ಸೂಡಾನ್‌ನಲ್ಲಿ ಸಿಲುಕಿರುವ ಹಕ್ಕಿ ಪಿಕ್ಕಿ ಸಮುದಾಯದ ಕನ್ನಡಿಗರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದ ಕಾಂಗ್ರೆಸ್ ನಾಯಕ ಸಿದ್ದರಾಯ್ಯಗೆ, ವಿದೇಶಾಂಗ ಸಚಿವ ಜೈಶಂಕರ್ ತಿರುಗೇಟು ನೀಡಿದ್ದಾರೆ. ನಿಮ್ಮ ಕೀಳು ರಾಜಕೀಯ ತರಬೇಡಿ ಎಂದಿದ್ದಾರೆ. 

ನವದೆಹಲಿ(ಏ.18): ಜೀವಗಳು ಅಪಾಯದಲ್ಲಿದೆ. ಇದರ ನಡುವೆ ರಾಜಕೀಯ ಮಾಡಬೇಡಿ ಎಂದು ವಿದೇಶಾಂಗ ಸಚಿವ ಜೈಶಂಕರ್ ಖಡಕ್ ತಿರುಗೇಟು ನೀಡಿದ್ದಾರೆ. ಈ ಮಾತುಗಳನ್ನು ಜೈಶಂಕರ್ ನೇರವಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಹೇಳಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಸುಡಾನ್ ದೇಶದಲ್ಲಿನ ಹಿಂಸಾಚಾರಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಈ ಸಂಘರ್ಷದ ನಡುವೆ ಕರ್ನಾಟಕ ಹಕ್ಕಿ ಪಿಕ್ಕಿ ಬುಡಕಟ್ಟು ಸಮುದಾಯದ 30ಕ್ಕೂ ಹೆಚ್ಚು ಮಂದಿ ಆತಂಕದಲ್ಲಿ ಸಿಲುಕಿದ್ದಾರೆ. ಇವರ ರಕ್ಷಣೆಗೆ ವಿದೇಶಾಂಗ ಸಚಿವಾಲಯ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಜೈಶಂಕರ್ ತಕ್ಕ ತಿರುಗೇಟು ನೀಡಿದ್ದಾರೆ.

ನಿಮ್ಮ ಟ್ವೀಟ್ ನೋಡಿ ಆಘಾತವಾಯಿತು. ಸುಡಾನ್‌ನಲ್ಲಿ ಹಲವು ಜೀವಗಳು ಅಪಾಯದಲ್ಲಿದೆ. ಆದರೆ ಇಲ್ಲಿ ರಾಜಕೀಯ ಮಾಡಬೇಡಿ. ಏಪ್ರಿಲ್ 14 ರಂದು ಸೂಡನ್‌ನಲ್ಲಿ ಸಂಘರ್ಷ ಆರಂಭವಾದಗಿನಿಂದಲೂ ಭಾರತದ ರಾಯಭಾರ ಕಚೇರಿ ಸೂಡಾನ್‌ನಲ್ಲಿರುವ ಬಹುತೇಕ ಭಾರತೀಯ ಪ್ರಜೆಗಳ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ಜೈಶಂಕರ್ ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

Scroll to load tweet…

ಹಿಂಸಾಪೀಡಿತ ಸುಡಾನ್‌ನಲ್ಲಿ 31 ಜನ ಕನ್ನಡಿಗ ಹಕ್ಕಿಪಿಕ್ಕಿಗಳು ಅತಂತ್ರ

30ಕ್ಕೂ ಹೆಚ್ಚು ಕನ್ನಡಿಗರ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವಾಲಯ, ಕೇಂದ್ರ ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸಿ ಸೂಕ್ತ ರಕ್ಷಣೆ ನೀಡಬೇಕು ಎಂದು ಸಿದ್ದರಾಮಯ್ಯನವರ ಟ್ವೀಟ್‌ನಲ್ಲಿ ತಪ್ಪೇನಿದೆ? ಎಂದು ಪ್ರಶ್ನೆ ಮೂಡುವುದು ಸಹಜ. ಆದರೆ ಕಳೆದ ಕೆಲ ದಿನಗಳಿಂದ ಸೂಡನ್‌ನಲ್ಲಿ ರಕ್ಷಣಾ ಪಡೆಗಳ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷ ನಡೆಯುತ್ತಿದೆ. ಸಂಘರ್ಷ ಆರಂಭವಾದಾಗಿನಿಂದ ಭಾರತೀಯ ವಿದೇಶಾಂಗ ಇಲಾಖೆ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿದೆ. ಇಷ್ಟೇ ಅಲ್ಲ ಸೂಡಾನ್ ದೇಶದ ಅಧಿಕಾರಿಗಳ ಜೊತೆಗೂ ನಿರಂತರ ಸಂಪರ್ಕದಲ್ಲಿದೆ.

ಭಾರತೀಯರ ಸುರಕ್ಷತೆಗೆ ಎಲ್ಲಾ ವ್ಯವಸ್ಥೆಯನ್ನೂ ಮಾಡಿದೆ. ಏಪ್ರಿಲ್ 14 ರಂದೇ ಭಾರತೀಯ ನಾಗರೀಕರಿಗೆ ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಎಲ್ಲಾ ಸೌಲಭ್ಯ ಒದಗಿಸುವುದಾಗಿ ಹೇಳಿದೆ. ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕೆಲಸಗಳು ನಡೆಯುತ್ತಿದೆ. ಈ ಕಾರ್ಯಗಳು ಕಳೆದ ಕೆಲದನಗಳಿಂದ ಸತತವಾಗಿ ನಡೆಯುತ್ತಿದೆ. ಭಾರತ ಸರ್ಕಾರದ ಎಲ್ಲಾ ಪ್ರಯತ್ನಗಳ ಬಳಿಕ ಸಿದ್ದರಾಮಯ್ಯ ರಕ್ಷಣೆಗೆ ಧಾವಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಜೈಶಂಕರ್ ಆಕ್ರೋಶಕ್ಕೆ ಕಾರಣವಾಗಿದೆ.

ಸೂಡಾನ್‌ ಹಿಂಸಾಚಾರಕ್ಕೆ ಭಾರತೀಯ ಸೇರಿ 56 ನಾಗರಿಕರು ಬಲಿ

ಸೂಡಾನ್‌ನ ರಕ್ಷಣಾ ಪಡೆಗಳ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಾಗರೀಕರ ಸಾವಿನ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ರಾಜಧಾನಿ ಖಾರ್ತೋಮ್‌ ಮತ್ತು ಓಮ್‌ದುರಮ್‌ ಕೆಲ ಭಾಗಗಳಲ್ಲಿ ಸೋಮವಾರ ವೈಮಾನಿಕ ಮತ್ತು ಗುಂಡಿನ ದಾಳಿ ತೀವ್ರಗೊಂಡಿತ್ತು. ಸೇನಾ ಕಚೇರಿಗಳ ಬಳಿ ಗುಂಡಿನ ಚಕಮಕಿ ಜೋರಾಗಿದ್ದು, ಸುತ್ತಮುತ್ತಲಿನ ಪ್ರದೇಶ ದಟ್ಟಹೊಗೆಯಿಂದ ಆವೃತವಾಗಿದೆ. ಸ್ಥಳೀಯ ನಿವಾಸಿಗಳು ಮನೆಯೊಳಗೆ ಬಂಧಿಗಳಾಗಿದ್ದು, ಮನೆ ಲೂಟಿ ಪ್ರಕರಣಗಳು ಹೆಚ್ಚಾಗುತ್ತಿದೆ. ಇನ್ನು ಉಭಯ ಸೇನೆಯಲ್ಲೂ ಭಾರೀ ಪ್ರಮಾಣದ ಸಾವು-ನೋವಿನ ಶಂಕೆ ವ್ಯಕ್ತವಾಗಿದೆ.