ಉತ್ತರ ಪ್ರದೇಶ(ನ.08): ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು  ಈ ಬಾರಿಯ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿದೆ. ಕೊರೋನಾ ವೈರಸ್ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದರೆ, ಮತ್ತೆ ಹಲವರು ವಿರೋಧಿಸಿದ್ದಾರೆ.  ಇದರ ನಡುವೆ ಉತ್ತರ ಪ್ರದೇಶದ ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹರಾಜ್ ಖಾರವಾದ ಹೇಳಿಕೆ ನೀಡಿದ್ದಾರೆ.

ಸಿಎಂ ಮಹತ್ವದ ಘೋಷಣೆ: ಈ ಬಾರಿ ದೀಪಾವಳಿ ಪಟಾಕಿ ಠುಸ್..!

ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸಲು ನಾವು ಸಿದ್ದರಿದ್ದೇವೆ, ಆದರೆ ಬಕ್ರೀದ್ ಹಬ್ಬಕ್ಕೆ ಕುರಿ ಬಲಿ ನಿಲ್ಲಿಸಿದರೆ ಮಾತ್ರ ಸಾಧ್ಯ ಎಂದು ಸಾಕ್ಷಿ ಮಹರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಕೊರೋನಾ ವೈರಸ್ ತಗುಲಿರುವ ಕಾರಣ ಐಸೋಲೇಶನ್‌ನಲ್ಲಿರುವ ಸಾಕ್ಷಿ ಮಹರಾಜ್ ಬರಹಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.

ಪಟಾಕಿ ನಿಷೇಧ ಬೇಡ: ವಿವಿಧ ರಾಜ್ಯಗಳಿಗೆ ಸಿಎಂ ಮನವಿ!

ಯಾವ ವರ್ಷ ಬಕ್ರೀದ್ ಹಬ್ಬವನ್ನು ಕುರಿ ಬಲಿ ಇಲ್ಲದೆ ಆಚರಿಸುತ್ತಾರೋ ಅದೇ ವರ್ಷ ದೀಪಾವಳಿ ಹಬ್ಬವನ್ನು ಪಟಾಕಿ ಇಲ್ಲದೆ ಆಚರಿಸುತ್ತೇವೆ ಎಂದಿದ್ದಾರೆ. ಸಾಕ್ಷಿ ಮಹರಾಜ್ ಹೇಳಿಕೆಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸಂಬಂಧವಿಲ್ಲದ  ಹೇಳಿಕೆ. ಇದಕ್ಕೆ ಮಹತ್ವ ನೀಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.

ಬಿಜೆಪಿ ನಾಯಕ ಸಾಕ್ಷಿ ಮಹರಾಜ್ ದೀಪಾವಳಿ ಹಬ್ಬದ ಪೋಸ್ಟ್‌ಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ವೈರಸ್ ತಗುಲಿರುವ ಪೋಸ್ಟ್ ಹಾಕಿದ್ದರು. ಬಳಿಕ ವಿಶ್ರಾಂತಿಯಲ್ಲಿದ್ದ ಸಾಕ್ಷಿ ಮಹಾರಾಜ್ ಇದೀಗ ಖಾರವಾದ ಪೋಸ್ಟ್ ಹಾಕಿ ಸಂಚಲನ ಮೂಡಿಸಿದ್ದಾರೆ.