ಚೆನ್ನೈ(ನ.07): ದೇಶಾದ್ಯಂತ ಹಲವು ರಾಜ್ಯಗಳು ಪಟಾಕಿ ನಿಷೇಧಕ್ಕೆ ಮುಂದಾದ ಬೆನ್ನಲ್ಲೇ, ಇಂಥ ಕ್ರಮ ಕೈಗೊಳ್ಳದಂತೆ, ಪಟಾಕಿ ಉತ್ಪಾದನೆಯಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿರುವ ತಮಿಳುನಾಡು ಸಿಎಂ ಪಳನಿಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

ಪಟಾಕಿಗಳ ಮೇಲಿನ ನಿಷೇಧ ಕ್ರಮವು ಪಟಾಕಿ ಉದ್ಯಮದ 8 ಲಕ್ಷ ಕಾರ್ಮಿಕರ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಈ ಕ್ರಮವನ್ನು ಹಿಂಪಡೆಯುವಂತೆ ರಾಜಸ್ಥಾನ ಮತ್ತು ಒಡಿಶಾ ಸೇರಿದಂತೆ ಇನ್ನಿತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಕೊರೋನಾ ಸೋಂಕಿತರ ಬಾಧೆ ಹೆಚ್ಚಿಸಬಹುದಾದ ವಾಯು ಮಾಲಿನ್ಯ ನಿಯಂತ್ರಣಕ್ಕೆ ರಾಜಸ್ಥಾನ, ಒಡಿಶಾ ಮತ್ತು ದೆಹಲಿ ಸೇರಿದಂತೆ ಇನ್ನಿತರ ರಾಜ್ಯಗಳು ಪಟಾಕಿಗಳ ಮೇಲೆ ನಿಷೇಧ ಹೇರಿವೆ.