Asianet Suvarna News Asianet Suvarna News

ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದ ಯುವಕ

ಸಾಮಾನ್ಯವಾಗಿ ಕಚ್ಚಿದ ಹಾವು ಯಾವುದು ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಅದಕ್ಕೆ ತಕ್ಕಂತೆ ವೈದ್ಯರು ಹಾವು ಕಚ್ಚಿದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಾರೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವಿಚಿತ್ರ ಘಟನೆ ಉತ್ತರಪ್ರದೇಶದ ಮೌ ಜಿಲ್ಲೆಯಲ್ಲಿ ನಡೆದಿದೆ.

Doctor Shocks after Man came to hospital with snake which bite him at Uttar pradesh akb
Author
First Published Nov 15, 2022, 5:08 PM IST

ಸಾಮಾನ್ಯವಾಗಿ ಕಚ್ಚಿದ ಹಾವು ಯಾವುದು ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಅದಕ್ಕೆ ತಕ್ಕಂತೆ ವೈದ್ಯರು ಹಾವು ಕಚ್ಚಿದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಾರೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವಿಚಿತ್ರ ಘಟನೆ ಉತ್ತರಪ್ರದೇಶದ ಮೌ ಜಿಲ್ಲೆಯಲ್ಲಿ ನಡೆದಿದೆ. ಯುವಕನೋರ್ವ ಮೀನು ಹಿಡಿಯಲು ಹೋದ ವೇಳೆ ಆತನ ಬಲೆಯಲ್ಲಿ ಮೀನಿನ ಬದಲು ಹಾವು ಬಂದಿದ್ದು, ಇದು ಆತನಿಗೆ ಕಚ್ಚಿದೆ. ಆದರೆ ಹಾವು ಯಾವುದು ಎಂಬುದನ್ನು ತಿಳಿಯಲು ಯುವಕ ಪ್ರಯತ್ನಿಸಿದ್ದು, ಆದರೆ ಅದರ ಗುರುತು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಯುವಕ ಹಾವನ್ನು ಕೊಂದು ಅದನ್ನು ಚೀಲದಲ್ಲಿ ತುಂಬಿಸಿ ಆಸ್ಪತ್ರೆಗೆ ಕರೆತಂದಿದ್ದಾನೆ. 

ಆಸ್ಪತ್ರೆಯಲ್ಲಿ ಈತನ ನಿರೀಕ್ಷೆಯಂತೆ ವೈದ್ಯರು (Doctors) ಆತನಲ್ಲಿ ನಿನಗೆ ಕಚ್ಚಿದ ಹಾವು ಯಾವುದು ಎಂದು ಕೇಳಿದ್ದಾರೆ. ಈ ವೇಳೆ ಆತ ಚೀಲದಿಂದ ಹಾವನ್ನು ತೆಗೆದು ತೋರಿಸಿದ್ದು, ಇದರಿಂದ ವೈದ್ಯರೇ ಕ್ಷಣಕಾಲ ಬೆಚ್ಚಿದ್ದಾರೆ. ಹೀಗೆ ಆಸ್ಪತ್ರೆಗೆ ಹಾವು ಹಿಡಿದು ತಂದ ಯುವಕನನ್ನು 22 ವರ್ಷದ ಯುವಕನನ್ನು ಧರ್ಮೇಂದ್ರ ಯಾದವ್ (Dharmedra Yadav) ಎಂದು ಗುರುತಿಸಲಾಗಿದೆ. ಈತ ವೈದ್ಯರ ಬಳಿ ತಾನು ಹಾವನ್ನು (snake) ಹಿಡಿದು ತಂದಿದ್ದು, ಅದನ್ನು ಗಮನಿಸಿ ತನಗೆ ಚಿಕಿತ್ಸೆ ನೀಡಿ ಎಂದು ಗೋಣಿಚೀಲದಿಂದ ಹಾವನ್ನು ತೆಗೆದು ತೋರಿಸಿದ್ದಾನೆ. ಈತನ ಮಾತು ಕೇಳಿ ಒಂದು ಕ್ಷಣ ವೈದ್ಯರೇ ದಂಗಾಗಿದ್ದಾರೆ. 

ಮೌ ಜಿಲ್ಲೆಯ ಧರ್ಮಪುರದ (Dharmapura) ವಿಷ್ಣುಪುರದಲ್ಲಿ ಈ ಘಟನೆ ನಡೆದಿದೆ. ಈತ ಮೀನು (Fish) ಹಿಡಿಯುವ ಸಲುವಾಗಿ ಬಲೆ ಬೀಸಿ ಹೋಗಿದ್ದು, ಮರಳಿ ಬಂದು ನೋಡಿದಾಗ ಅದರಲ್ಲಿ ಮೀನಿನ ಬದಲು ಹಾವು ಸಿಲುಕಿಕೊಂಡಿತ್ತು. ಆದರೆ ಇದನ್ನು ಗಮನಿಸದೇ ಆತ ಬಲೆಯೊಳಗೆ ಕೈ ಹಾಕಿದ್ದು, ಈ ವೇಳೆ ಹಾವು ಈತನ ಕೈಗೆ ಕಚ್ಚಿದೆ. ಇದಾದ ಮೇಲೆ ಯುವಕ ಹಾವನ್ನು ಕೊಂದು ಗೋಣಿಚೀಲದಲ್ಲಿ ತುಂಬಿಸಿಕೊಂಡು ಸಮೀಪದ ಸಮುದಾಯ ಆಸ್ಪತ್ರೆಗೆ (Comunity Hospital) ಬಂದಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರು ಯಾವ ಹಾವು ಕಚ್ಚಿದ್ದು ಎಂದು ಕೇಳಿದಾಗ ಗೋಣಿಚೀಲದಿಂದ ಸತ್ತ ಹಾವನ್ನು ಹೊರತೆಗೆದಿದ್ದು, ಇದನ್ನು ನೋಡಿ ಆಸ್ಪತ್ರೆ ಸಿಬ್ಬಂದಿಯೇ ಗಾಬರಿಯಾಗಿದ್ದಾರೆ. ನಂತರ ವೈದ್ಯರು ಆತನನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. 

ಸ್ಕೂಟರ್ ಒಳನುಗ್ಗಿ ಬೆಚ್ಚನೆ ಮಲಗಿದ್ದ ಹಾವಿನ ರಕ್ಷಣೆ

ಮಹಿಳೆಯ ಹೊಟ್ಟೆಯಿಂದ ಹಾವು ಎಳೆದು ತೆಗೆದ ವೈದ್ಯರು

ದಿನಗಳ ಹಿಂದಷ್ಟೇ ಮಹಿಳೆಯ ಹೊಟ್ಟೆಯೊಳಗಿನಿಂದ ವೈದ್ಯರು ಹಾವೊಂದನ್ನು ಹೊರತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.  ಇದು 2020ರಲ್ಲಿ ರಷ್ಯಾದಲ್ಲಿ (Russia) ನಡೆದ ಘಟನೆ ಎನ್ನಲಾಗುತ್ತಿದೆ. ವಿಡಿಯೋದಲ್ಲಿ ಕಾಣಿಸುವಂತೆ ಮಹಿಳೆಯೊಬ್ಬಳನ್ನು ಆಸ್ಪತ್ರೆಯ (Hospital) ಬೆಡ್ ಮೇಲೆ ಅನಸ್ತೇಶಿಯಾ ನೀಡಿ ಮಲಗಿಸಿದ್ದು, ಆಕೆಯ ಬಾಯಿಯ (Mouth) ಮೂಲಕ ಪೈಪೊಂದರ ಮುಖೇನ ಇಕ್ಕಳವೊಂದನ್ನು ಇಳಿಸಿ ಹಾವನ್ನು ಅದರ ಮೂಲಕ ಎಳೆದು ತೆಗೆಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಅಷ್ಟು ಉದ್ದದ ಹಾವನ್ನು ನೋಡಿ ಒಂದು ಕ್ಷಣ ವೈದ್ಯರೇ ಬೆಚ್ಚಿ ಕಿರುಚುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. 11 ಸೆಕೆಂಡ್‌ಗಳ ಈ ವಿಡಿಯೋವನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. @FascinateFlix ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಆಗಿದೆ. ವೈದ್ಯರು ಮಹಿಳೆಯೊಬ್ಬಳ ದೇಹದಿಂದ ಹಾವೊಂದನ್ನು ಹೊರತೆಗೆದರು. ಆಕೆ ನಿದ್ದೆಗೆ ಜಾರಿದ್ದ ವೇಳೆ ಈ ಹಾವು ಆಕೆಯ ದೇಹವನ್ನು ಪ್ರವೇಶಿಸಿತ್ತು ಎಂದು ವಿಡಿಯೋ ಶೇರ್ ಮಾಡಿ ಬರೆದುಕೊಳ್ಳಲಾಗಿದೆ. ಒಂದು ವೇಳೆ ಹಾವು ಬಾಯಿಯ ಮೂಲಕ ಹೊಟ್ಟೆ(Stomach) ಸೇರುವಷ್ಟು ಹೊತ್ತು ಆಕೆ ಏನು ಮಾಡುತ್ತಿದ್ದಳು. ಆಕೆಯೇನು ಕುಂಭಕರ್ಣನ ಸಹೋದರಿಯೇ ಎಂಬ ಪ್ರಶ್ನೆ ಮೂಡದಿರದು.

ಇದೆಂಥಾ ವಿಚಿತ್ರ... 8 ವರ್ಷದ ಬಾಲಕ ಕಚ್ಚಿ ಹಾವು ಸಾವು

ಪುಟ್ಟ ಮಕ್ಕಳು(Childrens), ದೊಡ್ಡವರು, ದನಕರುಗಳು, ಪ್ರಾಣಿಗಳು (Animals) ಹೀಗೆ ಪ್ರತಿಯೊಂದು ಜೀವಿಯ ದೇಹದಲ್ಲೂ (Human Body) ಒಳ್ಳೆಯ ಹಾಗೂ ಕೆಟ್ಟ ಬ್ಯಾಕ್ಟಿರೀಯಾಗಳಿರುತ್ತವೆ. ಹಾಗೆಯೇ ಹೊಟ್ಟೆಯಲ್ಲಿ ಹುಳು ತುಂಬಿದೆ ಎಂದು ದೊಡ್ಡವರು ಪುಟ್ಟ ಮಕ್ಕಳಿಗೆ ಔಷಧಿಯನ್ನು ನೀಡುತ್ತಾರೆ. ಆದರೆ ಇತ್ತೀಚೆಗೆ ನಾವು ಪ್ರತಿನಿತ್ಯ ಸೇವಿಸುವ ವಿಷಾಹಾರದಿಂದಲೇ (Food poison) ನಮ್ಮ ದೇಹದಲ್ಲಿ ಮೊದಲಿನಂತೆ ಜಂತುಹುಳಗಳು (Insects) ಇರುವುದಿಲ್ಲ ಎಂಬುದು ಕೆಲ ವೈದ್ಯರು ಹೇಳುವ ಮಾತು ಹೀಗಿರುವಾಗ ಮಹಿಳೆಯೊಬ್ಬಳ ಅನ್ನನಾಳದಲ್ಲಿ 4 ಅಡಿ ಉದ್ದದ ಹಾವೊಂದು ಪತ್ತೆಯಾಗಿದೆ ಎಂಬ ವಿಚಿತ್ರ ವಿಚಾರ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿರುವುದರ ಜೊತೆ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿದೆ.
 

Follow Us:
Download App:
  • android
  • ios