Asianet Suvarna News Asianet Suvarna News

Watch: 'ಮೋದಿ ಮತ್ತೆ ಪಿಎಂ ಆದ್ರೆ, ಚಿಕನ್‌-ಮಟನ್‌ ತಿನ್ನೋದು ಬ್ಯಾನ್‌ ಮಾಡ್ತಾರೆ..' ತಮಿಳುನಾಡಿನಲ್ಲಿ ಡಿಎಂಕೆ ಪ್ರಚಾರ

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕರೊಬ್ಬರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೇನಾದರೂ ಮೋದಿ ಮತ್ತೊಮ್ಮೆ ಆಯ್ಕೆಯಾದಲ್ಲಿ ನಮ್ಮ ಇಷ್ಟದ ಆಹಾರ ತಿನ್ನೋಕು ಅವರು ಬಿಡೋದಿಲ್ಲ ಎಂದು ಪ್ರಚಾರ ಮಾಡಿದ್ದಾರೆ.

DMK outlandish poll campaign  If you pick Modi eating mutton and chicken will be banned san
Author
First Published Apr 2, 2024, 2:05 PM IST

ಚೆನ್ನೈ (ಮಾ.2): ಚುನಾವಣಾ ವರ್ಷದಲ್ಲಿ ರಾಜಕೀಯ ನಾಯಕರ ಕೆಸರೆರಚಾಟ ಬಹಳ ಕಾಮನ್. ಆದರೆ, ಒಮ್ಮೊಮ್ಮೆ ರಾಜಕೀಯ ನಾಯಕರು ಆಡುವ ಮಾತು ತೀರಾ ಬಾಲಿಶವೆನಿಸಿಬಿಡುತ್ತದೆ. ಇಂಥದ್ದೇ ಮಾತುಗಳನ್ನು ಡಿಎಂಕೆ ನಾಯಕರೊಬ್ಬರು ಆಡಿದ್ದು, ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಡಿಎಂಕೆ ಪಕ್ಷದ ನಾಯಕರೊಬ್ಬರು, ಹಾಗೇನಾದರೂ ಮೋದಿ ಮತ್ತೊಮ್ಮೆ ಆಯ್ಕೆಯಾದಲ್ಲಿ ನಿಮ್ಮ ಇಷ್ಟದ ಆಹಾರ ತಿನ್ನೋಕು ಬಿಡೋದಿಲ್ಲ ಎಂದು ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ಪ್ರಚಾರದ ವೇಳೆ ಮಾತನಾಡಿದ ಡಿಎಂಕೆ ನಾಯಕರೊಬ್ಬರು, ಮೋದಿ ಮತ್ತೊಮ್ಮೆ ಆಯ್ಕೆಯಾದಲ್ಲಿ ನೀವು ಮೊಸರನ್ನ ಸಾಂಬಾರ್‌ ಮಾತ್ರವೇ ತಿನ್ನಬಹುದು. ಮಟನ್‌, ಚಿಕನ್‌, ಗೋಮಾಂಸ ಹಾಗೂ ಇತರ ಯಾವುದೇ ಮಾಂಸವನ್ನು ತಿನ್ನೋಕೆ ಬ್ಯಾನ್‌ ಮಾಡಲಾಗುತ್ತದೆ ಎಂದು ಅಪಪ್ರಚಾರ ಮಾಡಿದ್ದಾರರೆ. ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಯ ಸಂಭ್ರಮ, ಚುನಾವಣೆ ಆರಂಭಗೊಳ್ಳುವ ಮೊದಲ ದಿನವೇ ಮುಕ್ತಾಯಗೊಳ್ಳಲಿದೆ. ತಮಿಳುನಾಡಿನ ಎಲ್ಲಾ 39 ಸ್ಥಾನಗಳಿಗೆ ಏಪ್ರಿಲ್‌ 19 ರಂದು ಮತದಾನ ನಡೆಯಲಿದೆ.

ಸಮರ್ಥ ಚುನಾವಣಾ ಪ್ರಕ್ರಿಯೆಗೆ ಹೆಸರುವಾಸಿಯಾಗಿರುವ ತಮಿಳುನಾಡಿನಲ್ಲಿ, 2019ರ ಚುನಾವಣೆಯಲ್ಲೀ ತಮಿಳುನಾಡಿನ ಎಲ್ಲಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಒಂದೇ ಹಂತದಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಕ್ಕೂ ಚುನಾವಣೆ ನಡೆಯಲಿರುವ ದೇಶದ ದೊಡ್ಡ ರಾಜ್ಯ ತಮಿಳುನಾಡು ಎನಿಸಿಕೊಂಡಿದೆ. 

ತಮಿಳ್ನಾಡು ಮೀನುಗಾರರ ಹಿತ ಬಲಿ ಕೊಟ್ಟಿದ್ದು ಇಂದಿರಾ ಗಾಂಧಿ, ಡಿಎಂಕೆ: ಪ್ರಧಾನಿ ಮೋದಿ ಆರೋಪ

ಭಾರತದ ದಕ್ಷಿಣದ ರಾಜ್ಯವಾದ ತಮಿಳುನಾಡು, ಒಟ್ಟು 39 ಸ್ಥಾನಗಳೊಂದಿಗೆ ಐದನೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಈ ಪೈಕಿ 32 ಸೀಟುಗಳು ಮೀಸಲು ರಹಿತವಾಗಿದ್ದು, ಏಳು ಎಸ್‌ಸಿ ಅಭ್ಯರ್ಥಿಗಳಿಗೆ ಮೀಸಲಾಗಿದೆ. 2019 ರ ಚುನಾವಣೆಯಲ್ಲಿ, ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟವು 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದು, ರಾಷ್ಟ್ರದ ಅತಿದೊಡ್ಡ ಪಕ್ಷಕ್ಕೆ ಕೇವಲ ಒಂದು ಸ್ಥಾನವನ್ನು ಮಾತ್ರ ಬಿಟ್ಟುಕೊಟ್ಟು ಭರ್ಜರಿ ಜಯ ಸಾಧಿಸಿತು.

ಕುರಾನ್‌, ಹದೀಸ್‌ ಓದಿದ್ದೇನೆ, ತುಷ್ಟೀಕರಣಕ್ಕಾಗಿ ಟೋಪಿ ಧರಿಸಲಾರೆ: ಅಣ್ಣಾಮಲೈ

Follow Us:
Download App:
  • android
  • ios