ ಹೇಳಿದೆ.

ಗರ್ಭಿಣಿ , ಹಾಲುಣಿಸುವ ಮಹಿಳೆಯರಿಗೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಿಗೆ 2-ಡಿಜಿ ನೀಡಬಾರದು ಎಂದು DRDO ಹೇಳಿದೆ. ಈ ಕುರಿತು DRDO ಮಾಹಿತಿಯನ್ನು ಟ್ವೀಟ್ ಮೂಲಕ ಹೇಳಿದೆ. 

 

ಕೋವಿಡ್‌ಗೆ ಪರಿಣಾಮಕಾರಿ 2 DG ಔಷಧ ರಿಲೀಸ್

ಹೈದರಾಬಾದ್ ಮೂಲದ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ DRDO ಈ ಔಷಧಿ ಅಭಿವೃದ್ಧಿಪಡಿಸಿದೆ. ಇನ್ನು ಈ ಔಷಧಿಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಮೇ 8 ರಂದು ಸಹಾಯಕ ಚಿಕಿತ್ಸೆಯಾಗಿ ಅಂಗೀಕರಿಸಿದೆ.  ಕೋವಿಡ್ ಚಿಕಿತ್ಸೆಗೆ ಬಳಸುವ ಪರಿಣಾಮಕಾರಿ ಔಷಧಿ ಎಂದು ಮೇ 18 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು. ಇದನ್ನು ತಜ್ಞರು  ಸವಾಲಿನ ಕಾಲದಲ್ಲಿ ಹೊಸ ಭರವಸೆಯ ಕಿರಣ ಎಂದು ವಿಶ್ಲೇಷಿಸಿದ್ದರು.

2DG ಔಷಧಿ ಪುಡಿ ರೂಪದಲ್ಲಿ ಲಭ್ಯವಿದೆ. ಸ್ಯಾಚೆಟ್‌ನಿಂದ ತೆಗೆದು ನೀರಿನಲ್ಲಿ ಕರಗಿಸಬೇಕು ಈ ಔಷಧವು ವೈರಸ್ ಸೋಂಕಿತ ಕೋಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೋವಿಡ್ -19 ಔಷಧವು ರೋಗಿಯ ಸರಾಸರಿ ಚೇತರಿಕೆಯ ಸಮಯವನ್ನು ಎರಡೂವರೆ ದಿನಗಳು ಮತ್ತು ಆಮ್ಲಜನಕದ ಬೇಡಿಕೆಯನ್ನು ಶೇಕಡಾ 40 ರಷ್ಟು ಕಡಿಮೆ ಮಾಡುತ್ತದೆ ಎಂದು ವರದಿಯಾಗಿದೆ.

Follow Us:
Download App:
  • android
  • ios