ಬೆಂಗಳೂರು(ಮೇ.29): ಡಾ.ರೆಡ್ಡೀಸ್‌ ಲ್ಯಾಬ್‌ ಮತ್ತು ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿ ಎನ್ನಲಾದ 2-ಡಿಜಿ ಔಷಧದ ಪ್ರತಿ ಸ್ಯಾಚೆಗೆ 990 ರು. ದರ ನಿಗದಿಪಡಿಸಲಾಗಿದೆ.  ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಈ ಮಾಹಿತಿಯನ್ನು ಟ್ವೀಟ್‌ ಮಾಡಿದ್ದಾರೆ.

2 ಡಿಯೋಕ್ಸಿ-ಡಿ-ಗ್ಲುಕೋಸ್‌ ಅಥವಾ 2-ಡಿಜಿ ಎಂದು ಕರೆಯಲಾಗುವ ಈ ಔಷಧ ಪೌಡರ್‌ ರೂಪದಲ್ಲಿ ಲಭ್ಯವಿದೆ. ನೀರಿನಲ್ಲಿ ಬೆರೆಸಿ ತೆಗೆದುಕೊಳ್ಳಬಹುದಾಗಿದೆ. ಈ ಔಷಧವನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಗದಿತ ದರದಲ್ಲಿ ಇನ್ನಷ್ಟೇ ಪೂರೈಸಬೇಕಾಗಿದೆ. 2 ಮತ್ತು 3ನೇ ಕ್ಲಿನಿಕಲ್‌ ಪ್ರಯೋಗದಲ್ಲಿ ಯಶಸ್ವಿಯಾದ ಬಳಿಕ ಈ ಔಷಧದ ತುರ್ತು ಬಳಕೆಗೆ ದೇಶದ ಪ್ರಮುಖ ಔಷಧ ನಿಯಂತ್ರಕ ಸಂಸ್ಥೆ ಡ್ರಗ್ಸ್‌ ಕಂಟ್ರೋಲರ್‌ ಜನರಲ್‌ ಆಫ್‌ ಇಂಡಿಯಾ(ಡಿಸಿಜಿಐ) ಅನುಮೋದನೆ ನೀಡಿತ್ತು.

ಡಿಆರ್‌ಡಿಒನಿಂದ ಕೋವಿಡ್‌ ಪ್ರತಿಕಾಯ ಪತ್ತೆ ಕಿಟ್‌!

2-ಡಿಜಿ’ ಕೋವಿಡ್‌ ಚಿಕಿತ್ಸೆಗೆಂದೇ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ ಜಗತ್ತಿನ ಕೆಲವೇ ಔಷಧಗಳಲ್ಲಿ ಒಂದು. ಆದರೆ, ಇದರಿಂದ ಕೋವಿಡ್‌ ಗುಣಮುಖವಾಗುವುದು ಖಚಿತವಾಗಿಲ್ಲ. ರೆಮ್‌ಡೆಸಿವಿರ್‌, ಐವರ್ಮೆಕ್ಟಿನ್‌, ಪ್ಲಾಸ್ಮಾ ಥೆರಪಿ, ಕೆಲವು ಸ್ಟಿರಾಯ್ಡ್‌ಗಳನ್ನು ಕೋವಿಡ್‌ ಚಿಕಿತ್ಸೆಗೆ ಪ್ರಯೋಗಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona