Asianet Suvarna News Asianet Suvarna News

ಏಕನಾಥ್ ಶಿಂಧೆ ಬಣದ ಅರ್ಜಿಯನ್ನು ಈಗಲೇ ನಿರ್ಧರಿಸಬೇಡಿ ಎಂದ ಸುಪ್ರೀಂಕೋರ್ಟ್‌: ಉದ್ಧವ್‌ ಠಾಕ್ರೆ ಬಣಕ್ಕೆ ರಿಲೀಫ್‌..!

ಶಿವಸೇನೆ ಪಕ್ಷ ಯಾರಿಗೆ ಸೇರಿದ್ದು ಎಂಬ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಏಕನಾಥ್‌ ಶಿಂಧೆ ಅವರು ನೀಡಿರುವ ಅರ್ಜಿಯನ್ನು ಈಗಲೇ ಪರಿಗಣಿಸಬೇಡಿ ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ. 

dont decide on eknath shinde camps claim now says supreme court to election commission ash
Author
Bangalore, First Published Aug 4, 2022, 2:12 PM IST

ಮಹಾರಾಷ್ಟ್ರ ರಾಜಕೀಯದಲ್ಲಿ ಸದ್ಯ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಶಿವಸೇನೆ ನಡುವಿನ ಗುದ್ದಾಟ. ಏಕನಾಥ್ ಶಿಂದೆ ಮತ್ತು ಉದ್ಧವ್ ಠಾಕ್ರೆ ನಡುವೆ ಪಕ್ಷದ ಹಿಡಿತಕ್ಕಾಗಿ ಗುದ್ದಾಟ ಮುಂದುವರಿದಿದ್ದು, ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಸಹ ವಿಚಾರಣೆ ನಡೆಯುತ್ತಿದೆ. ಇನ್ನು, ಸುಪ್ರೀಂಕೋರ್ಟ್‌ ವಿಚಾರಣೆ ವೇಳೆ ಏಕನಾಥ್ ಶಿಂಧೆ ಬಣದ ಅರ್ಜಿ ಪರಿಗಣಿಸಿ ಶಿವಸೇನೆ ಪಕ್ಷದ ಅಧಿಕಾರ ಕುರಿತು ನಿರ್ಧರಿಸಬೇಡಿ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಸೂಚನೆ ನೀಡಿದ್ದಾರೆ. ಅಲ್ಲದೆ, ವಿಚಾರಣೆಯನ್ನು ಮತ್ತೆ ಆಗಸ್ಟ್‌ 8 ಕ್ಕೆ ಮುಂದೂಡಿದೆ ದೇಶದ ಅತ್ಯುನ್ನತ ನ್ಯಾಯಾಲಯ. ಉದ್ಧವ್ ಠಾಕ್ರೆ ಬಣ, ಶಿಂಧೆ ಬಣದ ಅರ್ಜಿಗೆ ಉತ್ತರಿಸಲು ಸಮಯವಕಾಶ ಕೋರಿದೆ. ಈ ಹಿನ್ನೆಲೆ ವಿಚಾರಣೆಯನ್ನು ಮುಂದೂಡಿಕೆ ಮಾಡುತ್ತಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌. ವಿ. ರಮಣ ಅವರ ಪೀಠ ತಿಳಿಸಿದೆ. 

ಇನ್ನೊಂದೆಡೆ, ಈ ಪ್ರಕರಣವನ್ನು ಸಂವಿಧಾನದ ಪೀಠಕ್ಕೆ ವರ್ಗಾಯಿಸಬೇಕಾ ಬೇಡವೆಂದು ಆಗಸ್ಟ್ 8 ರಂದು ನಿರ್ಧರಿಸಲಾಗುವುದು ಎಂದೂ ಸರ್ವೋಚ್ಛ ನ್ಯಾಯಾಲಯ ಹೇಳಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಏಕನಾಥ್ ಶಿಂಧೆ ಬಣದ ಹಕ್ಕೊತ್ತಾಯ ಆಲಿಸಲು ಚುನಾವಣಾ ಆಯೋಗ ಆಗಸ್ಟ್ 8ಕ್ಕೆ ನಿಗದಿ ಮಾಡಿತ್ತು. 

ಸರ್ಕಾರದ ಜೊತೆ ಉದ್ಧವ್ ಠಾಕ್ರೆಯ ಪಕ್ಷವನ್ನೂ ವಶಪಡಿಸ್ಕೊಳ್ತಾರಾ ಏಕನಾಥ್ ಶಿಂಧೆ? ಹೀಗಿದೆ ನಿಯಮ

ಏಕನಾಥ್ ಶಿಂಧೆ ಬಣದ ಹಕ್ಕೊತ್ತಾಯ ಆಲಿಸಲು ಚುನಾವಣಾ ಆಯೋಗ ಆಗಸ್ಟ್ 8ಕ್ಕೆ ನಿಗದಿ ಮಾಡಿತ್ತು. ಆದರೆ, ಈ ಸಂಬಂಧ ಇಂದಿನ ವಿಚಾರಣೆಯಲ್ಲಿ ಚುನಾವಣೆ ಆಯೋಗಕ್ಕೆ ಸೂಚನೆ ನೀಡಿದ ಸುಪ್ರೀಂಕೋರ್ಟ್‌ "ಯಾವುದೇ ಪ್ರಚೋದಕ ಕ್ರಮವನ್ನು ತೆಗೆದುಕೊಳ್ಳಬೇಡಿ. ನಾವು ಯಾವುದೇ ಆದೇಶವನ್ನು ನೀಡುತ್ತಿಲ್ಲ. ಆದರೆ ಅದೇ ಸಮಯದಲ್ಲಿ, ಯಾವುದೇ ಪೂರ್ವಭಾವಿ ಕ್ರಮವನ್ನು ತೆಗೆದುಕೊಳ್ಳಬೇಡಿ" ಎಂದು ಸಿಜೆಐ ಎನ್‌.ವಿ. ರಮಣ ಹೇಳಿದ್ದಾರೆ.

ಇನ್ನೊಂದೆಡೆ, ವಿಚಾರಣೆ ವೇಳೆ  ಉದ್ಧವ್ ಬಣದ ಪರವಾಗಿ ಹಾಜರಾದ ಕಪಿಲ್ ಸಿಬಲ್, ‘’ಶಿಂಧೆ ಬಣದ ಶಾಸಕರು ಇನ್ನು ಮುಂದೆ ಪಕ್ಷದ ಸದಸ್ಯರಲ್ಲ’’ ಎಂದು ಹೇಳಿದರೆ,  ಶಿಂಧೆ ಬಣದ ಹರೀಶ್ ಸಾಳ್ವೆ ಅವರು ‘’ಈ ಶಾಸಕರು ಪಕ್ಷವನ್ನು ತೊರೆದಿದ್ದಾರೆ ಎಂದು ತೋರಿಸಲು ಯಾವುದೇ ದಾಖಲೆ ಇಲ್ಲ’’ ಎಂದು ಎರಡೂ ಕಡೆಯ ವಕೀಲರು ಹೇಳಿದ್ದಾರೆ. ಈ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿಗಳು,  "ಎರಡು ಗುಂಪುಗಳಿವೆ ಎಂದು ಭಾವಿಸೋಣ, ಅವರೇ ನಿಜವಾದ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತಾರೆ. ಅವರು ತಮ್ಮನ್ನು ತಾವು ರಾಜಕೀಯ ಪಕ್ಷವೆಂದು ಗುರುತಿಸಿಕೊಳ್ಳಬಾರದೇ’’ ಎಂದು ಪ್ರಶ್ನಿದ್ದಾರೆ.

ಇದಕ್ಕೆ ಉತ್ತರ ನೀಡಿದ ಉದ್ಧವ್‌ ಠಾಖ್ರೆ ಬಣದ ವಕೀಲ ಕಪಿಲ್‌ ಸಿಬಲ್‌ "ಅವರು 50 ಶಾಸಕರ ಪೈಕಿ 40 ಶಾಸಕರ ಬೆಂಬಲವನ್ನು ಹೊಂದಿದ್ದಾರೆಂದು ಅವರು ಹೇಳುತ್ತಿದ್ದು, ಈ ಹಿನ್ನೆಲೆ ನಾವು ರಾಜಕೀಯ ಪಕ್ಷವೆನ್ನುವುದು ಅವರ ವಾದ. 40 ಶಾಸಕರನ್ನು ಅನರ್ಹಗೊಳಿಸಿದರೆ, ಅವರ ಹೇಳಿಕೆಗೆ ಆಧಾರವೇನು..?’’ ಎಂದಿದ್ದಾರೆ. ಅಲ್ಲದೆ, "40 ಶಾಸಕರು ಅಥವಾ ಯಾವುದೇ ಶಾಸಕಾಂಗ ಪಕ್ಷ ತಾವು ರಾಜಕೀಯ ಪಕ್ಷ ಎಂದು ಹೇಳಬಹುದೇ? ಅವರು ಶಾಸಕಾಂಗ ಪಕ್ಷವನ್ನು ರಾಜಕೀಯ ಪಕ್ಷದೊಂದಿಗೆ ಬೆರೆಸುತ್ತಿದ್ದಾರೆಯೇ..?’’ ಎಂದೂ ಸಿಬಲ್‌ ವಿಚಾರಣೆ ವೇಳೆ ತಿಳಿಸಿದ್ದಾರೆ. 

ಭೂ ಹಗರಣ ಕೇಸ್‌: ಶಿವಸೇನಾ ನಾಯಕ ಸಂಜಯ್‌ ರಾವುತ್‌ ವಶಕ್ಕೆ ಪಡೆದ ಇಡಿ ಅಧಿಕಾರಿಗಳು

ಚುನಾವಣಾ ಆಯೋಗ ಹೇಳಿದ್ದೇನು..?
ಸುಪ್ರೀಂಕೋರ್ಟ್‌ನ ಈ ವಿಚಾರಣೆಯಲ್ಲಿ ಭಾಗಿಯಾಗಿದ್ದ ಚುನಾವಣಾ ಆಯೋಗವು, ‘’ಗುಂಪೊಂದು ನಾವೇ ರಾಜಕೀಯ ಪಕ್ಷ ಎಂದು ಹೇಳಿಕೊಂಡರೆ ಅದನ್ನು ನಿರ್ಧರಿಸಲು ಚುನಾವಣಾ ಆಯೋಗ ಬದ್ಧವಾಗಿದೆ ಎಂದಿದ್ದಾರೆ. ಹಾಗೂ, ಆ ಶಾಸಕರನ್ನು ಅನರ್ಹಗೊಳಿಸಿದರೆ, ಅವರು ಇನ್ನು ಮುಂದೆ ವಿಧಾನಸಭೆಯ ಸದಸ್ಯರಲ್ಲವೇ ಹೊರತು ಅವರು ಹೇಳಿಕೊಳ್ಳುತ್ತಿರುವ ರಾಜಕೀಯ ಪಕ್ಷದ ಸದಸ್ಯತ್ವ ಸ್ಥಾನ ಹೋಗುವುದಿಲ್ಲ. ವಿಧಾನಸಭೆಯಲ್ಲಿ ಏನೇ ನಡೆದರೂ ಅದು ರಾಜಕೀಯ ಪಕ್ಷದ ಸದಸ್ಯತ್ವಕ್ಕಿಂತ ಸಂಪೂರ್ಣ ಭಿನ್ನವಾಗಿರುತ್ತದೆ ಎಂದೂ ಕೇಂದ್ರ ಚುನಾವಣಾ ಆಯೋಗ ಹೇಳಿದೆ. 

Follow Us:
Download App:
  • android
  • ios