Asianet Suvarna News Asianet Suvarna News

ವಾಗ್ವಾದ: ಆಸ್ಪತ್ರೆಯಲ್ಲಿ ರೋಗಿಯನ್ನು ಕೋಲಿನಿಂದ ಥಳಿಸಿದ ವೈದ್ಯ

  • ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದ ವ್ಯಕ್ತಿ
  • ವೈದ್ಯರಿಲ್ಲದ್ದಕ್ಕೆ ಆಸ್ಪತ್ರೆಯಲ್ಲಿ ಗಲಾಟೆ
  • ಈ ವೇಳೆ ಬಂದ ವೈದ್ಯನಿಂದ ರೋಗಿಗೆ ಥಳಿತ
Doctor Beats Patient Thrashes Him With a Stick after an Argument in Odisha Hospital akb
Author
Bangalore, First Published Mar 18, 2022, 11:40 AM IST | Last Updated Mar 18, 2022, 11:40 AM IST

ಭುವನೇಶ್ವರ(ಮಾ.18): ಒಡಿಶಾದ ಆಸ್ಪತ್ರೆಯೊಂದರಲ್ಲಿ ವೈದ್ಯರು ರೋಗಿಗೆ ಕೋಲಿನಿಂದ ಥಳಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಧರ್ಮಗಢ ಪ್ರದೇಶದ ರೋಗಿಯೊಬ್ಬರು ಭಾನುವಾರ ರಾತ್ರಿ 10.30 ರ ಸುಮಾರಿಗೆ ಆಸ್ಪತ್ರೆಗೆ ಹೋಗಿದ್ದರು ಆದರೆ ಅಲ್ಲಿ ವೈದ್ಯರಿಲ್ಲದ ಕಾರಣ ಈತ ಇದನ್ನು ಪ್ರಶ್ನಿಸಿ ಜೋರಾಗಿ ಬೊಬ್ಬೆ ಹಾಕಿ ಗಲಾಟೆ ಮಾಡಲು ಶುರು ಮಾಡಿದ್ದಾನೆ. ಈ ವೇಳೆ ವೈದ್ಯರು ಹಾಗೂ ಆತನ ಮಧ್ಯೆ ವಾಗ್ವಾದ ಶುರುವಾಗಿ ಗಲಾಟೆ ಜೋರಾಗಿದೆ. 

ಒಡಿಶಾದ ಕಲಹಂಡಿ ಜಿಲ್ಲೆಯ ಧರಮ್‌ಗಢ ಉಪವಿಭಾಗೀಯ ಆಸ್ಪತ್ರೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ವೈದ್ಯರು ಯುವ ರೋಗಿಯೊಬ್ಬರಿಗೆ ಥಳಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯರ ಪ್ರಕಾರ, ಭಾನುವಾರ ರಾತ್ರಿ 10.30 ರ ಸುಮಾರಿಗೆ ಧರ್ಮಗಢ ಪ್ರದೇಶದ ರೋಗಿಯೊಬ್ಬರು ತೀವ್ರ ಹೊಟ್ಟೆ ನೋವಿನ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ವೈದ್ಯರು ಸಿಗದ ಕಾರಣ ಗಲಾಟೆ ಶುರು ಮಾಡಿದ್ದಾರೆ. 

Russia Ukraine War: ಉಕ್ರೇನಿಂದ ಬಂದ ವೈದ್ಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಶುರು  

ಈ ವೇಳೆ ಆಸ್ಪತ್ರೆಯಲ್ಲಿ ರೋಗಿ ಹಾಗೂ ವೈದ್ಯ ಸೈಲೇಶ್ ಕುಮಾರ್ ಡೋರಾ (Sailesh Kumar Dora) ನಡುವೆ ವಾಗ್ವಾದ ಶುರುವಾಗಿ ವೈದ್ಯ ಸೈಲೇಶ್ ಕುಮಾರ್ ಡೋರಾ ರೋಗಿಗೆ ಥಳಿಸಿದ್ದಾರೆ. 'ತೀವ್ರವಾದ ಹೊಟ್ಟೆ ನೋವಿನಿಂದ ನಾನು ಆಸ್ಪತ್ರೆಗೆ ಹೋದಾಗ, ನನ್ನನ್ನು ಪರೀಕ್ಷಿಸಲು ಯಾವುದೇ ವೈದ್ಯರು ಇರಲಿಲ್ಲ. ನಾನು ಭದ್ರತಾ ಸಿಬ್ಬಂದಿಯನ್ನು ಕೇಳಿದಾಗ, ವೈದ್ಯರು ವಾಶ್‌ರೂಮ್‌ಗೆ ಹೋಗಿದ್ದಾರೆ ಎಂದು ಹೇಳಿದರು. ಸ್ವಲ್ಪ ಸಮಯದ ನಂತರ,  ಯಾರೋ ವೈದ್ಯಕೀಯ ಸಿಬ್ಬಂದಿ ಎರಡು ಚುಚ್ಚುಮದ್ದನ್ನು ಚುಚ್ಚಿದರು ಮತ್ತು ನಾನು ಸ್ಟ್ರೆಚರ್‌ನಲ್ಲಿದ್ದೆ. ಆ ವೇಳೆ ಏಕಾಏಕಿ ನನ್ನ ಬಳಿ ಬಂದ ವೈದ್ಯರು ನನಗೆ ಥಳಿಸಿದ್ದಾರೆ' ಎಂದು ವೈದ್ಯರಿಂದ ಹಲ್ಲೆಗೊಳಗಾದ ಮುಖೇಶ್ ನಾಯ್ಕ್ (Mukesh Naik) ಆರೋಪಿಸಿದ್ದಾರೆ.

Tumakuru: ವೈದ್ಯರ ನಿರ್ಲಕ್ಷ್ಯಕ್ಕೆ ಕಾರಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ..!
 

ಇದಾದ ಬಳಿಕ ವೈದ್ಯರ ಬಂಧನಕ್ಕೆ ಆಗ್ರಹಿಸಿ ರೋಗಿ ಹಾಗೂ ಸ್ಥಳೀಯರು ಸೋಮವಾರ ರಸ್ತೆ ತಡೆ ನಡೆಸಿದ್ದರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವೈದ್ಯರು ಮತ್ತು ರೋಗಿಯ ಕಡೆಯಿಂದ ಎರಡು ಬೇರೆ ಬೇರೆ ದೂರುಗಳು ದಾಖಲಾಗಿವೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಧರ್ಮಗಢ್ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಧೀರಜ್ ಕುಮಾರ್ ಚೋಪ್ದಾರ್ ನಾವು ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ವೈದ್ಯರನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. 

ತಮ್ಮ ಉತ್ಪನ್ನಗಳ ಮಾರಾಟ ಹೆಚ್ಚಿಸಲು ವೈದ್ಯಕೀಯ ಚಿಕಿತ್ಸಾ ಉಪಕರಣಗಳ ತಯಾರಕರು, ವೈದ್ಯರಿಗೆ ಯಾವುದೇ ರೀತಿಯ ಉಡುಗೊರೆ ನೀಡುವುದನ್ನು ನಿಷೇಧಿಸುವ ಹೊಸ ಕರಡು ನೀತಿ ಸಂಹಿತೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಸದ್ಯಕ್ಕೆ ಈ ನೀತಿ ಸಂಹಿತೆಯನ್ನು ಕಂಪನಿಗಳು ಸ್ವಯಂ ಪಾಲಿಸಬೇಕು. ಒಂದು ವೇಳೆ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸದೆ ಹೋದಲ್ಲಿ ಮುಂದೆ ಅದನ್ನು ಶಾಸನಾತ್ಮಕ ಕಾಯ್ದೆ ರೂಪದಲ್ಲಿ ಜಾರಿಗೆ ತಂದು ಶಿಕ್ಷೆಯ ಅವಕಾಶ ಕಲ್ಪಿಸುವುದಾಗಿ ಎಚ್ಚರಿಸಿದೆ.

Latest Videos
Follow Us:
Download App:
  • android
  • ios