Asianet Suvarna News Asianet Suvarna News

ರಾಮಸೇತು ಇತ್ತು ಎನ್ನಲಾಗದು, ಕುರುಹು ಇದೆ: ಕೇಂದ್ರ ಸರ್ಕಾರ; ಕಾಂಗ್ರೆಸ್‌ ಆಕ್ರೋಶ

ರಾಮಸೇತು ಇತ್ತು ಎನ್ನಲಾಗದು, ಆದರೆ ಕುರುಹು ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಜ್ಯಸಭೆಯಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಈ ಹಿನ್ನೆಲೆ ಸರ್ಕಾರದ ಹೇಳಿಕೆಗೆ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

difficult to say real form of ram setu is present but there are indications government in parliament ash
Author
First Published Dec 25, 2022, 9:18 AM IST

ನವದೆಹಲಿ: ‘ರಾಮೇಶ್ವರದಿಂದ (Rameshwaram) ಶ್ರೀಲಂಕಾವರೆಗೆ (Sri Lanka) ಚಾಚಿರುವ ಹಿಂದೂ ಮಹಾಸಾಗರದ (Indian Ocean) ಮಧ್ಯೆ ನಿಜವಾಗಿಯೂ ರಾಮಸೇತುವೆ (Ram Setu) ಇತ್ತು ಎಂದು ಹೇಳಲಾಗದು. ಆದರೆ ಅದರ ಕುರುಹುಗಳು ಕಂಡುಬರುತ್ತವೆ’ ಎಂದು ಕೇಂದ್ರ ಸರ್ಕಾರ (Central Government) ಹೇಳಿದೆ. ಆದರೆ ಸರ್ಕಾರದ ಈ ಹೇಳಿಕೆ ರಾಜ್ಯಸಭೆಯಲ್ಲಿ (Rajya Sabha) ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.

‘ರಾಮಸೇತು ಕುರಿತ ವೈಜ್ಞಾನಿಕ ಸಂಶೋಧನೆಗೆ ಕೇಂದ್ರ ಕ್ರಮ ಕೈಗೊಂಡಿದೆಯೇ?’ ಎಂಬ ಸಂಸದ ಕಾರ್ತಿಕೇಯ ಶರ್ಮಾ (Kartikeya Sharma) ಅವರ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರ ನೀಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ (Jitendra Singh), ‘ಈ ಬಗ್ಗೆ ಖಚಿತಪಡಿಸಲು ನಮಗೆ ಕೆಲವೊಂದು ಮಿತಿಗಳಿವೆ. ಕಾರಣ ರಾಮಸೇತುವಿನ ಇತಿಹಾಸ 18,000 ವರ್ಷಗಳಿಗಿಂತ ಹಳೆಯದು ಮತ್ತು ಸೇತುವೆ (Bridge) 56 ಕಿ.ಮೀನಷ್ಟು ಉದ್ದವಿದೆ. ಆದರೂ ಲಭ್ಯವಿರುವ ಬಾಹ್ಯಾಕಾಶ ತಂತ್ರಜ್ಞಾನದ (Satellite Technology) ಮೂಲಕ ನಾವು ಕೆಲವು ಕಲ್ಲು, ದ್ವೀಪ, ಮತ್ತು ಸುಣ್ಣದಕಲ್ಲು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದರು.

ಇದನ್ನು ಓದಿ: ಕೇಂದ್ರದಿಂದ ನ್ಯೂ ಇಯರ್ ಗಿಫ್ಟ್: ರಾಮಸೇತುಗೆ ರೈಲು!

‘ಆದರೆ ಹೀಗೆ ಸಿಕ್ಕ ಅವಶೇಷಗಳು ಖಚಿತವಾಗಿ ರಾಮಸೇತುವಿಗೆ ಸಂಬಂಧಿಸಿದ್ದು ಎಂದು ಖಚಿತವಾಗಿ ಹೇಳಲಾಗದು. ಆದಾಗ್ಯೂ ಅಂಥದ್ದೊಂದು ವಾದಕ್ಕೆ ಪೂರಕವಾದ ಕೆಲ ಅಂಶಗಳು ಇವೆ ಎಂದು ಹೇಳಬಹುದು. ನಾನು ಏನು ಹೇಳಲು ಬಯಸುತ್ತೇನೆ ಎಂದರೆ ಆ ಸ್ಥಳದಲ್ಲಿ ಇತ್ತು ಎನ್ನಲಾದ ಸೇತುವೆಯನ್ನು ಖಚಿತವಾಗಿ ಇದೆ ಎಂದೇ ಹೇಳಲಾಗದು, ಆದರೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅಂಥದ್ದೊಂದು ನಿರ್ಮಾಣ ಅಲ್ಲಿ ಇತ್ತು ಎಂಬ ಸುಳಿವಂತೂ ಇದೆ’ ಎಂದು ಹೇಳಿದರು.

ಇನ್ನು, ಪುರಾತನ ನಗರವಾದ ದ್ವಾರಕಾ ಮತ್ತು ಅಂತಹ ಪ್ರಕರಣಗಳನ್ನು ತನಿಖೆ ಮಾಡಲು ಕೆಂದ್ರ ಸರ್ಕಾರ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದೂ ಅವರು ಹೇಳಿದರು.

ಇದನ್ನು ಓದಿ: ರಾಮಾಯಣಕ್ಕಿಂತ ಹಳೆಯದೇ ರಾಮಸೇತು..?

ಕಾಂಗ್ರೆಸ್‌ ಆಕ್ಷೇಪ:
ಸರ್ಕಾರದ ಹೇಳಿಕೆಗೆ ಆಕ್ಷೇಪಿಸಿರುವ ಕಾಂಗ್ರೆಸ್‌ನ ಪವನ್‌ ಖೇರಾ (Pawan Khera) ‘ರಾಮಸೇತುವಿನ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿದೆ’ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಸಂಸದ ರಾಜ್ಯವರ್ಧನ್‌ ರಾಥೋಡ್‌ ‘ಕಾಂಗ್ರೆಸ್‌ ಅಧಿಕಾರದಲ್ಲಿದ್ದ ವೇಳೆ ರಾಮಸೇತುವಿನ ಇರುವಿಕೆಯನ್ನೇ ತಳ್ಳಿಹಾಕಿತ್ತು. ಹೀಗಾಗಿ ತಮ್ಮ ಮುಖ ಮುಚ್ಚಿಕೊಳ್ಳಲು ವಾಸ್ತವಾಂಶಗಳನ್ನು ತಿರುಚುವ ಬದಲು ರಾಮಸೇತು ಮತ್ತು ಸಮುದ್ರದೊಳಗೆ ದ್ವಾರಕಾ ನಗರಿಯ ಅವಶೇಷ ಪತ್ತೆ ಮಾಡಲು ಮೋದಿ ಸರ್ಕಾರ ಎಷ್ಟು ಕೆಲಸ ಮಾಡಿದೆ ಎಂಬುದನ್ನು ತಿಳಿಯಬೇಕು’ ಎಂದು ತಿರುಗೇಟು ನೀಡಿದ್ದಾರೆ.

ಪ್ರಾಚೀನ ಭಾರತೀಯ ಸಂಸ್ಕೃತ ಮಹಾಕಾವ್ಯ ರಾಮಾಯಣದಲ್ಲಿ, ರಾಮಸೇತುವನ್ನು ಭಗವಾನ್ ರಾಮ ಮತ್ತು ವಾನರ ಸೈನ್ಯದಿಂದ ನಿರ್ಮಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ, ಇದು ದೊಡ್ಡ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.

ಇದನ್ನೂ ಓದಿ: ರಾಮಸೇತುವಿಗೆ ಯಾವುದೇ ಹಾನಿಯುಂಟು ಮಾಡುವುದಿಲ್ಲ : ಕೇಂದ್ರ

Follow Us:
Download App:
  • android
  • ios