ಸೂಡಾನ್ ಹಿಂಸಾಚಾರಕ್ಕೆ ಭಾರತೀಯ ಸೇರಿ 56 ನಾಗರಿಕರು ಬಲಿ
ಸೂಡಾನ್‌ನಲ್ಲಿ ಸೇನೆ ಮತ್ತು ಅರೆ ಸೇನಾ ಪಡೆ ನಡುವೆ ಶನಿವಾರ ಆರಂಭವಾಗಿದ್ದ ಭೀಕರ ಕದನ, ಭಾನುವಾರವೂ ಮುಂದುವರೆದಿದ್ದು ಈ ಕದನದಲ್ಲಿ ಓರ್ವ ಭಾರತೀಯ ಸೇರಿ ಕನಿಷ್ಠ 56 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ
ಖಾರ್ತೋಮ್: ಸೂಡಾನ್‌ನಲ್ಲಿ ಸೇನೆ ಮತ್ತು ಅರೆ ಸೇನಾ ಪಡೆ ನಡುವೆ ಶನಿವಾರ ಆರಂಭವಾಗಿದ್ದ ಭೀಕರ ಕದನ, ಭಾನುವಾರವೂ ಮುಂದುವರೆದಿದ್ದು ಈ ಕದನದಲ್ಲಿ ಓರ್ವ ಭಾರತೀಯ ಸೇರಿ ಕನಿಷ್ಠ 56 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇನ್ನು ಎರಡು ದಿನಗಳಿಂದ ನಡೆಯುತ್ತಿರುವ ಕಾಳಗದಲ್ಲಿ ಉಭಯ ಸೇನೆಗಳಲ್ಲೂ ಭಾರೀ ಪ್ರಮಾಣದ ಸಾವು-ನೋವು ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಆದರೆ ಉಭಯ ಬಣಗಳು ಈ ಕುರಿತ ಮಾಹಿತಿ ಹಂಚಿಕೊಂಡಿಲ್ಲ.
ರಾಜಧಾನಿ ಖಾರ್ತೋಮ್‌ನಲ್ಲಿ (Khartoum) ಆಕಸ್ಮಿಕವಾಗಿ ಹಾರಿಬಂದ ಗುಂಡು ತಗುಲಿ ಆಲ್ಬರ್ಟ್ ಅಗಾಸ್ಟೀನ್ ಎಂಬ ಭಾರತೀಯ ಉದ್ಯೋಗಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬದ ಜೊತೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ. ಸದ್ಯ ಸೂಡಾನ್‌ನಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಇಲ್ಲಿನ ಭಾರತೀಯ ದೂತಾವಾತ ಕಚೇರಿ (Indian Embassy) ಕಳವಳ ವ್ಯಕ್ತಪಡಿಸಿದೆ. ಸೂಡಾನ್‌ನ (Sudan) ವಿವಿಧ ಭಾಗಗಳಲ್ಲಿ ಕನಿಷ್ಠ 4000 ಭಾರತೀಯರು ವಾಸ ಮಾಡುತ್ತಿರುವ ಅಂದಾಜಿದೆ.
ಸೂಡಾನ್ ಅಧ್ಯಕ್ಷರ ಪ್ಯಾಂಟ್ ಒದ್ದೆ, ಮೂತ್ರಮಾಡಿದ ವಿಡಿಯೋ ಹರಿಬಿಟ್ಟ 6 ಪತ್ರಕರ್ತರು ಅರೆಸ್ಟ್!
ಪ್ರಜಾಪ್ರಭುತ್ವ ಸರ್ಕಾರಕ್ಕೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ, ಸೇನೆಯಲ್ಲಿ ಅರೆ ಸೇನಾ ಪಡೆ ವಿಲೀನ ಮೊದಲಾದ ವಿಷಯಗಳಲ್ಲಿ ಭಿನ್ನಮತ ಉಂಟಾದ ಕಾರಣ ಇದೀಗ ಸೇನೆ ಮತ್ತು ಅರೆಸೇನಾ ನಡುವೆ ಕದನ ಆರಂಭವಾಗಿದೆ. ಪರಿಣಾಮ ಶಾಂತಿಯುತ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿದೆ.
ಶಾಂತಿಗಾಗಿ ರಾಜಕೀಯ ನಾಯಕರ ಕಾಲಿಗೆ ಮುತ್ತಿಟ್ಟ ಪೋಪ್ ಫ್ರಾನ್ಸಿಸ್