ನವದೆಹಲಿ(ಫೆ.21): ಭಾರತ-ಚೀನಾ ನಡುವಿನ ಗಡಿ ಸಮಸ್ಯೆ, ಸೇನಾ ಹಿಂತೆಗೆತ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಪೂರ್ವ ಲಡಾಖ್‌ನಲ್ಲಿ ಸೇನೆ ಹಿಂತೆಗೆತ ಕಾರ್ಯ ಸಂಪೂರ್ಣಗೊಂಡಿದೆ. ಸತತ ಮಾತುಕತೆಗಳ ಮೂಲಕ ಸಮಸ್ಯೆ ಬಗೆ ಹರಿಸುವಲ್ಲಿ ಭಾರತ ಯಶಸ್ವಯಾಗಿದೆ ಎಂದರು.

9 ತಿಂಗಳ ಬಳಿಕ ಗಲ್ವಾನ್ ಘರ್ಷಣೆ ಸಾವು-ನೋವು ಒಪ್ಪಿಕೊಂಡ ಚೀನಾ!

ದೇಶದ ಒಂದಿಂಚು ಜಾಗ ಬಿಡುವುದಿಲ್ಲ. ನವ ಭಾರತ ಯಾವುದೇ ಆಕ್ರಮಣವನ್ನು ಕೈಕಟ್ಟಿ ಕೂತು ನೋಡುವುದಿಲ್ಲ. ಗಡಿಯಲ್ಲಿ ಯಾವುದೇ ರೀತಿಯ ಪ್ರಚೋದನೆಯನ್ನೂ ಸಹಿಸುವುದಿಲ್ಲ. ಈ ರೀತಿಯ ಯಾವುದೇ ನಿರ್ಧಾರ ಎದುರಾಳಿಗಳಿಂದ ಆದರೆ, ಯಾವುದೇ ಬೆಲೆ ನೀಡಿ ತಕ್ಕ ಶಾಸ್ತಿ ನೀಡಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಪ್ಯಾಂಗಾಂಗ್ ಲೇಕ್‌ನಿಂದ ಚೀನಾ ಸೇನೆ ಹಿಂದಕ್ಕೆ; ಜಾಗ ಖಾಲಿ ಮಾಡುತ್ತಿರುವ ವಿಡಿಯೋ ವೈರಲ್!

ಭಾರತೀಯ ಸೇನೆ ಶಕ್ತಿ ಹಾಗೂ ಯೋಧರನ್ನು ಅವಮಾನಿಸುವ ಕೆಲಸವನ್ನು ಕಾಂಗ್ರೆಸ್ ಸದಾ ಮಾಡುತ್ತಿದೆ. ಸೇನೆಯ ಸೂಕ್ಷ್ಮತೆಯನ್ನು ಹಾಗೂ ವೀರ ಯೋಧರ ತ್ಯಾಗವನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಪ್ಯಾಂಗಾಂಗ್ ಸರೋವದಲ್ಲಿ ಚೀನಾ ಸೇನೆ ತನ್ನು ಸೇನಾ ನೆಲೆ ನಾಶಪಡಿಸಿ, ಶಸ್ತಾಸ್ತ್ರ, ಬಂಕರ್ ಜೊತೆ ಹಿಂದಕ್ಕೆ ಸರಿಯುವ ವಿಡಿಯೋ ಭಾರಿ ವೈರಲ್ ಆಗಿತ್ತು. ಉಭಯ ದೇಶಗಳು ಮಾತುಕತೆ ಮೂಲಕ ಸೇನೆ ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿತ್ತು.

ಬೆದರಿದ ಚೀನಾದಿಂದ ಕುತಂತ್ರ; ಗಲ್ವಾನ್ ಘರ್ಷಣೆ ವಿಡಿಯೋ ಬಿಡುಗಡೆ ಮಾಡಿ ಪೇಚಿಗೆ ಸಿಲುಕಿದ PLA!

ಕಳೆದ ಜೂನ್ ತಿಂಗಳಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ಘರ್ಷಣೆಯಲ್ಲಿ ನಷ್ಟವೇ ಸಂಭವಿಸಿಲ್ಲ ಎಂದಿದ್ದ ಚೀನಾ, ಇತ್ತೀಚೆಗೆ ಐವರು ಸೈನಿಕರು ಸಾವನ್ನಪ್ಪಿರುವುದನ್ನು ಒಪ್ಪಿಕೊಂಡಿತ್ತು. ಈ ಘರ್ಷಣೆ ಬಳಿಕ ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷ ಮತ್ತಷ್ಟು ಹೆಚ್ಚಾಗಿತ್ತು.